ವಿದೇಶ

ಪ್ಯಾರಿಸ್ ವಿಮಾನನಿಲ್ದಾಣದಲ್ಲಿ ಓರ್ವನ ಹತ್ಯೆ; ಗೊಂದಲಮಯ ವಾತಾವರಣ

ಪ್ಯಾರಿಸ್ ನ ಓರಲಿ ವಿಮಾನನಿಲ್ದಾಣದಲ್ಲಿ ಯೋಧರ ಗನ್ ಕಸಿಯಲು ಪ್ರಯತ್ನಿಸಿದ ವ್ಯಕ್ತಿಯೊಬ್ಬನನ್ನು ಶನಿವಾರ ಬೆಳಗ್ಗೆ ಭದ್ರತಾ ಪಡೆಗಳು ಗುಂಡು ಹಾರಿಸಿ ಹತ್ಯೆ ಮಾಡಿವೆ ಎಂದು ಮಾಧ್ಯಮವೊಂದು

ಪ್ಯಾರಿಸ್ ವಿಮಾನನಿಲ್ದಾಣದಲ್ಲಿ ಓರ್ವನ ಹತ್ಯೆ; ಗೊಂದಲಮಯ ವಾತಾವರಣ
ಸಾಂದರ್ಭಿಕ ಚಿತ್ರ
Published On :
ಪ್ಯಾರಿಸ್: ಪ್ಯಾರಿಸ್ ನ ಓರಲಿ ವಿಮಾನನಿಲ್ದಾಣದಲ್ಲಿ ಯೋಧರ ಗನ್ ಕಸಿಯಲು ಪ್ರಯತ್ನಿಸಿದ ವ್ಯಕ್ತಿಯೊಬ್ಬನನ್ನು ಶನಿವಾರ ಬೆಳಗ್ಗೆ ಭದ್ರತಾ ಪಡೆಗಳು ಗುಂಡು ಹಾರಿಸಿ ಹತ್ಯೆ ಮಾಡಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 
ಯೋಧ ಆ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ ನಂತರ ಅವನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ನಂತರ ವಿಮಾನನಿಲ್ದಾಣದಲ್ಲಿ ಅಡಗಿರಬಹುದಾದ ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ಶೋಧಿಸಲು ಎಲ್ಲರನ್ನು ಹೊರಕಳಿಸಿ ಖಾಲಿ ಮಾಡಲಾಗಿದೆ ಎಂದು ಮಿರರ್ ವರದಿ ಮಾಡಿದೆ. 
ನಂತರ ಆ ವ್ಯಕ್ತಿ ಮೃತಪಟ್ಟಿರುವುದಾಗಿ ಘೋಷಿಯಲಾಯಿತು ಎಂದು ಫ್ರಾನ್ಸ್ ನ ಬಿ ಎಫ್ ಎಂ ಟಿವಿ ವರದಿ ಮಾಡಿದೆ. 
ವಿಮಾನ ನಿಲ್ದಾಣದ ಭಾಗಗಳನ್ನು ಖಾಲಿ ಮಾಡಿಸಿ, ವಿಮಾನಗಳಲ್ಲಿದ್ದವರನ್ನು ಕೆಳಗಿಳಿಯುವುದರಿಂದ ತಡೆಯಲಾಯಿತು ಎಂದು ಗುಂಡಿನ ಶಬ್ದವನ್ನು ಕೇಳಿದ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. 
ಶನಿವಾರ ಬೆಳಕ್ಕೆ ದಕ್ಷಿಣ ಟರ್ಮಿನಲ್ ನಲ್ಲಿ ಗುಂಡಿನ ಶಬ್ದ ಕೇಳಿದ್ದಾಗಿಯೂ ಹಾಗೆಯೇ ಪೊಲೀಸರು ಭದ್ರತಾ ಕಾರ್ಯಾಚರಣೆ ನಡೆಸಿ ಎಲ್ಲರನು ಹೊರಕಳಿಸುತ್ತಿದ್ದುದನ್ನು ನೋಡಿದ್ದಾಗಿಯೂ ಕೆಲವು ಪ್ರಯಾಣಿಕರು ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ. 
"ಪೊಲೀಸ್ ಕಾರ್ಯಾಚರಣೆ ಜಾರಿಯಲ್ಲಿದೆ. ಭದ್ರತಾ ಗಡಿಯನ್ನು ಯಾರು ದಾಟಬೇಡಿ ಮತ್ತು ಸೂಚನೆಗಳನ್ನು ಅನುಸರಿಸಿ" ಎಂದು ಪೊಲೀಸ್ ವಕ್ತಾರ ಟ್ವೀಟ್ ಮಾಡಿದ್ದಾರೆ. 
ದಿನದ ಕೊನೆಯ ಭಾಗದಲ್ಲಿ ಪ್ರಯಾಣ ಮಾಡಬೇಕಿದ್ದವರು ವಿಮಾನ ನಿಲ್ದಾಣಕ್ಕೆ ಬರದಂತೆ ಸೂಚಿಸಲಾಗಿದೆ. 
೨೦ ವರ್ಷದ ಈಜಿಪ್ಟ್ ಮೂಲದ ವ್ಯಕ್ತಿ ದಾಳಿಕೋರನಾಗಿದ್ದು ಅವನನ್ನು ಯೋಧ ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದ್ದು, ಅವರ ಗುರುತು ಇನ್ನು ತಿಳಿಯಬೇಕಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.