ವೈರಲ್ ವಿಡಿಯೋ: ಹಾವಿನ ಹೊಟ್ಟೆ ಸೇರಿದ್ದ ಹಾವು ಜೀವಂತವಾಗಿ ಹೊರಬಂತು!
ಆಹಾರವಾಗಿ ಹಾವಿನ ಹೊಟ್ಟೆ ಸೇರಿದ್ದ ಹಾವು ಬಳಿಕ ಜೀವಂತವಾಗಿಯೇ ಹೊರಗೆ ಬಂದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.

ಟೆಕ್ಸಾಸ್: ಆಹಾರವಾಗಿ ಹಾವಿನ ಹೊಟ್ಟೆ ಸೇರಿದ್ದ ಹಾವು ಬಳಿಕ ಜೀವಂತವಾಗಿಯೇ ಹೊರಗೆ ಬಂದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.
ಖ್ಯಾತ ಆಂಗ್ಲ ದೈನಿಕವೊಂದು ವರದಿ ಮಾಡಿರುವಂತೆ ಟೆಕ್ಸಾಸ್ ನಲ್ಲಿನ ಮನೆಯೊಂದರಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದ್ದು, ಕಪ್ಪು ಬಣ್ಣದ ಹಾವೊಂದು ಮತ್ತೊಂದು ಹಾವನ್ನು ಹಿಡಿದು ಭಕ್ಷಿಸಿದೆ. ವಿಚಿತ್ರವೆಂದರೆ ಭಕ್ಷಣೆಯಾದ ಕೆಲವೇ ನಿಮಿಷಗಳಲ್ಲಿ ಹೊಟ್ಟೆಯಲ್ಲಿದ್ದ ಹಾವು ಮತ್ತೆ ಜೀವಂತವಾಗಿ ಹೊರಗೆ ಬಂದಿದೆ.
ವರದಿಯಲ್ಲಿರುವಂತೆ ಕಳೆದ ಮೇ 28ರಂದು ಟೆಕ್ಸಾಸ್ ನ ನಿವಾಸಿ ಕ್ರಿಸ್ಟೋಫರ್ ರೆನಾಲ್ಡ್ಸ್ ಎಂಬಾತ ನ್ಯೂಟನ್ ನಲ್ಲಿನ ತನ್ನ ನಿವಾಸದಲ್ಲಿ ಈ ವಿಡಿಯೋ ಚಿತ್ರೀಕರಿಸಿದ್ದು, ಮನೆಯ ಗಿಡಗಳ ಮಧ್ಯೆ ಎರಡು ಹಾವುಗಳ ಸೆಣಸಾಟವನ್ನು ನೋಡಿ ಅದನ್ನು ಚಿತ್ರೀಕರಿಸಲು ಮುಂದಾಗಿದ್ದಾನೆ. ಈ ವೇಳೆ ಬಲಿಷ್ಠ ಕಪ್ಪು ಹಾವು ತನ್ನ ಎದುರಾಳಿಯನ್ನು ಮಣಿಸಿ ಅದನ್ನು ಸ್ವಾಹ ಮಾಡಿದೆ. ಆದರೆ ಹೀಗೆ ಸ್ವಾಹ ಮಾಡಿದ ಕೆಲವೇ ಕ್ಷಣಗಳಲ್ಲಿ ಹೊಟ್ಟೆಯಲ್ಲಿದ್ದ ಹಾವು ಜೀವಂತವಾಗಿ ಹೊರಗೆ ಬಂದಿದೆ.
ಇದೀಗ ಈ ವಿಡಿಯೋ ವ್ಯಾಪಕ ವೈರಲ್ ಆಗಿದ್ದು, ಯೂಟ್ಯೂಬ್ ನಲ್ಲಿ ಈ ವಿಡಿಯೋವನ್ನು ಸುಮಾರು 28 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.
ಇನ್ನು ಆಹಾರವಾಗಿ ಹೊಟ್ಟೆ ಸೇರಿದ್ದ ಹಾವು ಜೀವಂತವಾಗಿ ಹೊರಗೆ ಬರಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ತಜ್ಞರು ಉತ್ತರಿಸಿದ್ದು, "ಈ ವಿಡಿಯೋದಲ್ಲಿ ತೋರಿಸಿರುವಂತೆ ದೊಡ್ಡ ಹಾವನ್ನು ಕಪ್ಪು ಹಾವು ಭಕ್ಷಿಸಿದೆಯಾದರೂ ಅದನ್ನು ಕೂಡಲೇ ಅರಗಿಸಿಕೊಳ್ಳುವ ಶಕ್ತಿ ಆ ಹಾವಿಗಿಲ್ಲ. ಜೀರ್ಣಕ್ರಿಯೆಗೆ ಒಂದಷ್ಟು ಸಮಯ ಬೇಕಾಗುತ್ತದೆ. ಇನ್ನು ಹಾವಿಗೂ ಒಂದಷ್ಟು ಸಮಯ ತನ್ನ ಉಸಿರನ್ನು ಬಿಗಿ ಹಿಡಿಯುವ ಸಾಮರ್ಥ್ಯವಿರುತ್ತದೆ. ಹೀಗಾಗಿ ಹಾವಿನ ಹೊಟ್ಟೆ ಸೇರಿದ್ದರೂ ಬಳಿಕ ಹೊರಗ ಬಂದ ಹಾವು ಜೀವಂತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


