ವಿದೇಶ

ಸಿರಿಯಾ: ವಿಷಾನಿಲ ದಾಳಿಯಲ್ಲಿ 9 ತಿಂಗಳ ಅವಳಿ ಮಕ್ಕಳನ್ನು ಕಳೆದುಕೊಂಡ ತಂದೆಯ ರೋಧನ

ಬಂಡುಕೋರರ ಹಿಡಿತದಲ್ಲಿರುವ ಸಿರಿಯಾದ ಬೈರತ್ ನಲ್ಲಿ ಶಂಕಿತ ವಿಷಾನಿಲ ದಾಳಿ ನಡೆದಿದ್ದು ಈ ದಾಳಿಯಿಂದಾಗಿ ತನ್ನ 9 ತಿಂಗಳ ಅವಳಿ ಮಕ್ಕಳನ್ನು ಕಳೆದುಕೊಂಡ...

ಸಿರಿಯಾ: ವಿಷಾನಿಲ ದಾಳಿಯಲ್ಲಿ 9 ತಿಂಗಳ ಅವಳಿ ಮಕ್ಕಳನ್ನು ಕಳೆದುಕೊಂಡ ತಂದೆಯ ರೋಧನ
ಮಕ್ಕಳನ್ನು ತಬ್ಬಿ ರೋದಿಸುತ್ತಿರುವ ತಂದೆ
Published On :
ಬೈರೂತ್: ಬಂಡುಕೋರರ ಹಿಡಿತದಲ್ಲಿರುವ ಸಿರಿಯಾದ ಬೈರತ್ ನಲ್ಲಿ ಶಂಕಿತ ವಿಷಾನಿಲ ದಾಳಿ ನಡೆದಿದ್ದು ಈ ದಾಳಿಯಿಂದಾಗಿ ತನ್ನ 9 ತಿಂಗಳ ಅವಳಿ ಮಕ್ಕಳನ್ನು ಕಳೆದುಕೊಂಡ ತಂದೆ ರೋದನ ಮುಗಿಲು ಮುಟ್ಟಿತ್ತು. ಅತೀವ ನೋವಿನ ನಡುವೆ ಮಕ್ಕಳ ಅಂತ್ಯಸಂಸ್ಕಾರ ನಡೆಸಿದರು. 
ಸಿರಿಯಾದ ಅಬ್ದೆಲ್ ಹಮೇದ್ ಅವಳಿ ಮಕ್ಕಳನ್ನು ಕಳೆದುಕೊಂಡ ನತದೃಷ್ಟ. ಅಂತ್ಯಸಂಸ್ಕಾರದ ವೇಳೆ ತಂದೆ ತನ್ನ ಅವಳಿ ಮಕ್ಕಳಾದ ಅಯಾ ಮತ್ತು ಅಹಮದ್ ತಬ್ಬಿಕೊಂಡು ಗುಡ್ ಬೈ ಬೇಬಿ ಗುಡ್ ಬೈ ಎಂದು ರೋದಿಸಿದ್ದು ಮನಕಲಕುವಂತಿತ್ತು. 
ಬೈರುತ್ ನಲ್ಲಿ ಶಂಕಿತ ವಿಷಾನಿಲ ದಾಳಿ ನಡೆಸಲಾಗಿತ್ತು. ಮಕ್ಕಳು ಹಾಗೂ ಮಹಿಳೆಯರು ಸೇರಿದಂತೆ ಒಟ್ಟು 72 ನಾಗರೀಕರು ಬಲಿಯಾಗಿದ್ದರು. ಇದೀಗ ಸಾವಿನ ಸಂಖ್ಯೆ 100ಕ್ಕೆ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ. 
ಇದ್ಲಿಬ್ ಪ್ರಾಂತ್ಯದ ಖಾನ್ ಶೈಖೌನ್ ಪ್ರಾಂತ್ಯದಲ್ಲಿ ವಿಷಾನಿಲ ದಾಳಿ ನಡೆಸಲಾಗಿತ್ತು. ದಾಳಿಯಲ್ಲಿ 100 ಮಂದಿ ಸಾವನ್ನಪ್ಪಿದ್ದಾರೆಂದು ಸಿರಿಯಾದ ಮಾನವ ಹಕ್ಕು ಮೇಲ್ವಿಚಾರಣೆ ಸಂಸ್ಥೆ ಮಾಹಿತಿ ನೀಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.