ವಿದೇಶ

ಉಗ್ರ ಚಟುವಟಿಕೆಯಲ್ಲಿ ತೊಡಗಿಲ್ಲ, ನಿರ್ಬಂಧ ತೆಗೆಯಿರಿ: ಹಫೀಜ್ ಸಯೀದ್

ನಾನು ಯಾವುದೇ ಉಗ್ರ ಚಟುವಟಿಕೆಗಳಲ್ಲಿ ತೊಡಗಿಕೊಂಡಿಲ್ಲ. ನನ್ನ ಮೇಲಿರುವ ವಿದೇಶ ಪ್ರಯಾಣ ನಿರ್ಬಂಧವನ್ನು ಕೂಡಲೇ ತೆಗೆಯಿರಿ ಎಂದು ಜಮಾತ್-ಉದ್-ದಾವಾ ಸಂಘಟನೆಯ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಪಾಕಿಸ್ತಾನ ಸರ್ಕಾರಕ್ಕೆ ಗುರುವಾರ ಒತ್ತಾಯಿಸಿದ್ದಾನೆ...

ಉಗ್ರ ಚಟುವಟಿಕೆಯಲ್ಲಿ ತೊಡಗಿಲ್ಲ, ನಿರ್ಬಂಧ ತೆಗೆಯಿರಿ: ಹಫೀಜ್ ಸಯೀದ್
ಜಮಾತ್-ಉದ್-ದಾವಾ ಸಂಘಟನೆಯ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್
Published On :

ಲಾಹೋರ್: ನಾನು ಯಾವುದೇ ಉಗ್ರ ಚಟುವಟಿಕೆಗಳಲ್ಲಿ ತೊಡಗಿಕೊಂಡಿಲ್ಲ. ನನ್ನ ಮೇಲಿರುವ ವಿದೇಶ ಪ್ರಯಾಣ ನಿರ್ಬಂಧವನ್ನು ಕೂಡಲೇ ತೆಗೆಯಿರಿ ಎಂದು ಜಮಾತ್-ಉದ್-ದಾವಾ ಸಂಘಟನೆಯ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಪಾಕಿಸ್ತಾನ ಸರ್ಕಾರಕ್ಕೆ ಗುರುವಾರ ಒತ್ತಾಯಿಸಿದ್ದಾನೆ.

ಈ ಕುರಿತಂತೆ ಪಾಕಿಸ್ತಾನ ಸರ್ಕಾರ ಆಂತರಿಕ ಸಚಿವ ಚೌಧರಿ ನಿಸಾನ್ ಅಲಿ ಖಾನ್ ಅವರಿಗೆ ಪತ್ರ ಬರೆದಿರುವ ಹಫೀಜ್ ಜಮಾತ್-ಉದ್-ದಾವಾ ಸಂಘಟನೆ ಯಾವುದೇ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಮತ್ತು ತನ್ನಿಂದ ದೇಶದ ಭದ್ರತೆಗೆ ಯಾವುದೇ ಅಪಾಯವೂ ಇಲ್ಲ. ಹೀಗಾಗಿ ಕೂಡಲೇ ನನ್ನ ಮೇಲಿರುವ ವಿದೇಶ ಪ್ರಯಾಣ ನಿರ್ಬಂಧವನ್ನು ತೆಗೆಯಬೇಕುಎಂದು ವಾದಿಸಿದ್ದಾನೆ.

ಹಫೀಜ್ 2008 26/11 ಮುಂಬೈ ಉಗ್ರ ದಾಳಿಯ ಪ್ರಮುಖ ರೂವಾರಿಯಾಗಿದ್ದಾನೆ. 2017ರ ಜನವರಿ 30 ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ವಿದೇಶ ನಿರ್ಗಮನ ನಿಷೇಧ ಪಟ್ಟಿಗೆ ಸೇರಿಸಲಾಗಿರುವ ತನ್ನ ಸಹಿತ 38 ಮಂದಿಯ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಬೇಕೆಂದು ಹಫೀಸ್ ಪತ್ರದಲ್ಲಿ ಆಗ್ರಹಿಸಿದ್ದಾನೆಂದು ತಿಳಿದುಬಂದಿದೆ.

ಕಳೆದ ತಿಂಗಳು ಪಾಕಿಸ್ತಾನ ಸರ್ಕಾರ ಜೆಯುಡಿ ಮತ್ತು ಫಲಾಹ್-ಇ-ಇನ್ಸಾಯಿಯತ್ ಸಂಘಟನೆಯ ಇತರ 37 ನಾಯಕರನ್ನು ವಿದೇಶ ನಿರ್ಗಮನ ನಿಷೇಧ ಪಟ್ಟಿಗೆ ಸೇರಿಸುವ ಮೂಲಕ ದೇಶ ಬಿಟ್ಟು ಹೋಗದಂತೆ ನಿರ್ಬಂಧ ಹೇರಿತ್ತು. ಅಲ್ಲದೆ, ಹಫೀಜ್ ಸಯೀದ್ ಗೆ 90 ದಿನಗಳ ಕಾಲ ಗೃಹ ಬಂಧನ ವಿಧಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.