ಟ್ರಂಪ್ ದ್ವೇಷಪೂರಿತ ಹೇಳಿಕೆ ತೆಗೆದುಹಾಕದಂತೆ ಜಕರ್ಬರ್ಗ್ ಆದೇಶಿಸಿದ್ದರು: ವರದಿ
ಕೆಲವು ಫೇಸ್ಬುಕ್ ಸಿಬ್ಬಂದಿ ಅಮೆರಿಕಾ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ವಿವಾದಾತ್ಮಕ ಪೋಸ್ಟ್ ಗಳನ್ನು ತೆಗೆದುಹಾಕುವ ಇಂಗಿತವನ್ನು ವ್ಯಕ್ತಪಡಿಸಿದ್ದಾಗ, ಸಿಇಒ ಮಾರ್ಕ್ ಜಕರ್ಬರ್ಗ್
Published On :
ನ್ಯೂಯಾರ್ಕ್: ಕೆಲವು ಫೇಸ್ಬುಕ್ ಸಿಬ್ಬಂದಿ ಅಮೆರಿಕಾ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ವಿವಾದಾತ್ಮಕ ಪೋಸ್ಟ್ ಗಳನ್ನು ತೆಗೆದುಹಾಕುವ ಇಂಗಿತವನ್ನು ವ್ಯಕ್ತಪಡಿಸಿದ್ದಾಗ, ಸಿಇಒ ಮಾರ್ಕ್ ಜಕರ್ಬರ್ಗ್, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯನ್ನು ಸೆನ್ಸಾರ್ ಮಾಡುವುದು ಉಚಿತವಲ್ಲ ಎಂದು ಆದೇಶಿಸಿದ್ದರು ಎಂದು ಶನಿವಾರ ಮಾಧ್ಯಮಗಳು ವರದಿ ಮಾಡಿವೆ.
"ಈ ನಿರ್ಧಾರದಿಂದ ಫೇಸ್ಬುಕ್ ಪೋಸ್ಟ್ ಗಳನ್ನು ಪರಿಶೀಲಿಸುವ ತಂಡ ಕೆಲಸ ಬಿಡುವ ಬೆದರಿಕೆಯನ್ನು ಹಾಕಿತ್ತು" ಎಂದು ವರದಿ ಹೇಳಿದೆ. ಅಮೆರಿಕಾಗೆ ಮುಸ್ಲಿಮರು ಬರುವುದನ್ನು ತಡೆಯಬೇಕು ಎಂಬ ಟ್ರಂಪ್ ಹೇಳಿಕೆ ಈ ವಿವಾದ ಸೃಷ್ಟಿಯಾಗಿತ್ತು.
ಕೆಲವು ಮುಸ್ಲಿಮರನ್ನು ಒಳಗೊಂಡಂತೆ ಬಹಳಷ್ಟು ಫೇಸ್ಬುಕ್ ಸಿಬ್ಬಂದಿ "ಇದು ಆಂತರಿಕ ಕಾರ್ಯಸೂಚಿಯ ಪ್ರಕಾರ ಫೇಸ್ಬುಕ್ ನ ನಿಯಮಗಳನ್ನು ಮುರಿದಿದೆ ಎಂದು ಮಾತನಾಡಿಕೊಂಡಿದ್ದರು" ಎಂದು ಕೂಡ ಪತ್ರಿಕೆ ವರದಿ ಮಾಡಿದೆ.
ಪರಿಶೀಲನಾ ತಂಡಕ್ಕೆ ಆ ಪೋಸ್ಟ್ ಅನ್ನು ತೆಗೆದು ಹಾಕದಂತೆ ಅವರ ಮೇಲಿನ ಅಧಿಕಾರಿಗಳು ಸೂಚಿಸಿದ್ದರು ಎಂದು ತಿಳಿದುಬಂದಿದೆ.
"ಅವರ ಸಿಬ್ಬಂದಿ ದೂರಿನ ಬಗ್ಗೆ ಫೇಸ್ಬುಕ್ ನಮ್ಮನ್ನು ಎಂದಿಗೂ ಸಂಪರ್ಕಿಸಲಿಲ್ಲ ಮತ್ತು ಪೋಸ್ಟ್ ಅನ್ನು ಅವರು ತೆಗೆದು ಹಾಕಲು ಇಲ್ಲ" ಎಂದು ಟ್ರಂಪ್ ಚುನಾವಣಾ ಪ್ರಚಾರದ ವಕ್ತಾರ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

