ವಿದೇಶ

ಬಾಂಗ್ಲಾದಲ್ಲಿ ಉಗ್ರಗಾಮಿ ಅಡಗುತಾಣದ ಮೇಲೆ ದಾಳಿ; ಮೂವರು ಮಹಿಳೆಯರ ಬಂಧನ

ಬಾಂಗ್ಲಾದೇಶದ ಶಂಕಿತ ಉಗ್ರಗಾಮಿ ಅಡಗುತಾಣದ ಮೇಲೆ ದಾಳಿ ಮಾಡಿರುವ ಬಾಂಗ್ಲಾ ಪೊಲೀಸರು ಮೂವರು ಮಹಿಳೆಯನ್ನು ಬಂಧಿಸಿರುವುದಲ್ಲದೆ, ಶಸ್ತ್ರಾಸ್ತ್ರಗಳು, ಬಂಧೂಕುಗಳು, ಆತ್ಮಹತ್ಯಾ ಬಾಂಬ್

ಬಾಂಗ್ಲಾದಲ್ಲಿ ಉಗ್ರಗಾಮಿ ಅಡಗುತಾಣದ ಮೇಲೆ ದಾಳಿ; ಮೂವರು ಮಹಿಳೆಯರ ಬಂಧನ
ಸಾಂದರ್ಭಿಕ ಚಿತ್ರ
Published On :
ಢಾಕಾ: ಬಾಂಗ್ಲಾದೇಶದ ಶಂಕಿತ ಉಗ್ರಗಾಮಿ ಅಡಗುತಾಣದ ಮೇಲೆ ದಾಳಿ ಮಾಡಿರುವ ಬಾಂಗ್ಲಾ ಪೊಲೀಸರು ಮೂವರು ಮಹಿಳೆಯನ್ನು ಬಂಧಿಸಿರುವುದಲ್ಲದೆ, ಶಸ್ತ್ರಾಸ್ತ್ರಗಳು, ಬಂಧೂಕುಗಳು, ಆತ್ಮಹತ್ಯಾ ಬಾಂಬ್ ಸ್ಫೋಟಕ ಕವಚಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಇದು ನಿಯೋ ಜೆಎಂಬಿ ಉಗ್ರ ಅಡುಗುತಾಣ ಎಂದು ಶಂಕಿಸಲಾಗಿತ್ತು.
ಪೊಲೀಸ್ ಸೂಪರಿಂಟೆಂಡೆಂಟ್ ಎಸ್ ಎಂ ಮೆಹದಿ ಹುಸೇನ್ ಅವರು ಕೊಟ್ಟಿರುವ ಮಾಹಿತಿಯ ಪ್ರಕಾರ ಶನಿವಾರ ಬೆಳಗ್ಗೆ ೧೨ ಘಂಟೆಯ ಹೊತ್ತಿಗೆ ಉಪಜಿಲ ಪಟ್ಟಣದ ತಲತೋಳ ಮಸೀದಿ ಬಳಿಯ ಮನೆಯೊಂದನ್ನು ಸುತ್ತುವರಿಯಲಾಯಿತು. ಬೆಳಗ್ಗೆ ೩ ಘಂಟೆಯ ಹೊತ್ತಿಗೆ ಆತ್ಮಹತ್ಯಾ ಬಾಂಬ್ ಕವಚ ತೊಟ್ಟ ಮಹಿಳೆಯೊಬ್ಬರು ಪೋಲೀಸರ ಮೇಲೆ ದಾಳಿ ನಡೆಸಿದರು. "ಅದು ಸ್ಫೋಟಗೊಳ್ಳುವ ಮುಂಚಿತವಾಗಿಯೇ ತಡೆಯಲಾಯಿತು. ನಂತರ ಇನ್ನಿಬ್ಬರನ್ನು ಬಂಧಿಸಲಾಯಿತು" ಎಂದು ಅವರು ಹೇಳಿದ್ದಾರೆ. 
ಈ ಮಹಿಳೆಯನ್ನು ತಿಥಿ ಎಂದು ಗುರುತಿಸಲಾಗಿದ್ದು, ಇವರು ನಿಯೋ ಜೆಎಂಬಿ ಮುಖಂಡ ಅಯೂಬ್ ಬಚ್ಚು ಶೊಜಿಬ್ ಅವರ ಪತ್ನಿ. ಮತ್ತಿಬ್ಬರು ಸೌಮೈಯ ಮತ್ತು ತೋಳಿ ಬೇಗಮ್ ಎಂದು ಗುರುತಿಸಲಾಗಿದೆ. 
ಮನೆಯಲ್ಲಿ ಇನ್ನು ಹೆಚ್ಚಿನ ಸ್ಫೋಟಕಗಳು ಅಡಗಿರಬಹುದಾದ ಶಂಕೆಯಿಂದ ಹತ್ತಿರದ ಮನೆಗಳ ನಾಗರಿಕರನ್ನು ಸ್ಥಳಾಂತರಗೊಳಿಸಲಾಗಿದೆ. ಢಾಕಾದಿಂದ ಬಾಂಬ್ ನಿಷ್ಕ್ರಿಯ ದಳವನ್ನು ಸ್ಥಳಕ್ಕೆ ಕರೆಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.