ವಿದೇಶ

ಟ್ರಂಪ್ ಗೆದ್ದರೆ ಗ್ರೀನ್ ಕಾರ್ಡ್ ಹರಿದು ಬಿಸಾಡುತ್ತೇನೆ: ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿ ಸೋಯಿಂಕಾ

ಮುಂದಿನ ವಾರ ನಡೆಯಲಿರುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗಳಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆದ್ದರೆ ತಮ್ಮ ಗ್ರೀನ್ ಕಾರ್ಡ್ ಹರಿದು ಬಿಸಾಡಿ ದೇಶ ತೊರೆಯುತ್ತೇನೆ

ಟ್ರಂಪ್ ಗೆದ್ದರೆ ಗ್ರೀನ್ ಕಾರ್ಡ್ ಹರಿದು ಬಿಸಾಡುತ್ತೇನೆ: ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿ ಸೋಯಿಂಕಾ
ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿ ವೋಲೆ ಸೋಯಿಂಕಾ
Published On :
ಮುಂದಿನ ವಾರ ನಡೆಯಲಿರುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗಳಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆದ್ದರೆ ತಮ್ಮ ಗ್ರೀನ್ ಕಾರ್ಡ್ ಹರಿದು ಬಿಸಾಡಿ ದೇಶ ತೊರೆಯುತ್ತೇನೆ ಎಂದಿದ್ದಾರೆ ನೈಜೀರಿಯಾ ಮೂಲದ ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿ ವೋಲೆ ಸೋಯಿಂಕಾ.
"ಅವರು ಗೆಲ್ಲುವುದು ಅನುಮಾನ ಆದರೂ ಒಂದು ಪಕ್ಷ ಗೆದ್ದರೆ ಅಮೆರಿಕಾಗೆ ಬರಲು ಎಲ್ಲ ಗ್ರೀನ್ ಕಾರ್ಡ್ ಹೊಂದಿರುವವರು ಮತ್ತೆ ಅರ್ಜಿ ಸಲ್ಲಿಸಬೇಕು ಎಂದು ಅವರು ಹೇಳುತ್ತಾರೆ. ಆದರೆ ನಾನದಕ್ಕೆ ಕಾಯುವುದಿಲ್ಲ, ಅವರು ವಿಜೇತ ಎಂದು ಘೋಷಣೆಯಾದ ಕ್ಷಣ ನನ್ನ ಗ್ರೀನ್ ಕಾರ್ಡ್ ಹರಿದು ಬಿಸಾಡಿ ದೇಶ ತೊರೆಯಲು ಅಣಿಯಾಗುತ್ತೇನೆ" ಎಂದು ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ವೇಳೆಯಲ್ಲಿ ಹೇಳಿದ್ದಾರೆ ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ. 
ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಆಫ್ರಿಕನ್ ಬರಹಗಾರ ವೋಲೆ ಸೋಯಿಂಕಾ. ಅವರಿಗೆ 1986 ರಲ್ಲಿ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.