ತಾಂತ್ರಿಕ ದೋಷದಿಂದ ಒತ್ತಾಯವಾಗಿ ಟ್ರಂಪ್ ನ್ನು ಫಾಲೋ ಮಾಡಿದ ಬಳಕೆದಾರರು: ಟ್ವಿಟ್ಟರ್ ಕ್ಷಮೆಯಾಚನೆ
ತಾಂತ್ರಿಕ ದೋಷದಿಂದ ಸಾವಿರಾರು ಮಂದಿ ಒತ್ತಾಯ ಪೂರ್ವಕವಾಗಿ ಅಮೆರಿಕಾ ನೂತನ ಅಧ್ಯಕ್ಷ...

Published On :
ವಾಷಿಂಗ್ಟನ್: ತಾಂತ್ರಿಕ ದೋಷದಿಂದ ಸಾವಿರಾರು ಮಂದಿ ಒತ್ತಾಯ ಪೂರ್ವಕವಾಗಿ ಅಮೆರಿಕಾ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸಬೇಕಾದ್ದಕ್ಕೆ ನಂತರ ಸಾಮಾಜಿಕ ತಾಣ ಬಳಕೆದಾರರ ಬಳಿ ಕ್ಷಮೆಯಾಚಿಸಿದ ಪ್ರಸಂಗ ನಡೆದಿದೆ.
ಅಮೆರಿಕಾ ಅಧ್ಯಕ್ಷರಾದವರು @POTUS ಖಾತೆಯ ನಿಯಂ ತ್ರಣ ಹೊಂದಿರುತ್ತಾರೆ. ಅದರಂತೆ ಮೊನ್ನೆ ಶುಕ್ರವಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ @POTUS ಖಾತೆಯ ನಿಯಂತ್ರಣ ಪಡೆದಾಗಿತ್ತು.
ಕೆಲವರು ಬರಾಕ್ ಒಬಾಮಾ ಅಧ್ಯಕ್ಷ ಪದವಿಯಿಂದ ನಿರ್ಗಮಿಸಿದ ನಂತರ ಆ ಸಾಮಾಜಿಕ ತಾಣದಿಂದ ದೂರ ಸರಿದಿದ್ದರು. ಆದರೆ ಸರಿಯಾದ ಕಾರಣ ನೀಡದೆ ಜನರ ಅನುಮತಿ ಪಡೆಯದೆ ಅವರು ತನ್ನಿಂತಾನಾಗಿಯೇ ಅಧ್ಯಕ್ಷರನ್ನು ಅನುಸರಿಸುವಂತೆ ಮಾಡಲಾಗಿತ್ತು.
ಬಳಕೆದಾರರಿಗೆ ಈ ಕಾನೂನು ದೋಷ ಗೊತ್ತಾದ ತಕ್ಷಣ ಟ್ವಿಟ್ಟರ್ ಸಿಇಒ ಜಾಕ್ ಡೋರ್ಸೆಯವರ ಗಮನಕ್ಕೆ ತಂದಿದ್ದಾರೆ. ಅದಕ್ಕೆ ಅವರು ಸಾಮಾಜಿಕ ತಾಣದ ಪ್ರಕ್ರಿಯೆಯಲ್ಲಿ ಉಂಟಾದ ದೋಷದಿಂದ ಈ ರೀತಿ ಆಗಿದೆ ಎಂದು ಹೇಳಿದ್ದಾರೆ. ಹೀಗಾಗಿ ಪೊಟಸ್ ಖಾತೆಯನ್ನು ಅನ್ ಫಾಲೋ ಮಾಡಿದವರು ಅವರಿಗೆ ಆಯ್ಕೆ ನೀಡದೆ ಫಾಲೋ ಮಾಡುವಂತಾಗಿದೆ ಎಂದು ಹೇಳಿದ್ದಾರೆ.
ಬರಾಕ್ ಒಬಾಮಾ ಅವರನ್ನು @POTUS44 ನಲ್ಲಿ ಅನುಸರಿಸುತ್ತಿದ್ದ ಜನರು ಮೊನ್ನೆ ಶುಕ್ರವಾರ ಮಧ್ಯಾಹ್ನ ನಂತರ Trump-run@POTUS ನಲ್ಲಿ ತನ್ನಿಂತಾನಾಗಿಯೇ ಫಾಲೋ ಮಾಡುವಂತೆ ಮಾಡಲಾಗಿತ್ತು.
ಅದರ ಹೊರತಾಗಿ @POTUS ನ್ನು ಈ ಹಿಂದೆ ಅನ್ ಫಾಲೋ ಮಾಡುತ್ತಿದ್ದವರು ಇದೀಗ ತಪ್ಪಾಗಿ ಫಾಲೋ @POTUS ಎಂದು ಕ್ಲಿಕ್ ಮಾಡುವಂತಾಯಿತು ಎಂದು ಡೊರ್ಸಿ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. ಇದರಿಂದ ಇತರ ಅಧಿಕೃತ ಆಡಳಿತಾತ್ಮಕ ಖಾತೆಗಳಾದ @VP, @WhiteHouse ಮತ್ತು @PressSec ಮೇಲೆ ಪರಿಣಾಮ ಬೀರಿದೆ.
ಇದರಿಂದ ಸುಮಾರು 5,60,000 ಜನರ ಮೇಲೆ ಪರಿಣಾಮ ಬೀರಿದೆ. ಇದು ತಪ್ಪು, ಇದು ಸರಿಯಾದ ಕ್ರಮವಲ್ಲ, ನಾವು ಹೊಂದಿರುವ ಸಾಮಾಜಿಕ ತಾಣವಾಗಿರುವುದರಿಂದ ನಾವು ಕ್ಷಮೆ ಕೇಳುತ್ತೇವೆ. ಇದಕ್ಕೆ ಕ್ಷಮೆಯಿಲ್ಲ ಎಂದು ಜಾಕ್ ಡೊರ್ಸಿ ಟ್ವೀಟ್ ಮಾಡಿದ್ದಾರೆ.
ಈ ವಿಷಯವನ್ನು ಸರಿಪಡಿಸಲಾಗಿದೆ ಎಂದು ಸಿಎನ್ಎನ್ ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


