ಎಚ್ 1ಬಿ ವೀಸಾ ಹೊಂದಿರುವವರ ಪತ್ನಿಯರ ಕೆಲಸಕ್ಕೆ ಕತ್ತರಿ ಹಾಕಲು ಅಮೆರಿಕಾ ಚಿಂತನೆ
ಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಅಮೆರಿಕದಲ್ಲಿ ಕಾರ್ಯನಿರ್ವಹಿಸುವ ಅರ್ಹತೆ ನೀಡುವ ಎಚ್ 1ಬಿ ವೀಸಾ ಹೊಂದಿರುವರ ಪತ್ನಿಯರು ತಂತ್ರಜ್ಞಾನದ ಉದ್ಯೋಗಗಳಂತಹಾ ..........

Published On :
ವಾಷಿಂಗ್ ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಅಮೆರಿಕದಲ್ಲಿ ಕಾರ್ಯನಿರ್ವಹಿಸುವ ಅರ್ಹತೆ ನೀಡುವ ಎಚ್ 1ಬಿ ವೀಸಾ ಹೊಂದಿರುವರ ಪತ್ನಿಯರು ತಂತ್ರಜ್ಞಾನದ ಉದ್ಯೋಗಗಳಂತಹಾ ಪ್ರಮುಖ ಜಾಲದಿಂದ ಹೊರಗುಳಿಯ ಬೇಕಾಗಬಹುದು. 2015 ರಿಂದಲೂ, ಎಚ್ 1ಬಿ ಯ ವೀಸಾ ಅಥವಾ ಹೆಚ್ಚಿನ-ನುರಿತ ವೀಸಾ ಹೊಂದಿರುವವರು ಗ್ರೀನ್ ಕಾರ್ಡ್ ಗಾಗಿ ಗಿ ಕಾಯುತ್ತಿದ್ದಾರೆ, ಅವರು ಎಚ್ -4 ವೀಸಾಗಳಲ್ಲಿ ಅಮೆರಿಕಾ ದಲ್ಲಿ ಕೆಲಸ ಮಾಡಲು ಅರ್ಹತೆ ಹೊಂದಿರುತ್ತಾರೆ, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಆಡಳಿತವು ಈ ನಿಯಮವನ್ನು ಸೇರಿಸಿತ್ತು ಎಂದು ಸಿಎನ್ ಎನ್ ವರದಿ ಮಾಡಿದೆ.
ತಂತ್ರಜ್ಞಾನ ಕ್ಷೇತ್ರವು ಎಚ್ 1ಬಿ ವೀಸಾ ಹೊಂದಿರುವವರ ಪ್ರಮುಖ ಉದ್ಯೋಗ ಕ್ಷೇತ್ರವಾಗಿದೆ. ಆದರೆ, ಹೋಮ್ ಲ್ಯಾಂಡ್ ರಕ್ಷಣಾ ಇಲಾಖೆ ಈ ನಿಯಮವನ್ನು ದೂರವಿಡಲು ಉದ್ದೇಶಿಸಿದೆ ಎಂದು ತಿಳಿದು ಬಂದಿದೆ. ಹೇಗಾದರೂ, ಇಲಾಖೆ ತನ್ನ ಈ ನಿರ್ಧಾರಕ್ಕೆ ಕಾರಣಗಳನ್ನು ತಿಳಿಸಿಲ್ಲ, ಟ್ರಂಪ್ ಕಳೆದ ಏಪ್ರಿಲ್ ನಲ್ಲಿ ಸಹಿ ಮಾಡಿದ್ದ "ಬೈ ಅಮೇರಿಕನ್, ಹೈರ್ ಅಮೇರಿಕನ್" ಆದೇಶವನ್ನು ನಾವು ಪಾಲಿಸುತ್ತೇವೆ ಎಂದಿದೆ. ಆದರೆ ನಿಯಮವನ್ನು ತೆಗೆದು ಹಾಕಲು ಔಪಚಾರಿಕ ಪ್ರಕ್ರಿಯೆಯನ್ನು ಇನ್ನಷ್ಟೇ ಪ್ರಾರಂಭಿಸಬೇಕಿದೆದೆ.
ಪತ್ನಿಯರು ಕೆಲಸ ಮಾಡಲು ಅನುಮತಿಸುವ ನಿಯಮವನ್ನು ಬಿಡುವುದರ ಜೊತೆಗೆ, ಹೋಂ ಲ್ಯಾಂಡ್ ರಕ್ಷಣಾ ಹೇಳಿಕೆ ಇಲಾಖೆ ಎಚ್ 1ಬಿ ವೀಸಾ ನಿಯಮಗಳಲ್ಲಿ ಇತರ ಬದಲಾವಣೆಗಳನ್ನು ತರುವುದಾಗಿಯೂ ತಿಳಿಸಿದೆ ಎಂದು ಸಿಎನ್ಎನ್ ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
H1-B visaUS President Donald Trumpಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್technology jobsDepartment of Homeland Securityಎಚ್ 1ಬಿ ವೀಸಾತಂತ್ರಜ್ಞಾನ ಉದ್ಯೋಗಗಳುಹೋಂ ಲ್ಯಾಂಡ್ ರಕ್ಷಣಾ ಇಲಾಖೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


