ವಿದೇಶ

ಡೊನಾಲ್ಡ್ ಟ್ರಂಪ್ ಗೆಲುವಿಗೆ ಸಹಕರಿಸಲು ಸುಳ್ ಸುದ್ದಿ ಹಬ್ಬಿಸಿದ ವದಂತಿ ತಳ್ಳಿಹಾಕಿದ ಫೇಸ್ ಬುಕ್

ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರ ಗೆಲುವಿಗೆ ಸಹಕರಿಸಲು ಸುಳ್ ಸುದ್ದಿ ಹಬ್ಬಿಸಲಾಗಿತ್ತು ಎಂಬ ಆರೋಪವನ್ನು ಸಾಮಾಜಿಕ ಜಾಲತಾಣ ಸಂಸ್ಥೆ ಫೇಸ್ ಬುಕ್ ನಿರಾಕರಿಸಿದೆ.

ಡೊನಾಲ್ಡ್ ಟ್ರಂಪ್ ಗೆಲುವಿಗೆ ಸಹಕರಿಸಲು ಸುಳ್ ಸುದ್ದಿ ಹಬ್ಬಿಸಿದ ವದಂತಿ ತಳ್ಳಿಹಾಕಿದ ಫೇಸ್ ಬುಕ್
ಡೊನಾಲ್ಡ್ ಟ್ರಂಪ್
Published On :
ಸ್ಯಾನ್ ಫ್ರಾನ್ಸಿಸ್ಕೋ: ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರ ಗೆಲುವಿಗೆ ಸಹಕರಿಸಲು ಸುಳ್ ಸುದ್ದಿ ಹಬ್ಬಿಸಲಾಗಿತ್ತು ಎಂಬ ಆರೋಪವನ್ನು ಸಾಮಾಜಿಕ ಜಾಲತಾಣ ಸಂಸ್ಥೆ ಫೇಸ್ ಬುಕ್ ನಿರಾಕರಿಸಿದೆ. 
ಫೇಸ್ ಬುಕ್ ನ್ಯೂಸ್ ಫೀಡ್ ಗಳನ್ನು ಡೊನಾಲ್ಡ್ ಟ್ರಂಪ್ ಗೆಲುವಿಗೆ ಸಹಕಾರಿಯಾಗುವಂತೆ ಬದಲಾವಣೆ ಮಾಡಿತ್ತು, ಎಂಬ ಆರೋಪವನ್ನು ತಳ್ಳಿಹಾಕಿರುವ ಫೇಸ್ 
ಬುಕ್, ಯಾವುದೇ ರಾಜಕೀಯ ಪಕ್ಷದ ಪರವಾಗಿ ನ್ಯೂಸ್ ಫೀಡ್ ಗಳನ್ನು ಬದಲಾವಣೆ ಮಾಡಲಾಗಿಲ್ಲ ಎಂದು ಸ್ಪಷ್ಟನೆ ನೀಡಿದೆ. 
ಮಾಧ್ಯಮಗಳ ವರದಿ ಪ್ರಕಾರ, ಸುಳ್ ಸುದ್ದಿಯನ್ನು ಗುರುತು ಹಿಡಿಯುವಂತಹ ಯೋಜಿತ ಅಪ್ ಡೇಟ್ ವ್ಯವಸ್ಥೆಯನ್ನು ಫೇಸ್ ಬುಕ್ ಈ ವರ್ಷದ ಪ್ರಾರಂಭದಲ್ಲಿ ಕೈಬಿಟ್ಟಿತ್ತು ಎಂದು ತಿಳಿದುಬಂದಿದೆ. 2015ರ ಜನವರಿಯಲ್ಲಿ ಫೇಸ್ ಬುಕ್ ಸುಳ್ ಸುದ್ದಿಗಳನ್ನು ನಿಯಂತ್ರಿಸುವ ವ್ಯವಸ್ಥೆಯನ್ನು ಪರಿಚಯಿಸಿತ್ತು.  ಇದಾದ ಬಳಿಕ ಆಗಸ್ಟ್ ನಲ್ಲಿ ಕ್ಲಿಕ್ ಬೈಟ್ ಸ್ಟೋರಿಗಳನ್ನು ಕಡಿಮೆ ಮಾಡುವ ನ್ಯೂಸ್ ಫೆಡ್ ಅಪ್ ಡೇಟ್ ನ್ನು ಪ್ರಾರಂಭಿಸಿತ್ತು. 
ಫೇಸ್ ಬುಕ್ ನಲ್ಲಿ ಪ್ರಕಟವಾಗುವ ಅಂಶಗಳಲ್ಲಿ ಶೇ.99 ರಷ್ಟು ಸತ್ಯಾಂಶಗಳೇ ಇರುತ್ತವೆ. ಕೆಲವೇ ಕೆಲವು ಅಂಶಗಳು ಮಾತ್ರ ಸುಳ್ಳಾಗಿರುತ್ತದೆ ಎಂದು ಫೇಸ್ ಬುಕ್ ಸಿಇಒ ಮಾರ್ಕ್ ಜುಕರ್ಬರ್ಗ್ ತಿಳಿಸಿದ್ದಾರೆ. 
ನ್ಯೂಸ್ ಫೀಡ್ ಗಳನ್ನು ಹೆಚ್ಚು ಮಾಹಿತಿಯುಳ್ಳ ಅಂಶವನ್ನಾಗಿಸಲು ಯತ್ನಿಸುತ್ತಿದ್ದು ಸುಳ್ಳು ಸುದ್ದಿಯನ್ನು ತಪ್ಪಿಸಲು, ನಿಖರತೆಯನ್ನು ಹೆಚ್ಚಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಜುಕರ್ಬರ್ಗ್ ತಿಳಿಸಿದ್ದಾರೆ. ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸಿಬಿಎಸ್ ನ 60 ಮಿನಿಟ್ಸ್ ಕಾರ್ಯಕ್ರಮಕ್ಕೆ ಸಂದರ್ಶನ ನೀಡಿದ್ದ ಡೊನಾಲ್ಡ್ ಟ್ರಂಪ್ ತಮ್ಮ ಗೆಲುವಿಗೆ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟರ್ ಮುಖ್ಯಪಾತ್ರ ವಹಿಸಿವೆ ಎಂದು ಹೇಳಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.