ವಿದೇಶ

ಚೀನಾದ ವಾಯುಪ್ರದೇಶವನ್ನು ಭಾರತದ ಡ್ರೋಣ್ ಗಳು ಅತಿಕ್ರಮಿಸಿವೆ: ಚೀನಾ ಮಾಧ್ಯಮದ ಆರೋಪ

ಭಾರತದ ಡ್ರೋಣ್ ಗಳು ಚೀನಾದ ವಾಯುಪ್ರದೇಶವನ್ನು ಅತಿಕ್ರಮಣ ಮಾಡಿವೆ ಎಂದು ಚೀನಾದ ಮಾಧ್ಯಮ ಆರೋಪಿಸಿವೆ.

ಚೀನಾದ ವಾಯುಪ್ರದೇಶವನ್ನು ಭಾರತದ ಡ್ರೋಣ್ ಗಳು ಅತಿಕ್ರಮಿಸಿವೆ: ಚೀನಾ ಮಾಧ್ಯಮದ ಆರೋಪ
ಭಾರತ-ಚೀನಾ ಗಡಿ (ಸಂಗ್ರಹ ಚಿತ್ರ)
Published On :
ಬೀಜಿಂಗ್: ಭಾರತದ ಡ್ರೋಣ್ ಗಳು ಚೀನಾದ ವಾಯುಪ್ರದೇಶವನ್ನು ಅತಿಕ್ರಮಣ ಮಾಡಿವೆ ಎಂದು ಚೀನಾದ ಮಾಧ್ಯಮ ಆರೋಪಿಸಿವೆ. 
ಚೀನಾ ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಯ ಹೇಳಿಕೆಯನ್ನು ಉಲ್ಲೇಖಿಸಿ ಚೀನಾ ಮಾಧ್ಯಮಗಳು ಆರೋಪ ಮಾಡಿದ್ದು, ಚೀನಾದ ಗಡಿ ಪ್ರದೇಶದ ಸಿಬ್ಬಂದಿಗಳು ಭಾರತದ ಡ್ರೋಣ್ ಗಳು ಚೀನಾ ವಾಯು ಪ್ರದೇಶವನ್ನು ಅತಿಕ್ರಮಣ ಮಾಡಿರುವುದನ್ನು ಗುರುತಿಸಿದ್ದಾರೆ ಎಂದು ಹೇಳಿವೆ.
ಇದಕ್ಕೂ ಮುನ್ನ ಚೀನಾದ ನೌಕಾ ಪಡೆ ಸಾಮರ್ಥ್ಯ ಹೆಚ್ಚುತ್ತಿರುವುದರ ವಿರುದ್ಧವಾಗಿ ಭಾರತ ಅಮೆರಿಕಾವನ್ನು ಎತ್ತಿಕಟ್ಟಲು ಯತ್ನಿಸುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬೆನ್ನಲ್ಲೇ ಚೀನಾದ ವಾಯುಪ್ರದೇಶವನ್ನು ಭಾರತದ ಡ್ರೋಣ್ ಗಳು ಅತಿಕ್ರಮಿಸಿವೆ ಎಂದು ಚೀನಾ ಆರೋಪ ಮಾಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.