ಬಹುಪಾಲು ಅಮೆರಿಕನ್ನರಿಗೆ ಮತ್ತೆ ಒಬಾಮ ಅವರೇ ಅಧ್ಯಕ್ಷರಾಗಬೇಕಂತೆ!
ಖ್ಯಾತ ಉದ್ಯಮಿ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಎರಡು ವಾರಗಳಷ್ಟೇ ಕಳೆದಿವೆ. ಅಷ್ಟರಲ್ಲೇ ಡೊನಾಲ್ಡ್ ಟ್ರಂಪ್ ವಿರುದ್ಧ...

ವಾಷಿಂಗ್ಟನ್: ಖ್ಯಾತ ಉದ್ಯಮಿ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಎರಡು ವಾರಗಳಷ್ಟೇ ಕಳೆದಿವೆ. ಅಷ್ಟರಲ್ಲೇ ಡೊನಾಲ್ಡ್ ಟ್ರಂಪ್ ವಿರುದ್ಧ ಜನಾದೇಶವಾಗಿದ್ದು ಈ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಅವರೇ ಮತ್ತೆ ಅಧ್ಯಕ್ಷರಾಗಲಿ ಎಂಬ ಕೂಗು ಕೇಳಿಸುತ್ತಿದೆ.
ಪಬ್ಲಿಕ್ ಪಾಲಿಸಿ ಮತದಾನದಲ್ಲಿ ಈ ವಿಷಯ ಬಹಿರಂಗಗೊಂಡಿದೆ. ಸುಮಾರು 52ರಷ್ಟು ಮಂದಿ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮತ್ತೆ ಅಧ್ಯಕ್ಷರಾಗಲಿ ಎಂದು ಮತದಾನ ಮಾಡಿದ್ದರೇ, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಬರಿ 43ರಷ್ಟು ಜನ ಮತ ಹಾಕಿದ್ದಾರೆ.
ಹೊಸ ಆದೇಶಗಳನ್ನು ತರುವ ಮೂಲಕ ವಿಶ್ವವನ್ನೇ ಸಂಕಷ್ಟಕ್ಕೆ ಸಿಲುಕಿಸುತ್ತಿರುವ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಜನಾದೇಶವಾಗಿದೆ. ಸಾಮಾನ್ಯವಾಗಿ ಹೊಸದಾಗಿ ಚುನಾಯಿತ ಅಧ್ಯಕ್ಷ ತಮ್ಮ ಜನಪ್ರಿಯತೆಯ ಉತ್ತುಂಗದಲ್ಲಿದ್ದರು ಅವರಿಗೆ ಸೂಕ್ತ ಜನಬೆಂಬಲ ಸಿಗಲಿಲ್ಲ ಎಂದು ಪಬ್ಲಿಕ್ ಪಾಲಿಸಿ ಮತದಾನದ ಅಧ್ಯಕ್ಷ ಡೀನ್ ಡೆಬ್ನಾಮ್ ಹೇಳಿದ್ದಾರೆ.
ಪಬ್ಲಿಕ್ ಪಾಲಿಸಿ ಮತದಾನದಲ್ಲಿ ಡೊನಾಲ್ಡ್ ಟ್ರಂಪ್ ಪರ ಶೇಖಡ 40ಕ್ಕೂ ಹೆಚ್ಚು ಮತದಾನವಾಗಿದೆ. ಆದರೆ ಡೊನಾಲ್ಡ್ ಟ್ರಂಪ್ ಗಿಂತ ಮಾಜಿ ಅಧ್ಯಕ್ಷ ಬರಾಕ್ ಒಬಾಮಾರನ್ನು ಜನರು ಹೆಚ್ಚಾಗಿ ಆರಾಧಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


