ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡಿವೆ ಎಂದು ಮಾಧ್ಯಮಗಳನ್ನು ಖಂಡಿಸಿದ ಟ್ರಂಪ್
ಅಮೆರಿಕಾದ ಮುಂದಿನ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಬರೆದಿರುವ ಆಕ್ರಮಣಕಾರಿ ಟ್ವೀಟ್ ನಲ್ಲಿ ತಮ್ಮ ಗೆಲುವಿನ ವಿರುದ್ಧ ಮಾಧ್ಯಮಗಳು ಪ್ರತಿಭಟನೆಗೆ ಕುಮ್ಮಕ್ಕು ನೀಡಿವೆ ಎಂದು ಆರೋಪಿಸಿ ಖಂಡಿಸಿದ್ದಾರೆ.

Published On :
ನ್ಯೂಯಾರ್ಕ್: ಅಮೆರಿಕಾದ ಮುಂದಿನ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಬರೆದಿರುವ ಆಕ್ರಮಣಕಾರಿ ಟ್ವೀಟ್ ನಲ್ಲಿ ಡೊನಾಲ್ಡ್ ಟ್ರಂಪ್ ತಮ್ಮ ಗೆಲುವಿನ ವಿರುದ್ಧ ಮಾಧ್ಯಮಗಳು ಪ್ರತಿಭಟನೆಗೆ ಕುಮ್ಮಕ್ಕು ನೀಡಿವೆ ಎಂದು ಆರೋಪಿಸಿ ಖಂಡಿಸಿದ್ದಾರೆ.
"ಬಹಳ ಮುಕ್ತ ಮತ್ತು ಯಶಸ್ವಿ ಅಧ್ಯಕ್ಷೀಯ ಚುನಾವಣೆಯನ್ನು ಮುಗಿಸಿದ್ದೇನೆ" ಎಂದು ಟ್ವೀಟ್ ಮಾಡಿರುವ ಟ್ರಂಪ್ "ಈಗ ವೃತ್ತಿಪರ ಪ್ರತಿಭಟನಕಾರರು, ಮಾಧ್ಯಮಗಳ ಕುಮ್ಮಕ್ಕಿನಿಂದ ಪ್ರತಿಭಟಿಸುತ್ತಿದ್ದಾರೆ. ಇದು ಸರಿಯಲ್ಲ!" ಎಂದು ಕೂಡ ಬರೆದಿದ್ದಾರೆ.
ಮಂಗಳವಾರ ರಾತ್ರಿ ಟ್ರಂಪ್ ಡೆಮಕ್ರಾಟ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರನ್ನು ಸೋಲಿಸಿದ ಮೇಲೆ, ಅಮೆರಿಕಾದ ಮುಖ್ಯ ನಗರಗಳಲ್ಲಿ ಸಾವಿರಾರು ಪ್ರತಿಭಟನಾಕಾರರು ಬೀದಿಗಿಳಿದು "ನನ್ನ ಅಧ್ಯಕ್ಷ ಅಲ್ಲ" ಎಂಬ ಹಲಗೆ ಹಿಡಿದು ಪ್ರತಿಭಟಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.
ಗುರುವಾರ ಟ್ರಂಪ್ ಅವರ ಪ್ರಚಾರ ವ್ಯವಸ್ಥಾಪಕ ಕೆಲ್ಲ್ಯಾನ್ನ್ ಕಾನ್ವೇ ಅವರು ಕ್ಲಿಂಟನ್ ಮತ್ತು ಸದ್ಯದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಕರೆ ಮಾಡಿ ಹಿಂಸೆಯನ್ನು ಪ್ರಚೋದಿಸುವ ಪ್ರತಿಭಟನೆಯ ವಿರುದ್ಧ ಮಾತನಾಡುವಂತೆ ಕೇಳಿಕೊಂಡಿದ್ದರು.
ಬಹುತೇಕ ಎಲ್ಲ ಪ್ರತಿಭಟನೆಗಳು ಶಾಂತಿಯುತವಾಗಿದ್ದರು, ಕೆಲವು ಕಡೆ ಮಾತ್ರ ಧ್ವಜಗಳನ್ನು ಸುಟ್ಟ ಮತ್ತು ಟ್ರಂಪ್ ಅವರ ಪ್ರತಿಕೃತಿಗಳನ್ನು ಸುಟ್ಟ ವರದಿಗಳಾಗಿವೆ. ಧ್ವಂಸ ಮತ್ತು ಅಧಿಕಾರಿಗಳ ಮೇಲೆ ದಾಳಿ ಆರೋಪದಲ್ಲಿ ಕನಿಷ್ಠ ೧೨೪ ಜನರನ್ನು ಬಂಧಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


