ಉಗ್ರರ ದಾಳಿ

ಮಣಿಪುರದಲ್ಲಿ ಉಗ್ರರ ಅಟ್ಟಹಾಸ: ನಾಲ್ವರ ಸಾವು, ಒಬ್ಬ ನಾಪತ್ತೆ
ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಶಸ್ತ್ರಸಜ್ಜಿತ ಉಗ್ರರು ವಾಹನದ ಮೇಲೆ ಹೊಂಚುಹಾಕಿ ದಾಳಿ ನಡೆಸಿದ್ದು, ಲಿಯಾಂಗ್‌ಮೈ ನಾಗಾ ಸಮುದಾಯಕ್ಕೆ ಸೇರಿದ ನಾಲ್ವರು ಮೃತಪಟ್ಟಿದ್ದಾರೆ.

ಕರಾಚಿಯಲ್ಲಿ ಉಗ್ರರ ದಾಳಿ: ಮೂವರು ಯೋಧರ ಸಾವು; ಭಾರತದತ್ತ ಬೊಟ್ಟು ಮಾಡಿದ ಪಾಕಿಸ್ತಾನ, ಪ್ರತೀಕಾರದ ಎಚ್ಚರಿಕೆ..!
ದಾಳಿಯ ಹೊಣೆಯನ್ನು ಪಾಕಿಸ್ತಾನ ತಾಲಿಬಾನ್‌ನಿಂದ ಬೇರ್ಪಟ್ಟಿರುವ ಜಮಾತ್-ಉಲ್-ಅಹ್ರಾರ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಆದಾಗ್ಯೂ, ಪಾಕಿಸ್ತಾನ ಸೇನೆ ಈ ಸಂಘಟನೆಯನ್ನು "ಭಾರತದ ಪ್ರಾಕ್ಸಿ" ಎಂದು ಆರೋಪಿಸಿದ್ದು, ಭಾರತದ ಬೆಂಬಲದಿಂದಲೇ ದಾಳಿ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಿದೆ.

ಉಗ್ರರ ದಾಳಿ ಭೀತಿ; ದೆಹಲಿ-ಉತ್ತರಾಖಂಡದಲ್ಲಿ ಹೈ ಅಲರ್ಟ್, ದೇವಾಲಯ-ರೈಲು ನಿಲ್ದಾಣಗಳಿಗೆ ಬಿಗಿ ಭದ್ರತೆ..!
ಗುಪ್ತಚರ ಮೂಲಗಳ ಪ್ರಕಾರ, ಬೆದರಿಕೆ ಇ-ಮೇಲ್‌ನಲ್ಲಿ ದೆಹಲಿ ಮತ್ತು ಉತ್ತರಾಖಂಡದ ಹಲವು ದೇವಾಲಯಗಳು, ಸರ್ಕಾರಿ ಕಚೇರಿಗಳು, ರೈಲು ನಿಲ್ದಾಣಗಳು ಹಾಗೂ ಪೊಲೀಸ್ ಕಟ್ಟಡಗಳನ್ನು ಸಂಭಾವ್ಯ ಗುರಿಗಳಾಗಿ ಉಲ್ಲೇಖಿಸಲಾಗಿದೆ.

ಮಣಿಪುರ: ಹೊಂಚು ಹಾಕಿ ಉಗ್ರರ ದಾಳಿ; ಕುಕಿ ಚರ್ಚ್‌ನ ಮೂವರು ನಾಯಕರು ಬಲಿ, ನಾಲ್ವರಿಗೆ ಗಾಯ
ದಾಳಿ ನಡೆದಾಗ ಥಡೌ ಬ್ಯಾಪ್ಟಿಸ್ಟ್ ಅಸೋಸಿಯೇಷನ್(ಟಿಬಿಎ) ಮತ್ತು ಯುನೈಟೆಡ್ ಬ್ಯಾಪ್ಟಿಸ್ಟ್ ಕೌನ್ಸಿಲ್‌ಗೆ ಸೇರಿದ ನಿಯೋಗ, ಚುರಚಂದ್‌ಪುರದಿಂದ ಕಾಂಗ್‌ಪೋಕ್ಪಿಗೆ ಅಂತರ-ಸಂಘಟನೆಯ ಚರ್ಚ್ ಸಭೆಗೆ ತೆರಳುತ್ತಿದ್ದರು.

Pahalgam Terror Attack: ಉಗ್ರರ ಪೈಶಾಚಿಕ ಕೃತ್ಯದ ಬಳಿಕ ನಿಧಾನಗತಿಯಲ್ಲಿ ಕಾಶ್ಮೀರದತ್ತ ಮುಖ ಮಾಡಿದ ಪ್ರವಾಸಿಗರು
ಏಪ್ರಿಲ್ 22ರ ಉಗ್ರರ ಪೈಶಾಚಿಕ ಕೃತ್ಯದ ಬಳಿಕ ಮುಚ್ಚಲ್ಪಟ್ಟ ಕೆಲವು ಪ್ರವಾಸಿ ತಾಣಗಳನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮತ್ತೆ ತೆರೆದಿದ್ದು, ಇದರ ಬೆನ್ನಲ್ಲೇ ಪಹಲ್ಗಾಮ್'ಗೆ ಭೇಟಿ ನೀಡಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.

'ಭಯೋತ್ಪಾದನಾ ದಾಳಿ ಯಶಸ್ಸಿಗೆ ಹಣದ ಅಗತ್ಯವಿರುತ್ತದೆ': ಪಹಲ್ಗಾಮ್ ಹತ್ಯಾಕಾಂಡಕ್ಕೆ FATF ತೀವ್ರ ಖಂಡನೆ, ಪಾಕ್ ಗೆ 'Grey List' ಭೀತಿ
22 ಏಪ್ರಿಲ್ 2025 ರಂದು ಪಹಲ್ಗಾಮ್ ನಲ್ಲಿ ನಡೆದ ಕ್ರೂರ ಭಯೋತ್ಪಾದಕ ದಾಳಿ ಕಳವಳಕಾರಿ ಹಾಗೂ ಖಂಡನೀಯವಾಗಿದೆ.

ಜಮ್ಮು-ಕಾಶ್ಮೀರ: ಪಹಲ್ಗಾಮ್ ಬಳಿಕ ಕಾರಾಗೃಹಗಳ ಮೇಲೆ ದಾಳಿಗೆ ಸಂಚು; ಹೈಅಲರ್ಟ್ ಘೋಷಣೆ
ಶ್ರೀನಗರದ ಸೆಂಟ್ರಲ್ ಜೈಲು ಹಾಗೂ ಜಮ್ಮುವಿನ ಕೋಟ್ ಬಲ್ವಾಲ್ ಜೈಲಿನ ಮೇಲೆ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿರುವುದಾಗಿ ಗುಪ್ತಚರ ದಳ ಮಾಹಿತಿ ನೀಡಿದೆ.

ಉಗ್ರರ ಮನೆ ನೆಲಸಮ; ಪ್ರತೀಕಾರಕ್ಕೆ TRF ಮುಂದು: ಕಾಶ್ಮೀರಿ ಪಂಡಿತರು-ಮುಸ್ಲಿಮೇತರ ವಲಸೆ ಕಾರ್ಮಿಕರ ಮೇಲೆ ದಾಳಿಗೆ ಸಂಚು; ಗುಪ್ತಚರ ದಳ ಎಚ್ಚರಿಕೆ
ಪಹಲ್ಗಾಮ್ ಉಗ್ರರ ದಾಳಿ ಬಳಿಕ ಸಕ್ರಿಯ ಭಯೋತ್ಪಾದಕರಿಗೆ ಸಂಬಂಧಿಸಿದ ಒಂಬತ್ತು ಮನೆಗಳನ್ನು ಭಾರತೀಯ ಸೇನಾಪಡೆ ಧ್ವಂಸಗೊಳಿಸಿತ್ತು.

Pahalgam Attack: ಉಗ್ರರ ಸ್ಲೀಪರ್ ಸೆಲ್ ಮತ್ತೆ ಆ್ಯಕ್ಟಿವ್; ಮತ್ತಷ್ಟು ದಾಳಿ ಸಾಧ್ಯತೆ, ಕಾಶ್ಮೀರದ 48 ಪ್ರವಾಸಿ ತಾಣಗಳು ಬಂದ್!
ಪಹಲ್ಗಾಮ್ ದಾಳಿಯ ನಂತರ ಕಣಿವೆ ಪ್ರದೇಶದಲ್ಲಿ ಉಗ್ರರ ಸ್ಲೀಪರ್ ಸೆಲ್ ಸಕ್ರಿಯವಾಗಿದ್ದು, ಮತ್ತಷ್ಟು ದಾಳಿಗೆ ಸಂಚು ರೂಪಿಸಿವೆ.

