ಸ್ವಿಜರ್ಲೆಂಡ್ನಲ್ಲಿ ವಿಶ್ವದ ಅತಿ ಉದ್ದದ ರೈಲು ಸುರಂಗ ಮಾರ್ಗ ಸಂಚಾರಕ್ಕೆ ಮುಕ್ತ
ಸ್ವಿಜರ್ಲೆಂಡ್ನಲ್ಲಿ ವಿಶ್ವದ ಅತಿ ಉದ್ದವಾದ ಹಾಗೂ ಆಳವಾದ ರೈಲ್ವೆ ಸುರಂಗ ಮಾರ್ಗವನ್ನು ಬುಧವಾರ ಅಧಿಕೃತವಾಗಿ ಸಂಚಾರ ಮುಕ್ತಗೊಳಿಸಲಾಗಿದೆ.

Published On :
ಜೆನೆವಾ: ಸ್ವಿಜರ್ಲೆಂಡ್ನಲ್ಲಿ ವಿಶ್ವದ ಅತಿ ಉದ್ದವಾದ ಹಾಗೂ ಆಳವಾದ ರೈಲ್ವೆ ಸುರಂಗ ಮಾರ್ಗವನ್ನು ಬುಧವಾರ ಅಧಿಕೃತವಾಗಿ ಸಂಚಾರ ಮುಕ್ತಗೊಳಿಸಲಾಗಿದೆ.
ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ, ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್, ಇಟಲಿ ಪ್ರಧಾನಿ ಮಟ್ಟೆವೋ ರೆಂಝಿ ರೈಲ್ವೆ ಸುರಂಗ ಮಾರ್ಗಕ್ಕೆ ಚಾಲನೆ ನೀಡಿದರು.
ಸುಮಾರು ಎರಡು ದಶಕಗಳಿಂದ ನಿರ್ಮಿಸಲಾಗುತ್ತಿದ್ದ ಒಟ್ಟು 57ಕಿ.ಮೀ ಉದ್ದದ ಮತ್ತು 2.5 ಕಿ.ಮೀ ಆಳದಲ್ಲಿರುವ ಈ ಸುರಂಗಮಾರ್ಗ ಇಂದು ಸಂಚಾರಕ್ಕೆ ಮುಕ್ತವಾಗಿದ್ದು,
ಈ ಮೂಲಕ ಜಪಾನ್ನಲ್ಲಿರುವ 53.9 ಕಿ.ಮೀ ಉದ್ದದ ರೈಲ್ವೆ ಸುರಂಗ ಮಾರ್ಗವನ್ನು ಹಿಂದಿಕ್ಕಿದೆ.
1947ರಲ್ಲೇ ಈ ಸುರಂಗ ಮಾರ್ಗದ ನೀಲನಕ್ಷೆ ತಯಾರಾಗಿದ್ದರೂ ನಿರ್ಮಾಣ ಕೆಲಸ ಮಾತ್ರ 1992ರಲ್ಲಿ ಆರಂಭಗೊಂಡಿತ್ತು.
ನಿರ್ಮಾಣ ಹಂತದಲ್ಲಿ ಏಳು ಕಾರ್ವಿುಕರನ್ನು ಬಲಿಪಡೆದ ಈ ಸುರಂಗ ಮಾರ್ಗದ ಕಾರ್ಯ 12 ಬಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಒಟ್ಟು 57 ಕಿ.ಮೀ ಉದ್ದವಿರುವ ರೈಲ್ವೆ ಸುರಂಗವನ್ನು ಕ್ರಮಿಸಲು ರೈಲು 17 ನಿಮಿಷ ತೆಗೆದುಕೊಳ್ಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
SwitzerlandopensWorld\'s longest tunnelಸ್ವಿಜರ್ಲೆಂಡ್ವಿಶ್ವದ ಅತಿ ಉದ್ದದ ರೈಲು ಸುರಂಗ ಮಾರ್ಗಸಂಚಾರಕ್ಕೆ ಮುಕ್ತ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


