ಮಾತು ಉಳಿಸಿಕೊಳ್ಳಲು ಮುಂದಾದ ಟ್ರಂಪ್: 30 ಲಕ್ಷ ವಲಸಿಗರ ಗಡಿಪಾರಿಗೆ ನಿರ್ಧಾರ
ಅಮೆರಿಕಾ ರಾಷ್ಟ್ರದ ಅಧ್ಯಕ್ಷ ಚುನಾವಣೆ ವೇಳೆ ವಲಸಿಗರನ್ನು ಅಮೆರಿಕಾದಿಂದ ಹೊರ ಹಾಕುವುದಾಗಿ ಭರವಸೆ ನೀಡಿದ್ದ ರಿಪಬ್ಲಿಕನ್ ಪಕ್ಷದ ನಾಯಕ ಡೊನಾಲ್ಡ್ ಟ್ರಂಪ್ ಅವರು ಇದೀಗ ತಮ್ಮ ಮಾತನ್ನು ಉಳಿಸಿಕೊಳ್ಳಲು ಮುಂದಾಗಿದ್ದು, 30 ಲಕ್ಷ ವಲಸಿಗರನ್ನು...

ವಾಷಿಂಗ್ಟನ್: ಅಮೆರಿಕಾ ರಾಷ್ಟ್ರದ ಅಧ್ಯಕ್ಷ ಚುನಾವಣೆ ವೇಳೆ ವಲಸಿಗರನ್ನು ಅಮೆರಿಕಾದಿಂದ ಹೊರ ಹಾಕುವುದಾಗಿ ಭರವಸೆ ನೀಡಿದ್ದ ರಿಪಬ್ಲಿಕನ್ ಪಕ್ಷದ ನಾಯಕ ಡೊನಾಲ್ಡ್ ಟ್ರಂಪ್ ಅವರು ಇದೀಗ ತಮ್ಮ ಮಾತನ್ನು ಉಳಿಸಿಕೊಳ್ಳಲು ಮುಂದಾಗಿದ್ದು, 30 ಲಕ್ಷ ವಲಸಿಗರನ್ನು ಹೊರಹಾಕುವುದಾಗಿ ಭಾನುವಾರ ಹೇಳಿದ್ದಾರೆ.
ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ಸಮರ್ಪಕ ದಾಖಲೆಗಳನ್ನು ಹೊಂದಿರದ 30 ಲಕ್ಷ ವಲಸೆಗಾರರನ್ನು ಅಮೆರಿಕ ರಾಷ್ಟ್ರದಿಂದ ಹೊರಹಾಕುವುದಾಗಿ ಹೇಳಿಕೊಂಡಿದ್ದಾರೆ.
ದೇಶದಲ್ಲಿ 2 ಮಿಲಿಯನ್ ರಷ್ಟು ಅಪರಾಧ ಮತ್ತು ಅಪರಾಧ ಹಿನ್ನೆಲೆ ಇರುವವರು, ಗ್ಯಾಂಗ್ ಸದಸ್ಯರು, ಡ್ರಗ್ ಜಾಲದಲ್ಲಿರುವವರಿದ್ದು, ಅವರ ವಿರುದ್ಧ ಅಮೆರಿಕ ಶೀಘ್ರದಲ್ಲಿಯೇ ಕ್ರಮಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


