ವಿವಾದಕ್ಕೆ ತಿರುಗಿದ ಟ್ರಂಪ್ ಕುರಿತ ಬ್ರಿಟನ್ ಸ್ಪೀಕರ್ ಹೇಳಿಕೆ
ಸಧ್ಯದಲ್ಲೇ ಬ್ರಿಟನ್ ಗೆ ಭೇಟಿ ನೀಡಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಬ್ರಿಟನ್ ಸಂಸತ್ ನ್ನುದ್ದೇಶಿಸಿ ಮಾತನಾಡಲು ಅವಕಾಶ ನೀಡುವುದಿಲ್ಲ ಎಂಬ ಬ್ರಿಟನ್ ಸ್ಪೀಕರ್ ಹೇಳಿಕೆ ವಿವಾದಕ್ಕೆ ತಿರುಗಿದೆ.

Published On :
ಲಂಡನ್: ಸಧ್ಯದಲ್ಲೇ ಬ್ರಿಟನ್ ಗೆ ಭೇಟಿ ನೀಡಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಬ್ರಿಟನ್ ಸಂಸತ್ ನ್ನುದ್ದೇಶಿಸಿ ಮಾತನಾಡಲು ಅವಕಾಶ ನೀಡುವುದಿಲ್ಲ ಎಂಬ ಬ್ರಿಟನ್ ಸ್ಪೀಕರ್ ಹೇಳಿಕೆ ವಿವಾದಕ್ಕೆ ತಿರುಗಿದೆ. ಬ್ರಿಟನ್ ನ ಸಂಸತ್ ಸಭಾಧ್ಯಕ್ಷರು ಈ ರೀತಿ ಹೇಳಿಕೆ ನೀಡುವ ಮೂಲಕ ಬ್ರಿಟನ್ ನ ಆಪ್ತ ರಾಷ್ಟ್ರಕ್ಕೆ ಅವಮಾನ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಅಮೆರಿಕಾದ ರಿಪಬ್ಲಿಕನ್ ನ ಕಾಂಗ್ರೆಸ್ ಸದಸ್ಯ ಬ್ರಿಟನ್ ಸಭಾಧ್ಯಕ್ಷರ ಹೇಳಿಕೆಗೆ ಜೋಯ್ ವಿಲ್ ಸನ್ ಪ್ರತಿಕ್ರಿಯೆ ನೀಡಿದ್ದು ಬ್ರಿಟನ್ ಸಭಾಧ್ಯಕ್ಷರ ಹೇಳಿಕೆ ನಿಜಕ್ಕೂ ಬೇಸರ ಮೂಡಿಸುವಂತಿದೆ. ಇತ್ತೀಚಿನ ವರ್ಷಗಳಲ್ಲಿ ಬ್ರಿಟನ್ ಪರವಾದ ನಿಲುವು ಹೊಂದಿರುವವರು ಅಮೆರಿಕಾ ಅಧ್ಯಕ್ಷರಾಗಿದ್ದಾರೆ ಎಂದರೆ ಅದು ಡೊನಾಲ್ಡ್ ಟ್ರಂಪ್. ಬ್ರಿಟನ್ ಪ್ರಧಾನಿ ಥೆರೇಸಾ ಮೇ ಅವರೊಂದಿಗೆ ಮಾತನಾಡಿರುವ ಡೊನಾಲ್ಡ್ ಟ್ರಂಪ್ ನ್ಯಾಟೋಗೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಅಷ್ಟೇ ಅಲ್ಲದೇ ವ್ಯಾಪಾರ-ವಹಿವಾಟು ಬಾಂಧವ್ಯಗಳನ್ನು ಗಟ್ಟಿಗೊಳಿಸುವ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಸಾಂಕೇತಿಕವಾಗಿ ಬ್ರಿಟನ್ ನ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಅವರ ಪ್ರತಿಮೆಯನ್ನು ಶ್ವೇತ ಭವನದಲ್ಲಿಟ್ಟುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಬ್ರಿಟನ್ ಸಂಸತ್ ಜನಾಂಗೀಯ ತಾರತಮ್ಯವನ್ನು ಸಹಿಸುವುದಿಲ್ಲ. ಆದರೆ ಮುಸ್ಲಿಂ ರಾಷ್ಟ್ರದ ನಿರಾಶ್ರಿತರಿಗೆ, ವಲಸಿಗರಿಗೆ ಡೊನಾಲ್ಡ್ ಟ್ರಂಪ್ ಅಮೆರಿಕ ಪ್ರವೇಶ ನಿರಾಕರಿಸಿದ್ದಾರೆ. ಆದ್ದರಿಂದ ಸಧ್ಯದಲ್ಲೇ ಬ್ರಿಟನ್ ಗೆ ಭೇಟಿ ನೀಡಲಿರುವ ಡೊನಾಲ್ಡ್ ಟ್ರಂಪ್ ಗೆ ಬ್ರಿಟನ್ ಸಂಸತ್ ನ್ನುದ್ದೇಶಿಸಿ ಮಾತನಾಡಲು ಆಹ್ವಾನ ನೀಡುವುದಿಲ್ಲ ಎಂದು ಹೌಸ್ ಆಫ್ ಕಾಮನ್ಸ್ ನ ಸಭಾಧ್ಯಕ್ಷ ಬೆರ್ಕೋ ಹೇಳಿದ್ದಾರೆ. ಅನ್ಯ ದೇಶದ ಸಂಸತ್ ನ್ನುದ್ದೇಶಿಸಿ ಮಾತನಾಡುವುದು ವ್ಯಕ್ತಿಗತ ಹಕ್ಕು ಅಲ್ಲ. ಅದೊಂದು ಅತ್ಯುನ್ನತ ಗೌರವ. ಅದನ್ನು ಸಂಪಾದಿಸಿಕೊಳ್ಳಬೇಕೇ ಹೊರತು ಪಡೆಯಲು ಸಾಧ್ಯವಿಲ್ಲ ಎಂದು ಬೆರ್ಕೋ ತಿಳಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


