ಬುರ್ಖಾ ಧರಿಸದ ಹೆಣ್ಣು ಮಕ್ಕಳನ್ನು ಕೊಲ್ಲುತ್ತಿದ್ದ ಇಸಿಸ್ ನಿಂದ ಬುರ್ಖಾ ನಿಷೇಧ!
ಬುರ್ಖಾ ಧರಿಸಿದ ಹೆಣ್ಣುಮಕ್ಕಳನ್ನು ಸಾರ್ವಜನಿಕವಾಗಿ ಕೊಲ್ಲುತ್ತಿದ್ದ ಕುಖ್ಯಾತ ಉಗ್ರಗಾಮಿ ಸಂಘಟನೆ ಇಸಿಸ್ ಬುರ್ಖಾಧರಿಸುವುದನ್ನೇ ನಿಷೇಧಿಸಿದೆ..!

ಮೊಸುಲ್: ಬುರ್ಖಾ ಧರಿಸಿದ ಹೆಣ್ಣುಮಕ್ಕಳನ್ನು ಸಾರ್ವಜನಿಕವಾಗಿ ಕೊಲ್ಲುತ್ತಿದ್ದ ಕುಖ್ಯಾತ ಉಗ್ರಗಾಮಿ ಸಂಘಟನೆ ಇಸಿಸ್ ಬುರ್ಖಾಧರಿಸುವುದನ್ನೇ ನಿಷೇಧಿಸಿದೆ..!
ಹೌದು..ಇರಾಕ್ ಮತ್ತು ಸಿರಿಯಾದಲ್ಲಿ ತನ್ನ ಮೂಲಭೂತವಾದಗಳಿಂದಲೇ ಕುಖ್ಯಾತಿ ಪಡೆದಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಅದರ ವಾದಗಳೇ ತಿರುಗುಬಾಣವಾಗಿ ಪರಿಣಮಿಸಲು ಆರಂಭಿಸಿದೆ. ಈ ಹಿಂದೆ ಬುರ್ಖಾ ಧರಿಸಿಲ್ಲ ಎಂದು ಅಮಾಯಕ ಹೆಣ್ಣುಮಕ್ಕಳನ್ನು ಸಾರ್ವಜನಿಕವಾಗಿ ಕೊಲ್ಲುತ್ತಿದ್ದ ಉಗ್ರ ಸಂಘಟನೆ ಇದೀಗ ಬುರ್ಖಾ ಧರಿಸುವುದನ್ನೇ ನಿಷೇಧಿಸಿದೆ. ಇರಾಕ್‍ನ ಮೊಸುಲ್ ಪಟ್ಟಣದ ಐಸಿಸ್ ಭದ್ರತಾ ಕೇ೦ದ್ರಗಳಿಗೆ ಆಗಮಿಸುವ ಮಹಿಳೆಯರು ಬುಖಾ೯ ಧರಿಸಕೂಡದು ಎ೦ದು ಉಗ್ರರು ಆದೇಶಿಸಿದ್ದಾರೆ.
ಇತ್ತೀಚೆಗೆ ಬುಖಾ೯ಧಾರಿಗಳು ಆತ್ಮಹತ್ಯಾ ದಾಳಿ ನಡೆಸಿ ಐಸಿಸ್ ಉಗ್ರರನ್ನು ಕೊಲ್ಲುತ್ತಿರುವ ಹಿನ್ನೆಲೆಯಲ್ಲಿ ಉಗ್ರರು ಈ ಕ್ರಮಕ್ಕೆ ಮು೦ದಾಗಿದ್ದಾರೆ ಎಂದು ತಿಳಿದುಬಂದಿದೆ. ತಮ್ಮ ಪ್ರಾಣಕ್ಕೆ ಧಕ್ಕೆಯಾಗಬಹುದೆ೦ಬ ಕಾರಣದಿ೦ದ, ಮೊಸುಲ್ ಪಟ್ಟಣದ ಐಸಿಸ್ ನೆಲೆಯಲ್ಲಿ ಬುಖಾ೯ ಧರಿಸದ೦ತೆ ಜಿಹಾದಿ ಪಡೆ ಎಚ್ಚರಿಕೆ ನೀಡಿದೆ.
ಕೆಲ ದಿನಗಳ ಹಿ೦ದೆ ಬುಖಾ೯ಧಾರಿಗಳು ಸಲಾಹ್ ಅಲ್‍ದಿನ್‍ನ ಉತ್ತರ ಭಾಗದಲ್ಲಿರುವ ಶಕ೯ತ್ ಚೆಕ್‍ಪೋಸ್ಟ್ ಬಳಿ ಐಸಿಸ್ ನೆಲೆ ಮೇಲೆ ಆತ್ಮಾಹುತಿ ದಾಳಿ ಮಾಡಿದ್ದರು. ಈ ಘಟನೆಯಲ್ಲಿ ಇಬ್ಬರು ಉಗ್ರರು ಸಾವಿಗೀಡಾಗಿದ್ದರು. ದಾಳಿ ಬಳಿಕ ಆತಂಕಗೊಂಡಿದ್ದ ಐಸಿಸ್ ಸಂಘಟನೆ ಇದೀಗ ಬುರ್ಖಾ ನಿಷೇಧ ಹೇರಿದೆ.
ಆದರೆ ಐಸಿಸ್ ಕಚೇರಿಗಳಿಗೆ ಹೊರತಾದ ಬೇರೆಲ್ಲ ಪ್ರದೇಶಗಳಲ್ಲಿ ಬುಖಾ೯ ಕಡ್ಡಾಯ ಮು೦ದುವರಿಯಲಿದೆ ಎಂದು ಇಸಿಸ್ ಆದೇಶ ಹೊರಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


