ವಿದೇಶ

ವಿಮಾನ ನಿಲ್ದಾಣದಲ್ಲೇ 2 ಗಂಟೆ ಕಳೆದ ಒಮರ್ ಅಬ್ದುಲ್ಲಾ

ವಲಸೆ ಅಧಿಕಾರಿಗಳು ನಡೆಸಿದ ಹೆಚ್ಚುವರಿ ತಪಾಸಣೆಯ ಕಾರಣದಿಂದಾಗಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಅಮೆರಿಕದ ವಿಮಾನ ನಿಲ್ದಾಣದಲ್ಲಿ 2 ಗಂಟೆಗಳ ಕಾಲ ಕಾಲಕಳೆದಿರುವ...

ವಿಮಾನ ನಿಲ್ದಾಣದಲ್ಲೇ 2 ಗಂಟೆ ಕಳೆದ ಒಮರ್ ಅಬ್ದುಲ್ಲಾ
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ
Published On :

ನ್ಯೂಯಾರ್ಕ್: ವಲಸೆ ಅಧಿಕಾರಿಗಳು ನಡೆಸಿದ ಹೆಚ್ಚುವರಿ ತಪಾಸಣೆಯ ಕಾರಣದಿಂದಾಗಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಅಮೆರಿಕದ ವಿಮಾನ ನಿಲ್ದಾಣದಲ್ಲಿ 2 ಗಂಟೆಗಳ ಕಾಲ ಕಾಲಕಳೆದಿರುವ ಘಟನೆ ನಡೆದಿದೆ.

ಈ ಕುರಿತಂತೆ ಟ್ವಿಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಒಮರ್ ಅಬ್ದುಲ್ಲಾ ಅವರು, ಅಮೆರಿಕ ದೇಶಕ್ಕೆ ನಾನು ಇದು 3ನೇ ಬಾರಿ ಭೇಟಿ ನೀಡುತ್ತಿದ್ದು, ಮೂರನೇ ಬಾರಿ ಕೂಡ ನನಗೆ ಸಮಸ್ಯೆ ಎದುರಾಗಿದೆ. ಅಮೆರಿಕ ವಿಮಾನ ನಿಲ್ದಾಣದಲ್ಲಿ 2 ಗಂಟೆಗಳ ಕಾಲ ಉಳಿಯಬೇಕಾಯಿತು. ವಿಮಾನ ನಿಲ್ದಾಣದಲ್ಲಿ ನಡೆಸಲಾಗುತ್ತಿರುವ ಹೆಚ್ಚುವರಿ ತಪಾಸಣೆ ಸಾಕಷ್ಟು ಬೇಸರವನ್ನುಂಟು ಮಾಡಿದೆ. ಪ್ರತೀ ಬಾರಿ ಅಮೆರಿಕ ದೇಶಕ್ಕೆ ಹೋದಾಗಲೆಲ್ಲಾ ನಾನು ಈ ಸಮಸ್ಯೆಯನ್ನು ಎದುರಿಸುತ್ತಿರುತ್ತೇನೆಂದು ಹೇಳಿದ್ದಾರೆ.

ಎನ್ ವೈಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಅಮೆರಿಕಾಗೆ ಬಂದಿದ್ದೆ. ಆದರೆ, 2 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲೇ ವ್ಯರ್ಥವಾಗಿಯಿತು. ಇದರ ಬದಲು ಮನೆಯಲ್ಲಿಯೇ ಇರಬಹುದಿತ್ತು ಎಂದು ಹೇಳಿಕೊಂಡಿದ್ದಾರೆ.

ಈ ಹಿಂದೆ ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೂ ಇದೇ ರೀತಿಯ ಸಂದರ್ಭ ಎದುರಾಗಿತ್ತು. ಅಮೆರಿಕಾ ದೇಶಕ್ಕೆ ಭೇಟಿ ನೀಡಿದ ಎರಡು ಬಾರಿಯೂ ಅವರನ್ನು ಬಂಧನಕ್ಕೊಳಪಡಿಸಿ ತಪಾಸಣೆ ನಡೆಸಲಾಗಿತ್ತು. ಅಮೆರಿಕದ ವಲಸೆ ಅಧಿಕಾರಿಗಳು ಎರಡು ಗಂಟೆಗಳ ಕಾಲ ಅವರನ್ನು ಬಂಧನದಲ್ಲಿಟ್ಟುಕೊಂಡಿದ್ದರು. ಅಧಿಕಾರಿಗಳ ಈ ವರ್ತನೆಗೆ ಶಾರುಖ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.