ಒಬಾಮ ಕೇರ್ ರದ್ದತಿಗೆ ಅಮೆರಿಕ ಜನಪ್ರತಿನಿಧಿಗಳ ಸದನ ನಕಾರ: ಡೊನಾಲ್ಡ್ ಟ್ರಂಪ್ ಗೆ ತೀವ್ರ ಹಿನ್ನಡೆ
ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಆಡಳಿತಾವಧಿಯಲ್ಲಿ ಪ್ರಾರಂಭಿಸಿದ್ದ ಒಬಾಮ ಕೇರ್ ಯೋಜನೆಯನ್ನು ರದ್ದುಗೊಳಿಸಲು ಅಮೆರಿಕಾದ ಜನಪ್ರತಿನಿಧಿಗಳ ಸದನ ನಿರಾಕರಿಸಿದೆ.

Published On :
ವಾಷಿಂಗ್ ಟನ್: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಆಡಳಿತಾವಧಿಯಲ್ಲಿ ಪ್ರಾರಂಭಿಸಿದ್ದ ಒಬಾಮ ಕೇರ್ ಯೋಜನೆಯನ್ನು ರದ್ದುಗೊಳಿಸಲು ಅಮೆರಿಕಾದ ಜನಪ್ರತಿನಿಧಿಗಳ ಸದನ( ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್) ನಿರಾಕರಿಸಿದ್ದು, ಮಸೂದೆ ರದ್ದತಿಗೆ ಅಗತ್ಯವಿರುವ ಬಹುಮತಗಳಿಸಲು ವಿಫಲವಾಗಿರುವ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ.
ಲೋಕಸಭೆಯ ಮಾದರಿಯಲ್ಲಿರುವ ಅಮೆರಿಕಾದ ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್ ನಲ್ಲಿ 435 ಸದಸ್ಯರಿದ್ದು, ಡೊನಾಲ್ಡ್ ಟ್ರಂಪ್ ಪ್ರತಿನಿಧಿಸುವ ರಿಪಬ್ಲಿಕನ್ ಪಕ್ಷ 235 ಸದಸ್ಯರ ಸರಳ ಬಹುಮತ ಹೊಂದಿದೆ. ಆದರೆ ರಿಪಬ್ಲಿಕನ್ ಪಕ್ಷದ ಕೆಲವು ಸದಸ್ಯರೇ ಮಸೂದೆ ರದ್ದತಿಗೆ ಅಗತ್ಯವಿದ್ದ 215 ಮತಗಳನ್ನು ಗಳಿಸಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್ ನ ಸಭಾಧ್ಯಕ್ಷರು ಒಬಾಮ ಹೆಲ್ತ್ ಕೇರ್ ಮಸೂದೆಗೆ ಪರ್ಯಾಯವಾಗಿ ರೂಪಿಸಲಾಗಿದ್ದ ಹೊಸ ಮಸೂದೆಯನ್ನು ವಾಪಸ್ ಪಡೆದಿದ್ದಾರೆ. ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್ ನಲ್ಲಿ ಹೊಸ ಮಸೂದೆ ಅಂಗೀಕಾರವಾಗದೇ ಇರುವುದು ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಉಂಟಾದ ದೊಡ್ಡ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


