ಅಸಹಾಯಕತೆ: ಲಂಡನ್ನಲ್ಲಿ 2 ಪೌಂಡ್‌ಗೆ ಮನೆ ಮಾರಿದ ಭಾರತ ಮೂಲದ ಶಿಕ್ಷಕಿ
ಲಂಡನ್ ನಲ್ಲಿ ಏಳು ವರ್ಷಗಳ ಹಿಂದೆ ಬಂಗಲೆಯೊಂದನ್ನು ಖರೀದಿಸಿದ್ದ ಭಾರತ ಮೂಲದ ರೇಖಾ ಪಟೇಲ್ ಎಂಬುವರು ಅಸಹಾಯಕರಾಗಿ 2 ಪೌಂಡ್ ಗೆ ಮನೆ ಮಾರಾಟ...

Published On :
ಲಂಡನ್: ಲಂಡನ್ ನಲ್ಲಿ ಏಳು ವರ್ಷಗಳ ಹಿಂದೆ ಬಂಗಲೆಯೊಂದನ್ನು ಖರೀದಿಸಿದ್ದ ಭಾರತ ಮೂಲದ ರೇಖಾ ಪಟೇಲ್ ಎಂಬುವರು ಅಸಹಾಯಕರಾಗಿ 2 ಪೌಂಡ್ ಗೆ ಮನೆ ಮಾರಾಟ ಮಾಡಿದ್ದಾರೆ.
ಸುಮಾರು 250.000 ಪೌಂಡ್ ಗಳಷ್ಟು ಮಾರುಕಟ್ಟೆ ಮೌಲ್ಯವನ್ನು ಹೊಂದಿದ್ದ 18ನೇ ಶತಮಾನದ ಬಂಗಲೆಯನ್ನು ರೇಖಾ ಅವರು ಕೇವಲ 2 ಪೌಂಡ್ ಗೆ ಮಾರಾಟ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
2010ರಲ್ಲಿ ರೇಖಾ ಅವರು ಬಂಗ್ಲೆಯನ್ನು ಖರೀದಿಸಿದ್ದರು. ಬಳಿಕ ಮನೆ ಪುನರ್ ನಿರ್ಮಾಣ ಕಾರ್ಯಕೈಗೊಂಡಿದ್ದ ರೇಖಾ ಅವರ ವಿರುದ್ಧ ಪಕ್ಕದ ಮನೆಯವರು ಪ್ರಕರಣ ದಾಖಲಿಸಿದ್ದರು. ಕಳೆದ ಆರು ವರ್ಷಗಳಿಂದ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿತ್ತು. ಇದೀಗ ಕೋರ್ಟ್ ಹಾನಿ ಸಂಭವಿಸಿದ ಪಕ್ಕದ ಮನೆಯವರಿಗೆ ಹಾನಿ ಮೊತ್ತ ಹಾಗೂ ಕಾನೂನು ವೆಚ್ಚ ಸೇರಿ 60 ಲಕ್ಷ ರುಪಾಯಿ ಭರಿಸುವಂತೆ ಆದೇಶ ನೀಡಿತ್ತು.
ಆದರೆ ಅಷ್ಟು ಮೊತ್ತದ ಹಣವಿಲ್ಲದರಿಂದ ಮನೆ ಮಾರಾಟ ಮಾಡಿ ನೆರೆ ಮನೆಯವರಿಗೆ ಪರಿಹಾರ ನೀಡುವಂತೆ ಕೋರ್ಟ್ ಹೇಳಿತ್ತು. ಇದಕ್ಕೆ ಒಪ್ಪದ ರೇಖಾ ಇದರಿಂದ ತಪ್ಪಿಸಿಕೊಳ್ಳಲು ಮನೆಯನ್ನು ಕೇವಲ 2 ಪೌಂಡ್(ಸುಮಾರು 168 ರುಪಾಯಿ)ಗೆ ಮಾರಾಟ ಮಾಡಿದ್ದಾರೆ. ಈ ವ್ಯವಹಾರದಲ್ಲಿ ಎರಡು ಖಾಸಗಿ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ.
ಅಲ್ಲದೆ ಇದೇ ಕಂಪನಿಯ ಜತೆಗೆ 10 ವರ್ಷಗಳ ಕಾಲ ತಿಂಗಳಿಗೆ 50 ಪೌಂಡ್ ನಂತೆ(4 ಸಾವಿರ) ಬಾಡಿಗೆ ನೀಡುತ್ತ ಇದೇ ಮ್ಯಾಂಚೆಸ್ಟರ್ ನಲ್ಲಿ ಬಾಡಿಗೆದಾರರಾಗಿ ಇರಲು ರೇಖಾ ಪಟೇಲ್ ಒಪ್ಪಂದ ಮಾಡಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


