ಗಿಲ್ಗಿಟ್-ಬಾಲ್ಟಿಸ್ತಾನ್ ವಿಷಯವಾಗಿ ಪಾಕಿಸ್ತಾನವನ್ನು ಖಂಡಿಸಿದ ಬ್ರಿಟನ್ ಸಂಸತ್
ಗಿಲ್ಗಿಟ್-ಬಾಲ್ಟಿಸ್ತಾನ್ ನ್ನು ತನ್ನ ಐದನೇ ಗಡಿನಾಡು ಎಂದು ಘೋಷಿಸಿಕೊಂಡಿರುವ ಪಾಕಿಸ್ತಾನದ ಕ್ರಮವನ್ನು ಬ್ರಿಟನ್ ಸಂಸತ್ ಖಂಡಿಸಿದ್ದು, ಪಾಕಿಸ್ತಾನದ ವಿರುದ್ಧ ನಿರ್ಣಯವನ್ನೂ ಅಂಗೀಕರಿಸಿದೆ.

Published On :
ಲಂಡನ್: ಗಿಲ್ಗಿಟ್-ಬಾಲ್ಟಿಸ್ತಾನ್ ನ್ನು ತನ್ನ ಐದನೇ ಗಡಿನಾಡು ಎಂದು ಘೋಷಿಸಿಕೊಂಡಿರುವ ಪಾಕಿಸ್ತಾನದ ಕ್ರಮವನ್ನು ಬ್ರಿಟನ್ ಸಂಸತ್ ಖಂಡಿಸಿದ್ದು, ಪಾಕಿಸ್ತಾನದ ವಿರುದ್ಧ ನಿರ್ಣಯವನ್ನೂ ಅಂಗೀಕರಿಸಿದೆ.
ಸಂಸತ್ ನಲ್ಲಿ ಮಂಡಿಸಲಾದ ನಿರ್ಣಯದಲ್ಲಿ ಗಿಲ್ಗಿಟ್- ಬಾಲ್ಟಿಸ್ತಾನ್ ನ್ನು ಜಮ್ಮು-ಕಾಶ್ಮೀರದ ಕಾನೂನಾತ್ಮಕ-ಸಂವಿಧಾನಾತ್ಮಕ ಭಾಗ ಎಂದು ಬ್ರಿಟನ್ ಹೇಳಿದ್ದು, 1947 ರಲ್ಲಿ ಪಾಕಿಸ್ತಾನ ಅಕ್ರಮವಾಗಿ ಅತಿಕ್ರಮಿಸಿದೆ ಎಂದು ಹೇಳಿದೆ. ಭಾರತದ ಅವಿಭಾಜ್ಯ ಪ್ರದೇಶವನ್ನು ಪಾಕಿಸ್ತಾನ ಆಕ್ರಮಣ ಮಾಡಿದ್ದು ಅಲ್ಲಿನ ಜನರಿಗೆ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಿದೆ ಎಂದು ಮಾ.23 ರಂದು ಮಂಡಿಸಲಾಗಿರುವ ಈ ನಿರ್ಣಯದಲ್ಲಿ ಬ್ರಿಟನ್ ಹೇಳಿದೆ. ಬ್ರಿಟನ್ ನ ಲೇಬರ್ ಪಕ್ಷದ ಮುಖಂಡ ಬಾಬ್ ಬ್ಲಾಕ್ಮನ್ ನಿರ್ಣಯವನ್ನು ಮಂಡಿಸಿದ್ದು, ಭಾರತದ ಪ್ರದೇಶವನ್ನು ಕಸಿದುಕೊಳ್ಳುವುದೂ ಅಲ್ಲದೇ ಪಾಕಿಸ್ತಾನ ಅಲ್ಲಿನ ಸ್ಥಳೀಯ ಜನಸಂಖ್ಯೆಯನ್ನೂ ಬದಲಾವಣೆ ಮಾಡಿದೆ. ಜೊತೆಗೆ ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ನ ಒತ್ತಾಯಪೂರ್ವಕ ನಿರ್ಮಾಣ ವಿವಾದಿತ ಪ್ರದೇಶದಲ್ಲಿ ಮತ್ತಷ್ಟು ಸಮಸ್ಯೆ ಉಂಟು ಮಾಡಿದೆ ಎಂದು ಬ್ರಿಟನ್ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Pakistanಪಾಕಿಸ್ತಾನJammu and Kashmirಜಮ್ಮು-ಕಾಶ್ಮೀರGilgit-BaltistanUK Parliamentಬ್ರಿಟನ್ ಸಂಸತ್ಗಿಲ್ಗಿಟ್-ಬಾಲ್ಟಿಸ್ತಾನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


