ಸಿರಿಯಾ ಬಗೆಗಿನ ನಿಮ್ಮ ಕಾರ್ಯತಂತ್ರ ಪ್ರದರ್ಶಿಸಿ: ಟ್ರಂಪ್ ಗೆ ರಷ್ಯಾದ ಸವಾಲು
ಸಿರಿಯಾ ಮೇಲೆ ಅಮೆರಿಕಾದ ಕಾರ್ಯತಂತ್ರವೇನಿದೆಯೋ ಅದನ್ನು ಜಾರಿಗೆ ತರುವಂತೆ ಡೊನಾಲ್ಡ್ ಟ್ರಂಪ್ ಗೆ ರಷ್ಯಾ ಸವಾಲು ಹಾಕಿದೆ.

Published On :
ಮಾಸ್ಕೋ: ಸಿರಿಯಾ ಮೇಲೆ ಅಮೆರಿಕಾದ ಕಾರ್ಯತಂತ್ರವೇನಿದೆಯೋ ಅದನ್ನು ಜಾರಿಗೆ ತರುವಂತೆ ಡೊನಾಲ್ಡ್ ಟ್ರಂಪ್ ಗೆ ರಷ್ಯಾ ಸವಾಲು ಹಾಕಿದೆ. ಸಿರಿಯಾದಲ್ಲಿ ನಡೆದಿರುವ ರಾಸಾಯನಿಕ ದಾಳಿ ಬಗ್ಗೆ ಮಾತನಾಡಿದ್ದ ಡೊನಾಲ್ಡ್ ಟ್ರಂಪ್ ರಾಸಾಯನಿಕ ದಾಳಿ ಸಿರಿಯಾದ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಅವರ ಆಡಳಿತದ ಬಗ್ಗೆ ತಮ್ಮ ಅಭಿಪ್ರಾಯವನ್ನು ಪರಿವರ್ತಿಸಿದೆ ಎಂದು ಹೇಳಿದ್ದರು.
ಸಿರಿಯಾದಲ್ಲಿ ನಡೆದಿರುವ ರಾಸಾಯನಿಕ ದಾಳಿಯಲ್ಲಿ 85 ಜನರು ಮೃತಪಟ್ಟಿದ್ದಾರೆ. ಇದು ತಾವು ಕಠಿಣ ನಿಲುವು ತೆಗೆದುಕೊಳ್ಳುವಂತೆ ಮಾಡಿದೆ, ಸಿರಿಯಾ ಈಗ ತಮ್ಮ ಜವಾಬ್ದಾರಿ ಎಂಬ ಅರ್ಥದಲ್ಲಿ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು. ಡೊನಾಲ್ಡ್ ಟ್ರಂಪ್ ಹೇಳಿಕೆ ನಂತರ ರಷ್ಯಾ ಸಿರಿಯಾ ಅಧ್ಯಕ್ಷರಿಗೆ ನೀಡುವ ಬೆಂಬಲವನ್ನು ಮರುಪರಿಶೀಲನೆಗೊಳಪಡಿಸುತ್ತದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ರಷ್ಯಾ ಪ್ರತಿಕ್ರಿಯೆ ನೀಡಿದ್ದು, ಅಮೆರಿಕಾ ಸಿರಿಯಾ ಬಗೆಗಿನ ಕಾರ್ಯತಂತ್ರವನ್ನು ಪ್ರದರ್ಶಿಸಲಿ ಎಂಬ ಸವಾಲು ಹಾಕಿದೆ.
ಅಸ್ಸಾದ್ ಕುರಿತ ರಷ್ಯಾದ ಧೋರಣೆ ಸ್ಪಷ್ಟವಾಗಿದೆ. ಅಸ್ಸಾದ್ ಸ್ವತಂತ್ರ ರಾಷ್ಟ್ರವೊಂದರ ಕಾನೂನಾತ್ಮಕ ಅಧ್ಯಕ್ಷ. ಇದು ರಷ್ಯಾದ ನಿಲುವಾಗಿದ್ದು ರಷ್ಯಾದ ಧೋರಣೆಯಾಗಿದ್ದು, ಅಮೆರಿಕಾದ್ದು ಯಾವುದು ಎಂದು ವಿದೇಶಾಂಗ ಸಚಿವಾಲಯ ಪ್ರಶ್ನಿಸಿದೆ.
ಸಿರಿಯಾದಲ್ಲಿ ನಡೆದಿರುವ ಭೀಭತ್ಸ, ಅಪಾಯಕಾರಿ ಅಪರಾಧ. ಆದರೆ ಸುಖಾಸುಮ್ಮನೆ ಯಾರೊಬ್ಬರನ್ನೋ ದೂಷಿಸಿ, ಹಣೆಪಟ್ಟಿ ನೀಡುವುದು ಸರಿಯಲ್ಲ ಎಂಬುದು ನಮ್ಮ ಅಭಿಪ್ರಾಯ. ರಷ್ಯಾ ಸಿರಿಯಾದ ಅತ್ಯಂತ ಶಕ್ತಿಶಾಲಿ ಮಿತ್ರರಾಷ್ಟ್ರವಾಗಿದ್ದು, ಸಿರಿಯಾದ ಮೇಲಿನ ಅಸ್ಸಾದ್ ಹಿಡಿತಕ್ಕೆ ಪೂರಕವಾದ ರಕ್ಷಣಾ ಬಲವನ್ನು ನೀಡಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಿರಿಯಾದಲ್ಲಿ ನಡೆಯುತ್ತಿರುವ ರಕ್ತಪಾತಕ್ಕೆ ಅಮೆರಿಕಾದ ಈ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಅವರ ದುರ್ಬಲ ನೀತಿಗಳೇ ಕಾರಣ ಎಂದು ಆರೋಪಿಸುತ್ತಿದ್ದ ಡೊನಾಲ್ಡ್ ಟ್ರಂಪ್, ಈಗ ಏ.4 ರಂದು ನಡೆದ ದುರಂತಕ್ಕೆ ಸಿರಿಯಾದ ಆಡಳಿತವೇ ಕಾರಣ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ರಷ್ಯಾ ಅಮೆರಿಕಾಗೆ ಸವಾಲು ಹಾಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


