ಹಾರ್ವೆ ಚಂಡಮಾರುತ ಪೀಡಿತ ಟೆಕ್ಸಾಸ್ ನಲ್ಲಿ 2 ಸ್ಫೋಟ!
ಹಾರ್ವೆ ಚಂಡುಮಾರುತದಿಂದಾಗಿ ಪ್ರವಾಹದಲ್ಲಿ ಮುಳುಗಿರುವ ಅಮೆರಿಕದ ಟೆಕ್ಸಾಸ್ ನಲ್ಲಿ 2 ಸ್ಫೋಟವಾದ ಕುರಿತು ಮಾಹಿತಿ ಕೇಳಿಬಂದಿದ್ದು, ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳಗಳು ದೌಡಾಯಿಸಿವೆ.

ಟೆಕ್ಸಾಸ್: ಹಾರ್ವೆ ಚಂಡುಮಾರುತದಿಂದಾಗಿ ಪ್ರವಾಹದಲ್ಲಿ ಮುಳುಗಿರುವ ಅಮೆರಿಕದ ಟೆಕ್ಸಾಸ್ ನಲ್ಲಿ 2 ಸ್ಫೋಟವಾದ ಕುರಿತು ಮಾಹಿತಿ ಕೇಳಿಬಂದಿದ್ದು, ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳಗಳು ದೌಡಾಯಿಸಿವೆ.
ಹಾರ್ವೆ ಚಂಡಮಾರುತ ಮತ್ತು ಸತತ ಮಳೆಯಿಂದಾಗಿ ಪ್ರವಾಹದಲ್ಲಿ ಮುಳುಗಿರುವ ಅಮೆರಿಕದ ಟೆಕ್ಸಾಸ್ ನಗರದಲ್ಲಿ ಮತ್ತೊಂದು ಅವಘಡ ಸಂಭವಿಸಿದ್ದು, ನಗರದ ಹೊರವಲಯದಲ್ಲಿರುವ ಅರ್ಕೇಮಾ ಇಂಕ್ ಮಾಲೀಕತ್ವದ ರಾಸಾಯನಿಕ ಘಟಕದಲ್ಲಿ ಈ ಸ್ಫೋಟಗಳು ಸಂಭವಿಸಿವೆ. ಸ್ಥಳೀಯ ಕಲಾಮಾನ ಬೆಳಗ್ಗೆ 2 ಗಂಟೆ ಸುಮಾರಿನಲ್ಲಿ ಅವಳಿ ಸ್ಫೋಟ ಸಂಭವಿಸಿದ್ದು, ಸ್ಫೋಟಕ್ಕೆ ನಿಖರ ಕಾರಣ ಏನು ಎಂದು ತಿಳಿದುಬಂದಿಲ್ಲ. ಆದರೆ ರಾಸಾಯನಿಕ ಸೋರಿಕೆಯಾಗುವ ಆತಂಕದ ಮೇರೆಗೆ ಸ್ಥಳೀಯ ಅಧಿಕಾರಿಗಳು ಘಟಕದ ಸುತ್ತಮುತ್ತಲಿನ ಸುಮಾರು 5 ಕಿ.ಮೀ ವ್ಯಾಪ್ತಿಯಲ್ಲಿನ ಜನರ ತೆರವಿಗೆ ಆದೇಶಿಸಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ. ತಜ್ಞರು ಅಭಿಪ್ರಾಯಪಟ್ಟಿರುವಂತೆ ಘಚಕದಿಂದ ರಾಸಾಯನಿಕ ಸೋರಿಕೆಯಾಗದಂತೆ ಅಧಿಕಾರಿಗಳು ಮುನ್ನಚ್ಚರಿಕೆ ವಹಿಸಬೇಕು. ಇಲ್ಲವಾದರೆ ರಾಸಾಯನಿಕ ನಗರಾದ್ಯಂತ ಪಸರಿಸುವ ಸಾಧ್ಯತೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ಟೆಕ್ಸಾನ್ ನಗರಕ್ಕೆ ಹಾರ್ವೆ ಚಂಡಮಾರುತ ಅಪ್ಪಳಿಸಿದ್ದರಿಂದ ನಗರದಲ್ಲಿ ಭಾರಿ ಪ್ರಮಾಣದ ಮಳೆಯಾಗಿ ನಗರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


