ವಿದೇಶ

ಮಹಿಳಾ ಸಿಬ್ಬಂದಿಗಳು ಮಹಿಳೆಯರಂತೆಯೇ ಉಡುಪು ಧರಿಸಲಿ: ಡೊನಾಲ್ಡ್ ಟ್ರಂಪ್

ಮಹಿಳಾ ಸಿಬ್ಬಂದಿಗಳು ಮಹಿಳೆಯರಂತೆಯೇ ಉಡುಪು ಧರಿಸಬೇಕು, ಪುರುಷರು ಕಟ್ಟುವ ಟೈಗಳಲ್ಲಿ ಬದಲಾವಣೆ...

ಮಹಿಳಾ ಸಿಬ್ಬಂದಿಗಳು ಮಹಿಳೆಯರಂತೆಯೇ ಉಡುಪು ಧರಿಸಲಿ: ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
Published On :
ನವದೆಹಲಿ: ಮಹಿಳಾ ಸಿಬ್ಬಂದಿಗಳು ಮಹಿಳೆಯರಂತೆಯೇ ಉಡುಪು ಧರಿಸಬೇಕು, ಪುರುಷರು ಕಟ್ಟುವ ಟೈಗಳಲ್ಲಿ ಬದಲಾವಣೆ ಮಾಡಬೇಕು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ದಾರೆ ಎಂಬುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಅವರ ಬಳಿ ಕೆಲಸ ಮಾಡುವ ಮಹಿಳೆಯರು ಮತ್ತು ಪುರುಷರಿಗೆ ಅವರು ಧರಿಸುವ ಬಟ್ಟೆಯ ಬಗ್ಗೆ ಕೆಲವು ಷರತ್ತುಗಳನ್ನು ಹೇಳುತ್ತಾರಂತೆ.
ನೀವು ಸಾರ್ವಜನಿಕ ವ್ಯಕ್ತಿಯಾಗಿ ಹೋಗುವುದಿದ್ದರೆ ಅವರು ಯಾವುದೇ ಉದ್ಯೋಗದಲ್ಲಿರಲಿ ನೀವು ನಿಗದಿತ ನೋಟದಲ್ಲಿರಬೇಕು. ಅತ್ಯಂತ ಸ್ವಚ್ಛವಾಗಿ ಉಡುಪು ಧರಿಸಬೇಕು ಎಂದು ಟ್ರಂಪ್ ಹೇಳುತ್ತಾರೆ ಎಂದು ಅವರೊಂದಿಗೆ ಅನೇಕ ವರ್ಷಗಳಿಂದಿರುವ ವ್ಯಕ್ತಿಯೊಬ್ಬರು ಹೇಳಿರುವುದಾಗಿ ಅಕ್ಸಿಯೊಸ್ ಮಾಧ್ಯಮ ಉಲ್ಲೇಖಿಸಿದೆ.
ಉತ್ತಮ ದೈಹಿಕ ವರ್ತನೆ, ಉತ್ತಮ ನೋಟ, ಕೂದಲನ್ನು ಚೆನ್ನಾಗಿ ಬಾಚಿಕೊಂಡಿರಬೇಕು. 
ಮಹಿಳಾ ನೌಕರರು ಜೀನ್ಸ್ ಧರಿಸಿದರೂ ಕೂಡ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಧರಿಸಬೇಕು ಎಂದು ಟ್ರಂಪ್ ವಲಯದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿ ಹೇಳುತ್ತಾರೆ.
ಟ್ರಂಪ್ ವಲಯದ ಮಹಿಳಾ ಪ್ರಚಾರಕರು ಡಾನ್ ಉಡುಪುಗಳನ್ನು ಧರಿಸುತ್ತಾರೆ.
ಪುರುಷರು ಕೂಡ ಇದಕ್ಕೆ ಹೊರತಲ್ಲ, ಅವರಿಗೆ ಕಡ್ಡಾಯವಾಗಿ ಟೈ ಧರಿಸಲು ಹೇಳಲಾಗಿದೆ. ಟ್ರಂಪ್ ಟೈಯಲ್ಲದಿದ್ದರೂ ಬ್ರೂಕ್ಸ್ ಬ್ರದರ್ಸ್ ಟೈಯನ್ನು ಕಟ್ಟಬಹುದಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.