ವಿದೇಶ

ನ್ಯೂಯಾರ್ಕ್ ಟೈಮ್ಸ್ ಜೊತೆಗಿನ ಸಭೆ ರದ್ದುಪಡಿಸಿ ಟ್ವಿಟ್ಟರ್ ನಲ್ಲಿ ವಾಗ್ದಾಳಿ ಮಾಡಿದ ಟ್ರಂಪ್

ನೂತನವಾಗಿ ಆಯ್ಕೆಯಾಗಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಜೊತೆಗೆ ಮಂಗಳವಾರ ನಿಗದಿಯಾಗಿದ್ದ ಸಭೆಯನ್ನು ಕೊನೆ ಕ್ಷಣದಲ್ಲಿ ರದ್ದು ಮಾಡಿ,

ನ್ಯೂಯಾರ್ಕ್ ಟೈಮ್ಸ್ ಜೊತೆಗಿನ ಸಭೆ ರದ್ದುಪಡಿಸಿ ಟ್ವಿಟ್ಟರ್ ನಲ್ಲಿ ವಾಗ್ದಾಳಿ ಮಾಡಿದ ಟ್ರಂಪ್
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Published On :
ನ್ಯೂಯಾರ್ಕ್: ನೂತನವಾಗಿ ಆಯ್ಕೆಯಾಗಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಜೊತೆಗೆ ಮಂಗಳವಾರ ನಿಗದಿಯಾಗಿದ್ದ ಸಭೆಯನ್ನು ಕೊನೆ ಕ್ಷಣದಲ್ಲಿ ರದ್ದು ಮಾಡಿ, ಸಭೆಯ ನಿಯಮಗಳನ್ನು ಸುದ್ದಿ ಸಂಸ್ಥೆ ಬದಲಾಯಿಸಿತು ಎಂದು ದೂರಿದ್ದಾರೆ. ಆದರೆ ದಿನಪತ್ರಿಕೆ ಆ ಆರೋಪವನ್ನು ಅಲ್ಲಗೆಳೆದಿದ್ದು, ಟ್ರಂಪ್ ಆಪ್ತರು ಸಭೆಯ ನಿಯಮಗಳನ್ನು ಬದಲಿಸಲು ಪ್ರಯತ್ನಿಸಿದ್ದು ಎಂದು ದೂರಿದೆ. 
ನ್ಯೂಯಾರ್ಕ್ ಟೈಮ್ಸ್ ನ ಸಂಪಾದಕರು ಮತ್ತು ಅಂಕಣಕಾರರನ್ನು, ಅವರು ಭೇಟಿ ಮಾಡಬೇಕಿತ್ತು ಆದರೆ ಅವರ ದೂರುಗಳ ವಿವರಗಳನ್ನು ನೀಡದೆ ಮಂಗಳವಾರ ಬೆಳಗ್ಗೆ ಟ್ವೀಟ್ ಮಾಡಿ "ಸಭೆಯ ನಿಯಮಗಳನ್ನು ಕೊನೆಯ ಕ್ಷಣದಲ್ಲಿ ಬದಲಿಸಲಾಗಿದೆ. ಇದು ಸರಿಯಲ್ಲ" ಎಂದು ಸಭೆಯನ್ನು ರದ್ದುಪಡಿಸಿದ್ದಾರೆ. 
ಮತ್ತೊಂದು ಟ್ವೀಟ್ ನಲ್ಲಿ "ನ್ಯೂಯಾರ್ಕ್ ಟೈಮ್ಸ್ ಜೊತೆ ಬಹುಷಃ ಮತ್ತೊಂದು ಭೇಟಿ ಏರ್ಪಡಿಸಬಹುದು, ಆದರೆ ಅವರು ಅಲ್ಲಿಯವರೆಗೂ ನನ್ನ ಬಗ್ಗೆ ಕೆಟ್ಟ ರೀತಿಯಲ್ಲಿ ತಪ್ಪು ವರದಿಗಳನ್ನು ಬರೆಯುತ್ತಲೇ ಇರುತ್ತಾರೆ" ಎಂದು ಟ್ರಂಪ್ ಹೇಳಿದ್ದಾರೆ. 
"ನಾವು ಸಭೆಯ ಯಾವುದೇ ನಿಯಮಗಳನ್ನು ಬದಲಿಸಲು ಪ್ರಯತ್ನಿಸಲಿಲ್ಲ" ಎಂದು ಪತ್ರಿಕೆಯ ಸಂಪರ್ಕ ವಿಭಾಗದ ಹಿರಿಯ ಉಪಾಧ್ಯಕ್ಷ ಎಯ್ಲೀನ್ ಎಂ ಮರ್ಫಿ ಹೇಳಿದ್ದಾರೆ. 
ಟ್ರಂಪ್ ಆಪ್ತರು ನಿಯಮಗಳನ್ನು ಬದಲಿಸಲು ಪ್ರಯತ್ನಿಸಿದರು. ಇದು ಗೌಪ್ಯ ಸಭೆಯಾಗಿರುತ್ತದೆ ಮತ್ತು ಯಾವುದೇ ರೀತಿಯ ರೆಕಾರ್ಡಿಂಗ್ ಸಾಧ್ಯವಿಲ್ಲ ಎಂದರು "ಇದಕ್ಕೆ ನಾವು ಒಪ್ಪಿಕೊಳ್ಳಲು ನಿರಾಕರಿಸಿದೆವು" ಎಂದು ಕೂಡ ಅವರು ಹೇಳಿದ್ದಾರೆ. 
ನಂತರ ಒಂದು ಸಣ್ಣ ಮಾತುಕತೆಯನ್ನು ರೆಕಾರ್ಡ್ ಮಾಡಿಕೊಳ್ಳದ ಸಭೆ ಮೂಲಕ  ನಂತರ ಸುದೀರ್ಘ ಮಾತುಕತೆಯನ್ನು ರೆಕಾರ್ಡ್ ಮಾಡಿಕೊಳ್ಳುವ ಸಂಪಾದಕರ, ವರದಿಗಾರರ ಮತ್ತು ಅಂಕಣಕಾರರ ಜೊತೆಗಿನ ಸಭೆಗೆ ಒಪ್ಪಿಕೊಂಡೆವು. ಆದರೆ ಇದಕ್ಕೆ ಟ್ರಂಪ್ ಒಪ್ಪಿಗೆ ನೀಡದೆ ಸಭೆಯನ್ನು ರದ್ದುಪಡಿಸಿದರು ಎಂದು ಕೂಡ ಅವರು ಹೇಳಿದ್ದಾರೆ. 
ಟಿವಿ ವಾಹಿನಿಗಳ ಪ್ರತಿನಿಧಿಗಳನ್ನು ಟ್ರಂಪ್ ಸೋಮವಾರ ಭೇಟಿ ಮಾಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.