ಇರಾಕ್ ನಲ್ಲಿ ಮತ್ತೆ ಉಗ್ರರ ಅಟ್ಟಹಾಸ: ತ್ರಿವಳಿ ಆತ್ಮಹತ್ಯಾ ದಾಳಿಗೆ 11 ಯೋಧರ ಸಾವು
ಗಲಭೆ ಪೀಡಿತ ಇರಾಕ್ ನಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ಒಂದೇ ದಿನ ಮೂರು ಆತ್ಮಹತ್ಯಾ ಬಾಂಬ್ ದಾಳಿ ನಡೆಸುವ ಮೂಲಕ 11 ಯೋಧರನ್ನು ಬಲಿ ಪಡೆದಿದೆ.

ಬಾಗ್ದಾದ್: ಗಲಭೆ ಪೀಡಿತ ಇರಾಕ್ ನಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ಒಂದೇ ದಿನ ಮೂರು ಆತ್ಮಹತ್ಯಾ ಬಾಂಬ್ ದಾಳಿ ನಡೆಸುವ ಮೂಲಕ 11 ಯೋಧರನ್ನು ಬಲಿ ಪಡೆದಿದೆ.
ಉತ್ತರ ಬಾಗ್ದಾದ್ ಮೂಲಕ ನಗರ ಪ್ರವೇಶ ಮಾಡಿದ ಮೂವರು ಆತ್ಮಹತ್ಯಾ ದಳದ ಉಗ್ರರು, ಅಲ್ ಸಲಾಂ ಪಟ್ಟಣದಲ್ಲಿ ಸೈನಿಕ ಚೆಕ್ ಪಾಯಿಂಟ್ ಬಳಿ ತಮ್ಮನ್ನು ತಾವು ಸ್ಪೋಟಿಸಿಕೊಂಡಿದ್ದಾರೆ. ಘಟನೆಯಲ್ಲಿ ಚೆಕ್ ಪಾಯಿಂಟ್ ನಲ್ಲಿದ್ದ 11 ಸೈನಿಕರು ಸಾವನ್ನಪ್ಪಿದ್ದು, 34 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಲಾಹುದ್ದೀನ್ ಪ್ರಾಂತ್ಯದ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಅಲ್ ಜಬೌರಿ ಅವರು, ಸ್ಫೋಟಕ ತುಂಬಿದ್ದ ವಾಹನದೊಂದಿಗೆ ನುಗ್ಗಿದ ಮೂರು ಆತ್ಮಹತ್ಯಾದಳದ ಉಗ್ರರು, ಏಕಾಏಕಿ ಸೈನಿಕರಿದ್ದ ಚೆಕ್ ಪಾಯಿಂಟ್ ಗೆ ವಾಹನ ನುಗ್ಗಿಸಿ ಸ್ಫೋಟಿಸಿದ್ದಾರೆ ಎಂದು ಹೇಳಿದ್ದಾರೆ.
ಘಟನೆ ಕುರಿತಂತೆ ಈವರೆಗೂ ಯಾವುದೇ ಉಗ್ರ ಸಂಘಟನೆ ದಾಳಿ ನೇತೃತ್ವ ವಹಿಸಿಲ್ಲವಾದರೂ, ದಾಳಿ ಮಾದರಿ ಹಾಗೂ ಇತರೆ ಅಂಶಗಳ ಆಧಾರದ ಮೇಲೆ ಸುನ್ನಿ ಉಗ್ರ ಸಂಘಟನೆ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗುತ್ತಿದೆ. ಅಂತೆಯೇ ಈ ಹಿಂದೆ ಇಸ್ಲಾಮಿಕ್ ಉಗ್ರ ಸಂಘಟನೆ ಕೂಡ ಸರಣಿ ಆತ್ಮಹತ್ಯಾ ದಾಳಿ ನಡೆಸುವುದಾಗಿ ಘೋಷಣೆ ಮಾಡಿತ್ತು. ಈ ಹಿನ್ನಲೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಮೇಲೂ ಶಂಕೆ ಮೂಡುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


