ಟ್ರಂಪ್ ಬದಲಾವಣೆ ಅಭ್ಯರ್ಥಿ, ಅವರನ್ನು ಕಡೆಗಣಿಸಬೇಡಿ: ಒಬಾಮಾ
ಅಮೆರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬದಲಾವಣೆಯ ಅಭ್ಯರ್ಥಿಯಾಗಿದ್ದು, ಅವರನ್ನು ಕಡೆಗಣಿಸಬೇಡಿ ಎಂದು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಹೇಳಿದ್ದಾರೆ...

ವಾಷಿಂಗ್ಟನ್: ಅಮೆರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬದಲಾವಣೆಯ ಅಭ್ಯರ್ಥಿಯಾಗಿದ್ದು, ಅವರನ್ನು ಕಡೆಗಣಿಸಬೇಡಿ ಎಂದು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಹೇಳಿದ್ದಾರೆ.
ಸಿಬಿಎಸ್ ಸುದ್ದಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿರುವ ಒಬಾಮಾ ಅವರು, ವಾಷಿಂಗ್ಟನ್ ನ್ನು ಬದಲಾಯಿಸಬೇಕೆಂದರೆ ಅದು ಅಮೆರಿಕಾ ಜನತೆಯಿಂದ ಮಾತ್ರ ಸಾಧ್ಯ. ಅಮೆರಿಕ ಜನತೆ ವಾಷಿಂಗ್ಟನ್ ನ್ನು ಬದಲಾಯಿಸಬಹುದು ಎಂದು ಹೇಳಿದ್ದಾರೆ.
ಪ್ರಸ್ತುತ ಇರುವ ಪರಿಸ್ಥಿತಿಯನ್ನು ನೋಡಿದರೆ ಬದಲಾವಣೆಗಳು ಸಾಧ್ಯವಿಲ್ಲ. ಉನ್ನತ ಸ್ಥಾನದಲ್ಲಿರುವವರು ನಿರ್ದೇಶನ ನೀಡಿದಾಗ ಬದಲಾವಣೆಗಳು ಸಾಧ್ಯವಾಗುವುದಿಲ್ಲ. ಎರಡೂ ಕಡೆಗಳಲ್ಲೂ ಕಾಂಗ್ರೆಸ್ ಸದಸ್ಯರಿದ್ದು, ಎಲ್ಲಾ ರೀತಿಯ ವಿಚಾರದಲ್ಲೂ ಇವರ ಹಸ್ತಕ್ಷೇಪವಿರುತ್ತದೆ. ಪ್ರಸ್ತುತ ಅವರ ಗಮನ ಆರ್ಥಿಕತೆ, ಭಯೋತ್ಪಾದನೆ ಹಾಗೂ ಸಾಮಾಜಿಕ ವಿಚಾರಗಳ ಕಡೆಯಿದೆ. ಹಾಗೂ ಮುಂಬರುವ ಚುನಾವಣೆಯಲ್ಲಿ ಮರು ಆಯ್ಕೆಗೊಳ್ಳಬೇಕೆಂಬ ಮನಸ್ಥಿತಿಯೂ ಅವರಲ್ಲಿದೆ ಎಂದು ತಿಳಿಸಿದ್ದಾರೆ.
ಜನರ ಕುಂದುಕೊರತೆಗಳ ಕಡೆ ಟ್ರಂಪ್ ಅವರು ಗಮನ ಹರಿಸುತ್ತಾರೆ. ಪ್ರಚಾರಗಳನ್ನು ಹೇಗೆ ನಡೆಸಬೇಕು, ಒಬ್ಬ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಹೇಗೆ ಇರಬೇಕೆಂಬ ಜಾಣತನ ಟ್ರಂಪ್ ಅವರಿಗಿದೆ. ಅವರ ಅಧಿಕಾರಾವಧಿಯಲ್ಲಿ ಯಾವ ರೀತಿಯ ಬೆಳವಣಿಗೆಗಳಾಗಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ ಎಂದಿದ್ದಾರೆ.
ಇದೇ ವೇಳೆ ಟ್ರಂಪ್ ಅವರು ಟ್ವಿಟರ್ ನಲ್ಲಿ ಸರಣಿಯಾಗಿ ಟ್ವೀಟ್ ಮಾಡುತ್ತಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರವ ಅವರು, ಟ್ವಿಟರ್ ಮೂಲಕ ಜನರು ಸಾಕಷ್ಟು ಮಾಹಿತಿಗಳನ್ನು ಪಡೆಯುತ್ತಿದ್ದಾರೆ. ಫೋನ್ ಮೂಲಕವೇ ಮಾಹಿತಿಗಳನ್ನು ಪಡೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಿಗೆ ಶಕ್ತಿಯೂ ಇದೆ, ಆದರೆ, ಇದು ಅಪಾಯ ಕೂಡ ಹೌದು ಎಂದು ಹೇಳಿಕೊಂಡಿದ್ದಾರೆ. ಇದೇ ವೇಳೆ ರಾಜಕೀಯ ನಾಯಕರಿಗೆ ಎಚ್ಚರಿಕೆ ನೀಡಿರುವ ಅವರು, ಟ್ರಂಪ್ ಬದಲಾವಣೆಯ ಅಭ್ಯರ್ಥಿಯಾಗಿದ್ದು, ಅವರನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬೇಡಿ ಎಂದಿದ್ದಾರೆ.
ಪ್ರತೀಯೊಬ್ಬರಿಗೂ ಜ್ಞಾನವೆಂಬುದಿದ್ದು, ಯಾರನ್ನು ಕಡೆಗಣಿಸಬಾರದು, ಟ್ರಂಪ್ ಅವರು ಅಮೆರಿಕಾ ರಾಷ್ಟ್ರದ 45ನೇ ಅಧ್ಯಕ್ಷನಾಗಿದಾರೆ. ಒಬ್ಬರು ಒಂದು ಸ್ಥಾನಕ್ಕೆ ಬಂದಿದ್ದಾರೆಂದರೆ ಅದಕ್ಕೆ ಅದರದ್ದೇ ಆದ ಕಾರಣಗಳಿರುತ್ತವೆ. ಯಾರನ್ನೂ ತಿರಸ್ಕಾರ ಭಾವದಿಂದ ನೋಡಬಾರದು. ಟ್ರಂಪ್ ಅವರು ಅಸಾಂಪ್ರದಾಯಿಕ ಅಭ್ಯರ್ಥಿಯಾಗಿದ್ದು, ಈ ಹಿಂದೆದೂ ಯಾರೂ ಮಾಡದ ಪ್ರಚಾರವನ್ನು ಯಶಸ್ವಿಯಾಗಿ ಮಾಡಿದ್ದಾರೆ. ತಮ್ಮ ಪಕ್ಷದಲ್ಲಿಯೇ ತಮಗೆ ಬೆಂಬಲ ವ್ಯಕ್ತವಾಗದಿದ್ದರೂ ಸುಧಾರಿತ ಪ್ರಚಾರವನ್ನು ಮಾಡಿದ್ದರು.
ಟ್ರಂಪ್ ಅವರು ಉತ್ತಮ ರೀತಿಯಲ್ಲಿಯೇ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಲಿದ್ದಾರೆ. ಒಂದು ಸಂಘಟನೆಯನ್ನು ಕಟ್ಟುವ ಹಂತದಲ್ಲಿ ಟ್ರಂಪ್ ಅವರಿದ್ದು, ಈ ಪ್ರಕ್ರಿಯೆಯಲ್ಲಿ ಅವರು ಹೇಗೆ ಕೆಲಸ ಮಾಡುತ್ತಾರೆಂಬುದನ್ನು ಕಾದು ನೋಡಬೇಕಿದೆ. ನನ್ನ ಪ್ರಕಾರ ಹಾಗೂ ಟ್ರಂಪ್ ಅವರ ಪ್ರಕಾರ ಇದೊಂದು ಪರೀಕ್ಷೆಯೆಂದೇ ಪರಿಗಣಿಸಲಾಗಿದ್ದು, ಟ್ರಂಪ್ ಅವರ ದೃಷ್ಟಿಯಿಂದಲೇ ಜನರೂ ಕೂಡ ಇದನ್ನು ನೋಡಬೇಕಿದೆ ಎಂದು ಒಬಾಮಾ ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


