ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಗೆ ನಿರ್ಬಂಧ: ಪಾಕ್'ನ್ನೂ ದೂರವಿಡುವ ಸುಳಿವು ನೀಡಿದ ಶ್ವೇತಭವನ
ಇಸಿಸ್ ಉಗ್ರರನ್ನು ರಾಷ್ಟ್ರದಿಂದ ಹೊರಗಿಡುವ ಉದ್ದೇಶದಿಂದ ಮುಸ್ಲಿಮರ ವಿರುದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಠಿಣ ನಿರ್ಧಾರವನ್ನು ಕೈಗೊಂಡಿರುವ ಹಿನ್ನಲೆಯಲ್ಲೇ, ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿರುವ ಪಾಕಿಸ್ತಾನ ರಾಷ್ಟ್ರವನ್ನೂ...

ವಾಷಿಂಗ್ಟನ್; ಇಸಿಸ್ ಉಗ್ರರನ್ನು ರಾಷ್ಟ್ರದಿಂದ ಹೊರಗಿಡುವ ಉದ್ದೇಶದಿಂದ ಮುಸ್ಲಿಮರ ವಿರುದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಠಿಣ ನಿರ್ಧಾರವನ್ನು ಕೈಗೊಂಡಿರುವ ಹಿನ್ನಲೆಯಲ್ಲೇ, ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿರುವ ಪಾಕಿಸ್ತಾನ ರಾಷ್ಟ್ರವನ್ನೂ ದೂರವಿಡುವ ಸುಳಿವನ್ನು ಶ್ವೇತಭವನ ನೀಡಿದೆ.
ಇಸ್ಲಾನಿಕ್ ಉಗ್ರರನ್ನು ನಿಯಂತ್ರಿಸುವ ಉದ್ದೇಶದಿಂದ ಟ್ರಂಪ್ ಅವರು ಕೆಲ ದಿನಗಳ ಹಿಂದೆ ವಿವಾದಾತ್ಮಕ ಆದೇಶಕ್ಕೆ ಸಹಿ ಹಾಕಿದ್ದರು. ಆದೇಶದಂತೆ ಅಮೆರಿಕ ರಾಷ್ಟ್ರಕ್ಕೆ ಹೋಗಲು ಬಯಸುವ ಇರಾನ್, ಇರಾಕ್, ಸುಡಾನ್, ಲಿಬಿಯಾ, ಯೆಮೆನ್ ಮತ್ತು ಸೊಮಾಲಿಯಾ ನಾಗರಿಕರು ಹಲವು ಸುತ್ತಿನ ತಪಾಸಣೆ ಮತ್ತು ಕಠಿಣ ಶರತ್ತುಗಳಿಗೆ ಒಳಪಡಬೇಕಾಗಿದೆ. ಸಿರಿಯಾದ ನಾಗರೀಕರಿಗೆ ಮುಂದಿನ ಆದೇಶದ ವರೆಗೆ ಪೂರ್ಣ ನಿಷೇಧವನ್ನು ವಿಧಿಸಲಾಗಿದೆ.
ಅಧ್ಯಕ್ಷೀಯ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಯಂತೆಯೇ ಟ್ರಂಪ್ ಅವರು ಒಂದೊಂದಾಗಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗುತ್ತಿದ್ದು, ಮೆಕ್ಸಿಕೋ ಗಡಿಯಲ್ಲಿನ ಅಕ್ರಮ ವಲಸೆ ತಪ್ಪಿಸಲು ಗೋಡೆ ಕಟ್ಟುವ ನಿರ್ಧಾರದ ನಂತರ ಪ್ರಕಟಿಸಿದ ಎರಡನೇ ವಿವಾದಾತ್ಮಕ ನಿರ್ಧಾರ ಇದಾಗಿದೆ.
ಟ್ರಂಪ್ ಅವರ ಈ ಕಠಿಣ ನಿರ್ಧಾರ ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು, ಪಾಕಿಸ್ತಾನ ಹಾಗೂ ಸೌದಿ ಕೂಡ ಮುಸ್ಲಿಮೇತರ ರಾಷ್ಟ್ರಗಳಾಗಿದ್ದು, ಈ ರಾಷ್ಟ್ರಗಳ ಜನರಿಗೂ ಅಮೆರಿದ ನಿರ್ಬಂಧ ಹೇರಲಿದೆಯೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶ್ವೇತಭವನದ ಅಧಿಕಾರಿಗಳು, ಕೆಲ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಚಿಂತನೆ ನಡೆಸಿ ಪಾಕಿಸ್ತಾನ ರಾಷ್ಟ್ರವನ್ನೂ ಇರಾನ್, ಇರಾಕ್, ಸುಡಾನ್, ಲಿಬಿಯಾ, ಯೆಮೆನ್ ಮತ್ತು ಸೊಮಾಲಿಯಾ ಪಟ್ಟಿಯಲ್ಲಿ ಸೇರಿಸಲಾಗಿದೆ. ಭವಿಷ್ಯದಲ್ಲಿ ಪಾಕಿಸ್ತಾನ ಪ್ರಜೆಗಳ ಮೇಲೂ ನಿರ್ಬಂಧ ಹೇರುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ನಿರ್ಬಂಧ ಹೇರಲಾಗಿರುವ 7 ರಾಷ್ಟ್ರಗಳನ್ನು ಒಬಾಮಾ ಆವರ ಆಡಳಿತದ ಅವಧಿಯಲ್ಲಿಯೇ ಭಯೋತ್ಪಾದಕ ಬೆದರಿಕೆಯುಳ್ಳ ರಾಷ್ಟ್ರಗಳೆಂದು ಪರಿಗಣಿಸಲಾಗಿತ್ತು. ಇದರಂತೆ ಟ್ರಂಪ್ ಅವರೂ ಕೂಡ ಕಠಿಣ ನಿರ್ಧಾರವೊಂದನ್ನು ತೆಗೆದುಕೊಂಡು ಇರಾನ್, ಇರಾಕ್, ಲಿಬಿಯಾ, ಸುಡಾನ್, ಯೆಮೆನ್, ಸಿರಿಯಾ ಹಾಗೂ ಸೋಮಾಲಿಯಾ ರಾಷ್ಟ್ರ ಪ್ರಜೆಗಳ ಮೇಲೆ ನಿರ್ಬಂಧವನ್ನು ಹೇರಿದ್ದಾರೆಂದು ಶ್ವೇತಭವನದ ಸಿಬ್ಬಂದಿಗಳ ಮುಖ್ಯಸ್ಥ ರೀನ್ಸ್ ಪ್ರೀಬಲ್ ಹೇಳಿದ್ದಾರೆ.
7 ರಾಷ್ಟ್ರಗಳಂತೆಯೇ ಇತರೆ ರಾಷ್ಟ್ರಗಳಲ್ಲೂ ಕೂಡ ಭಯೋತ್ಪಾದನಾ ಕೃತ್ಯಗಳು ನಡೆಯುತ್ತಿದ್ದು, ಇದಕ್ಕೆ ಉದಾಹರಣೆಯಾಗಿ ಪಾಕಿಸ್ತಾನ ಹಾಗೂ ಇತರೆ ರಾಷ್ಟ್ರಗಳನ್ನು ತೆಗೆದುಕೊಳ್ಳಬಹುದು. ಈ ರಾಷ್ಟ್ರಗಳ ಕುರಿತ ನಿರ್ಧಾರಗಳನ್ನು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬಹುದೆಂದು ಚಿಂತನೆ ನಡೆಸಿ, ಅತ್ಯಂತ ಹೆಚ್ಚಿನ ಬೆದರಿಕೆಯುಳ್ಳ ರಾಷ್ಟ್ರಗಳ ಮೇಲೆ ಇದೀಗ ಕ್ರಮ ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಟ್ರಂಪ್ ಅವರ ಆಡಳಿತಾವಧಿಯಲ್ಲಿ ಪಾಕಿಸ್ತಾನ ರಾಷ್ಟ್ರವನ್ನು ಭಯೋತ್ಪಾದಕ ಬೆದರಿಕೆಯುಳ್ಳ ರಾಷ್ಟ್ರವೆಂದು ಬಹಿರಂಗವಾಗಿ ಹೇಳಲಾಗಿದೆ.
ನಿರ್ಬಂಧ ಹೇರುವುದಕ್ಕೂ ಮುನ್ನ ಕಾಲಾವಕಾಶ ನೀಡಬೇಕೆಂದು ಕೆಲವರು ಸಲಹೆಗಳನ್ನು ನೀಡುತ್ತಿದ್ದಾರೆ. ಆದರೆ, ನಾವು ಸಮಯ ನೀಡಿದ್ದೇ ಆಗಿದ್ದರೆ, ಇದರಿಂದ ಅಮೆರಿಕಾಗೆ ಸಮಸ್ಯೆ ಎದುರಾಗುತ್ತಿತ್ತು. ಮೂರು ದಿನಗಳ ಕಾಲಾವಕಾಶದಲ್ಲಿ ಭಯೋತ್ಪಾದಕರು ಪಿತೂರಿ ನಡೆಸುತ್ತಿದ್ದರು. ಸೌದಿ ಅರೇಬಿಯಾ ಮತ್ತು ಯುಎಇ ರಾಷ್ಟ್ರಗಳ ಅಧ್ಯಕ್ಷರೊಂದಿಗೆ ಟ್ರಂಪ್ ಅವರು ಮಾತುಕತೆ ನಡೆಸಿದಾಗ ನಿರ್ಧಾರದ ಬಗ್ಗೆ ಮಾತುಕತೆ ಬರಬಹುದು. ಆದರೆ, ಅಮೆರಿಕ ರಾಷ್ಟ್ರದ ಪ್ರಜೆಗಳ ಸುರಕ್ಷತೆ ನಮಗೆ ಬಹುಮುಖ್ಯವಾಗಿದೆ.
ಕೆಲ ರಾಷ್ಟ್ರಗಳಿಂದ ನಮಗೆ ತೊಂದರೆಯಿದೆ ಎಂದು ತಿಳಿದಿದ್ದರೂ, ಅವುಗಳೊಂದಿಗೆ ಸಂಬಂಧ ಬೆಳೆಸುವುದು, ಅವಕಾಶಗಳನ್ನು ತೆಗೆದುಕೊಳ್ಳುವುದು ನಮಗಿಷ್ಟವಿಲ್ಲ. ಅಮೆರಿಕದ ಪ್ರಜೆಗಳು ಸಾಕಷ್ಟು ನಿರೀಕ್ಷೆಗಳೊಂದಿಗೆ ಟ್ರಂಪ್ ಅವರನ್ನು ಆಯ್ಕೆ ಮಾಡಿದ್ದಾರೆ. ಇತರೆ ದೇಶಗಳ ವಲಸಿಗರ ಬಗ್ಗೆ ಟ್ರಂಪ್ ನಿಷ್ಕೃಷ್ಟರಾಗಿದ್ದಾರೆಂಬುದು ಜನರಿಗೆ ಗೊತ್ತಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


