ವಿದೇಶ

ಇಸಿಸ್ ವಿರುದ್ಧ ಮುಂದುವರೆದ ಇರಾಕ್ ವಾಯುದಾಳಿ; 100ಕ್ಕೂ ಹೆಚ್ಚು ಉಗ್ರರು ಹತ!

ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳ ಕಪಿಮುಷ್ಟಿಯಲ್ಲಿರುವ ಮೊಸುಲ್ ನಗರದ ಹೊರವಲಯದಲ್ಲಿ ಇರಾಕ್ ಸೇನೆಯ ಫೈಟರ್ ಜೆಟ್ ಗಳು ದಾಳಿ ಮಾಡಿದ್ದು, ದಾಳಿಯಲ್ಲಿ ಕನಿಷ್ಠ 100 ಮಂದಿ ಉಗ್ರರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ.

ಇಸಿಸ್ ವಿರುದ್ಧ ಮುಂದುವರೆದ ಇರಾಕ್ ವಾಯುದಾಳಿ; 100ಕ್ಕೂ ಹೆಚ್ಚು ಉಗ್ರರು ಹತ!
ಸಂಗ್ರಹ ಚಿತ್ರ
Published On :

ಬಾಗ್ದಾದ್: ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳ ಕಪಿಮುಷ್ಟಿಯಲ್ಲಿರುವ ಮೊಸುಲ್ ನಗರದ ಹೊರವಲಯದಲ್ಲಿ ಇರಾಕ್ ಸೇನೆಯ ಫೈಟರ್ ಜೆಟ್ ಗಳು ದಾಳಿ ಮಾಡಿದ್ದು, ದಾಳಿಯಲ್ಲಿ ಕನಿಷ್ಠ 100 ಮಂದಿ ಉಗ್ರರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ.

ಖಾಸಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿರುವಂತೆ ಮೊಸುಲ್ ನಗರದ ಹೊರವಲಯದಲ್ಲಿರುವ ಇಸ್ಲಾಮಿಕ್ ಸ್ಟೇಟ್ ಉಗ್ರರ ಅಡಗುದಾಣಗಳ ಮೇಲೆ ಇರಾಕ್ ಫೈಟರ್ ಜೆಟ್ ಗಳು ಸತತ ಬಾಂಬ್ ದಾಳಿ ನಡೆಸಿವೆ. ಪರಿಣಾಮ  ಅಡಗುದಾಣಗಳಲ್ಲಿದ್ದ ಸುಮಾರು 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ. ಸಿರಿಯಾ ಗಡಿ ಮತ್ತು ಮೊಸುಲ್ ನಗರವನ್ನು ಹೊಂದಿಕೊಂಡಂತೆ ಇರುವ ಬಾಜ್ ಪ್ರದೇಶದಲ್ಲಿ ಇರಾಕಿ ಪಡೆಗಳು ದಾಳಿ ನಡೆಸುತ್ತಿದ್ದು, ಇಲ್ಲಿ ಸುಮಾರು  150 ರಿಂದ 200ಕ್ಕೂ ಹೆಚ್ಚು ಉಗ್ರರು ಅಡಗಿಕೊಂಡಿದ್ದರು ಎಂದು ತಿಳಿದುಬಂದಿದೆ.

ದಾಳಿ ಸಂದರ್ಭದಲ್ಲಿ ಅಡಗುದಾಣಗಳಿಂದ ಹಲವು ಉಗ್ರರು ಕಾಲ್ಕಿತ್ತಿದ್ದು, ಗಡಿ ಮೂಲಕ ಸಿರಿಯಾ ಒಳಗೆ ಪ್ರವೇಶ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅತ್ತ ಸಿರಿಯಾ ಪಡೆಗಳೂ ಕೂಡ ಉಗ್ರರ ಮೇಲೆ ದಾಳಿ  ನಡೆಸುತ್ತಿದ್ದು, ಇದೀಗ ಉಗ್ರರ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.