ಸ್ಪೇನ್ ಬಳಿಕ ಫಿನ್ಲೆಂಡ್ಟನಲ್ಲೂ ಚೂರಿ ದಾಳಿ, 2 ಸಾವು, 6 ಮಂದಿಗೆ ಗಾಯ
ಸ್ಪೇನ್ ನಲ್ಲಿ ಉಗ್ರರು ಅಟ್ಟಹಾಸ ಮೆರೆದ ಬೆನ್ನಲ್ಲೇ, ಫಿನ್ ಲ್ಯಾಂಡ್ ನ ಟರ್ಕುನಲ್ಲೂ ಶುಕ್ರವಾರ ನಡೆದ ದಾಳಿಯೊಂದರಲ್ಲಿ ಸಿಕ್ಕಸಿಕ್ಕವರಿಗೆ ಯದ್ವಾತದ್ವಾ ಇರಿದ ಘಟನೆ ನಡೆದಿದ್ದು...

Published On :
ಹೆಲ್ಸಿಂಕಿ: ಸ್ಪೇನ್ ನಲ್ಲಿ ಉಗ್ರರು ಅಟ್ಟಹಾಸ ಮೆರೆದ ಬೆನ್ನಲ್ಲೇ, ಫಿನ್ ಲ್ಯಾಂಡ್ ನ ಟರ್ಕುನಲ್ಲೂ ಶುಕ್ರವಾರ ನಡೆದ ದಾಳಿಯೊಂದರಲ್ಲಿ ಸಿಕ್ಕಸಿಕ್ಕವರಿಗೆ ಯದ್ವಾತದ್ವಾ ಇರಿದ ಘಟನೆ ನಡೆದಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟು 8 ಮಂದಿ ಗಾಯಗೊಂಡಿದ್ದಾರೆ.
ದಾಳಿಯಾಗುತ್ತಿದ್ದಂತೆಯೇ ಅಲ್ಲಿನ ಸೇನಾ ಪಡೆಗಳು ದೇಶದಾದ್ಯಂತ ಭದ್ರತೆಯನ್ನು ಹೆಚ್ಚಿಸಿದ್ದಾರೆ.
ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದು, ಇನ್ನುಳಿದ 6 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಟರ್ಕು ಪೊಲೀಸರು ಟ್ವೀಟ್ ಮಾಡಿದ್ದಾರೆ.
ದಾಳಿಯಾದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕಾಗಮಿಸಿ ಭದ್ರತಾ ಸಿಬ್ಬಂದಿಗಳು ದಾಳಿಕೋರನ ಮೇಲೆ ಗುಂಡು ಹಾರಿಸಿದರು. ಗಾಯಗೊಂಡು ಕಳೆದ ಬಿದ್ದ ದಾಳಿಕೊರನನ್ನು ನಂತರ ಬಂಧನಕ್ಕೊಳಪಡಿಸಲಾಗಿದೆ.
ದಾಳಿಕೋರನ ಕುರಿತ ಮಾಹಿತಿ ಈ ನರೆಗೂ ಬಹಿರಂಗಗೊಂಡಿಲ್ಲ. ದಾಳಿಯ ಹಿಂದಿರುವ ಉದ್ದೇಶ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದಾಳಿಕೋರ ವಿದೇಶಿ ಮೂಲದವನಾಗಿದ್ದಾನೆಂದು ಹೇಳಿರುವ ಅಧಿಕಾರಿಗಳು, ದಾಳಿಕೋರನ ಮಾಹಿತಿಯನ್ನು ಬಹಿರಂಗಗೊಳಿಸಲು ನಿರಾಕರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


