ಆಸ್ಟ್ರೇಲಿಯಾ: ಮೆಲ್ಬೋರ್ನ್ ಶಾಪಿಂಗ್ ಸೆಂಟರ್ ಗೆ ಅಪ್ಪಳಿಸಿದ ವಿಮಾನ: ಐವರು ಸಾವು
ಆಸ್ಟ್ರೇಲಿಯಾದ ಮೆಲ್ಬೋರ್ನ್ ಸಮೀಪ ಬೆಂಕಿ ಹತ್ತಿಕೊಂಡು ಹಗುರ ವಿಮಾನ ಸ್ಫೋಟಗೊಂಡು...

Published On :
ಸಿಡ್ನಿ: ಆಸ್ಟ್ರೇಲಿಯಾದ ಮೆಲ್ಬೋರ್ನ್ ಸಮೀಪ ಬೆಂಕಿ ಹತ್ತಿಕೊಂಡು ಹಗುರ ವಿಮಾನ ಸ್ಫೋಟಗೊಂಡು ವಿಮಾನದಲ್ಲಿದ್ದ ಎಲ್ಲಾ 5 ಮಂದಿ ಮೃತಪಟ್ಟಿದ್ದಾರೆ. ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿರುವ ಶಾಪಿಂಗ್ ಸೆಂಟರ್ ವೊಂದಕ್ಕೆ ಹೊಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಬೀಚ್ ಕ್ರಾಫ್ಟ್ ವಿಮಾನ ಟೇಕ್ ಆಫ್ ಆದ ತಕ್ಷಣವೇ ತನ್ನ ದಿಕ್ಕನ್ನು ಬದಲಾಯಿಸಿ ಶಾಪಿಂಗ್ ಸೆಂಟರ್ ಗೆ ಹೋಗಿ ಅಪ್ಪಳಿಸಿತು. ಶಾಪಿಂಗ್ ಸೆಂಟರ್ ಎಸ್ಸೆಂಡಾನ್ ಫೀಲ್ಡ್ ಏರ್ ಪೋರ್ಟ್ ಪಕ್ಕದಲ್ಲಿಯೇ ಇದೆ.
ವಿಮಾನದಲ್ಲಿದ್ದ ಎಲ್ಲಾ ಐವರು ಮೃತಪಟ್ಟಿದ್ದಾರೆ ಎಂದು ವಿಕ್ಟೋರಿಯಾ ಸಹಾಯಕ ಪೊಲೀಸ್ ಆಯುಕ್ತ ಸ್ಟೆಫನ್ ಲಿಯಾನೆ ತಿಳಿಸಿದ್ದಾರೆ.
ಕಳೆದ ಮೂರು ದಶಕಗಳಲ್ಲಿ ಇದು ಅತ್ಯಂತ ಭೀಕರ ವಿಮಾನ ಅಪಘಾತ ಎಂದು ವಿಕ್ಟೋರಿಯಾ ಪ್ರಧಾನ ಮಂತ್ರಿ ಡೇನಿಯಲ್ ಆಂಡ್ರ್ಯೂಸ್ ಬಣ್ಣಿಸಿದ್ದಾರೆ.ಎಸ್ಸೆಂಡಾನ್ ವಿಮಾನ ನಿಲ್ದಾಣದಿಂದ ಹೊರಟ ಖಾಸಗಿ ವಿಮಾನ ಸ್ವಲ್ಪ ಹೊತ್ತಿನಲ್ಲಿಯೇ ಅಪ್ಪಳಿಸಿದೆ. ವಾಹಿನಿಯ ನೇರ ಪ್ರಸಾರದಲ್ಲಿ ಹೊತ್ತಿ ಉರಿದ ಅವಶೇಷಗಳು, ಹೊಗೆ ಮತ್ತು ಶಾಪಿಂಗ್ ಸೆಂಟರ್ ಮತ್ತು ಪಕ್ಕದ ಕಟ್ಟಡದಲ್ಲಿ ಉಂಟಾದ ನಷ್ಟ ಕಾಣುತ್ತಿದೆ.
ಸ್ಥಳಕ್ಕೆ ತನಿಖಾ ತಂಡವನ್ನು ಕಳುಹಿಸಲಾಗಿದೆ ಎಂದು ಆಸ್ಟ್ರೇಲಿಯಾದ ಸುರಕ್ಷಾ ಸಾರಿಗೆ ವಿಭಾಗ ತಿಳಿಸಿದೆ. ಎಸ್ಸೆಂಡಾನ್ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದ್ದು, ಎಲ್ಲಾ ವಿಮಾನಗಳನ್ನು ಮೆಲ್ಬೋರ್ನ್ ನ ಎರಡು ಪ್ರಮುಖ ವಿಮಾನ ನಿಲ್ದಾಣಗಳಾದ ಟುಲ್ಲಮೆರಿನ್ ಮತ್ತು ಅವಲನ್ ಗೆ ಕಳುಹಿಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


