ವಿದೇಶ

ಲಾಹೋರ್ ಎನ್'ಕೌಂಟರ್: ಹೈದರಾಬಾದ್ ಮೂಲದ ಮಹಿಳೆ ಬಂಧನ

ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ (ಇಸಿಸ್) ಉಗ್ರ ಸಂಘಟನೆಗೆ ಸೇರಲು ಸಿರಿಯಾಗೆ ಭೇಟಿ ನೀಡಿದ್ದ ಹೈದರಾಬಾದ್ ಮೂಲದ ಮಹಿಳೆಯೊಬ್ಬರನ್ನು ಲಾಹೋರ್ ಎನ್'ಕೌಂಟರ್ ವೇಳೆ ಬಂಧನಕ್ಕೊಳಪಡಿಸಿರುವುದಾಗಿ...

ಲಾಹೋರ್ ಎನ್'ಕೌಂಟರ್: ಹೈದರಾಬಾದ್ ಮೂಲದ ಮಹಿಳೆ ಬಂಧನ
ಸಂಗ್ರಹ ಚಿತ್ರ
Published On :
ಲಾಹೋರ್: ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ (ಇಸಿಸ್) ಉಗ್ರ ಸಂಘಟನೆಗೆ ಸೇರಲು ಸಿರಿಯಾಗೆ ಭೇಟಿ ನೀಡಿದ್ದ ಹೈದರಾಬಾದ್ ಮೂಲದ ಮಹಿಳೆಯೊಬ್ಬರನ್ನು ಲಾಹೋರ್ ಎನ್'ಕೌಂಟರ್ ವೇಳೆ ಬಂಧನಕ್ಕೊಳಪಡಿಸಿರುವುದಾಗಿ ಸೋಮವಾರ ತಿಳಿದುಬಂದಿದೆ. 
ಈ ಕುರಿತಂತೆ ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ. ಬಂಧಿತ ಮಹಿಳೆಯನ್ನು ನೌರೀನ್ ಲೆಘಾರಿ ಎಂದು ಗುರ್ತಿಸಲಾಗಿದ್ದು, ಈಕೆ ಹೈದರಾಬಾದ್'ನ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಳೆ. ಮೂರು ವಾರಗಳ ಹಿಂದೆಯೇ ಮಹಿಳೆ ಲಾಹೋರ್ ಗೆ ಬಂದಿದ್ದಳೆಂದು ಡಾನ್ ವರದಿ ಮಾಡಿದೆ. 
ಸಾಮಾಜಿಕ ಜಾಲತಾಣಗಳ ಮೂಲಕ ಸಿರಿಯಾದಲ್ಲಿನ ಇಸಿಸ್ ಜೊತೆಗೆ ಕೈಜೋಡಿಸಿದ್ದ ಮಹಿಳೆ, ಶಸ್ತ್ರಾಸ್ತ್ರಗಳ ಬಳಕೆ ಕುರಿತಂತೆ ಸಿರಿಯಾದಲ್ಲಿ ತರಬೇತಿ ಪಡೆದಿದ್ದಳು. ಲಾಹೋರ್ ಎನ್ ಕೌಂಟರ್ ಬಳಿಕ ಮಹಿಳೆಯನ್ನು ಭದ್ರತಾ ಸಿಬ್ಬಂದಿಗಳು ಬಂಧಿಸಿದ್ದಾರೆಂದು ಮೂಲಗಳು ತಿಳಿಸಿವೆ. 
ಶುಕ್ರವಾರ ರಾತ್ರಿಯಷ್ಟೇ ಸೇನಾ ಪಡೆ ಲಾಹೋರ್ ನಲ್ಲಿ ಎನ್ ಕೌಂಟರ್ ನಡೆಸಿತ್ತು. ಈ ವೇಳೆ ಮಹಿಳೆಯ ಪತಿಯನ್ನು ಭದ್ರತಾ ಸಿಬ್ಬಂದಿಗಳು ಹತ್ಯೆ ಮಾಡಿದ್ದರು. ಇದಾದ ಬಳಿಗ ಲೆಘಾರಿಯವರನ್ನು ಬಂಧನಕ್ಕೊಳಪಡಿಸಲಾಗಿದೆ. 
ಎನ್ ಕೌಂಟರ್ ನಡೆದ ಸ್ಥಳದಲ್ಲಿ ಮಹಿಳೆಯ ಕಾಲೇಜು ಐಡಿ ಹಾಗೂ ಆಕೆ ತಂದೆ ರಾಷ್ಟ್ರೀಯತೆಯ ಐಡಿ ಕಾರ್ಡ್ ಗಳು ದೊರಕಿದ್ದವು. ಈ ವೇಳೆ ಮಹಿಳೆ ಹೈದರಾಬಾದ್ ಮೂಲದವಳೆಂಬ ಮಾಹಿತಿ ತಿಳಿದಿದೆ. ಪ್ರಸ್ತುತ ಲೆಘಾರಿಯನ್ನು ವಶಕ್ಕೆ ಪಡೆದುಕೊಂಡಿರುವ ಅಧಿಕಾರಿಗಳು, ವಿಚಾರಣೆ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.