ವಿದೇಶ

ಅಮೆರಿಕದಲ್ಲಿ ಡ್ರೈ ಕ್ಲೀನ್ ಶಾಪ್ ನಡೆಸುತ್ತಿರುವ ಉತ್ತರ ಕೊರಿಯಾ ಅಧ್ಯಕ್ಷನ ಚಿಕ್ಕಮ್ಮ!

ಅಣ್ವಸ್ತ್ರ ಪರೀಕ್ಷೆ ನಡೆಸಿ ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿರುವ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ನಂತ ಪ್ರಭಾವಶಾಲಿಯ ಚಿಕ್ಕಮ್ಮ...

ಅಮೆರಿಕದಲ್ಲಿ ಡ್ರೈ ಕ್ಲೀನ್ ಶಾಪ್ ನಡೆಸುತ್ತಿರುವ ಉತ್ತರ ಕೊರಿಯಾ ಅಧ್ಯಕ್ಷನ ಚಿಕ್ಕಮ್ಮ!
ಕಿಮ್ ಜಾಂಗ್ ಉನ್
Published On :

ನ್ಯೂಯಾರ್ಕ್: ಅಣ್ವಸ್ತ್ರ ಪರೀಕ್ಷೆ ನಡೆಸಿ ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿರುವ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ನಂತ ಪ್ರಭಾವಶಾಲಿಯ ಚಿಕ್ಕಮ್ಮ ಅಮೆರಿಕದ ನ್ಯೂಯಾರ್ಕ್ ನಲ್ಲಿ ಡ್ರೈ ಕ್ಲೀನ್ ಶಾಪ್ ನಡೆಸಬೇಕಾದ ದುಸ್ತಿತಿ ಬಂದೊದಗಿದೆ.

ಉತ್ತರ ಕೊರಿಯಾದ ಮಾಜಿ ನಾಯಕ ಕಿಮ್ ಜಂಗ್ ಇನ್ ಅವರ ಮಡದಿ, ಕಿಮ್ ಜಾಂಗ್ ಉನ್  ತಾಯಿ ಕೋ ಯಾಂಗ್ ಹುಯೀ ಸೋದರಿ ಕೋ ಯಾಂಗ್ ಸೂಕಿ ಅವರು ಜೀವ ಬೆದರಿಕೆಯಿಂದಾಗಿ 1998ರಿಂದ ಅಮೆರಿಕದಲ್ಲಿ ಬದುಕಿದ್ದಾರೆ. ಪತಿ ಹಾಗೂ ಮೂವರು ಮಕ್ಕಳೊಂದಿಗೆ ನ್ಯೂಯಾರ್ಕ್ ನಲ್ಲಿ ನೆಲೆಸಿರುವ ಅವರು ಬದುಕು ನಡೆಸುವುದಕ್ಕಾಗಿ ಡ್ರೈ ಕ್ಲೀನ್ ಶಾಪ್ ನಡೆಸುತ್ತಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಉತ್ತರ ಕೊರಿಯಾದಲ್ಲಿ ಅಧಿಕಾರ ನಡೆಸುತ್ತಿದ್ದ ಕಿಮ್ ಕುಟುಂಬದ ಮಕ್ಕಳು ಸ್ವೀಜರ್ಲಾಂಡ್ ನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದು ಅವರ ಉಸ್ತುವಾರಿ ನೋಡಿಕೊಳ್ಳುವ ಸಲುವಾಗಿ ಸೂಕಿ ಅವರನ್ನು ಅಲ್ಲಿಗೆ ಕಳುಹಿಸಲಾಯಿತು.

ಸ್ವೀಜರ್ಲಾಂಡ್ ನಲ್ಲಿ ಓದುತ್ತಿದ್ದ ಕಿಮ್ ಜಾಂಗ್ ಉನ್ ನಮಗೆ ತೊಂದರೆ ಕೊಡುತ್ತಿರಲಿಲ್ಲ ಆದರೆ ಆತ ಶಾರ್ಟ್ ಟೆಂಪರ್ ಆಗಿದ್ದ ಸಹನೆ ಇರಲಿಲ್ಲ. ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸುವಂತೆ ಹೇಳುತ್ತಿದ್ದರು ಆತ ಅದನ್ನು ಕೇಳದೆ ಆಡುವುದರಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದ. ನಾವು ಜಾಸ್ತಿ ಏನಾದರೂ ಹೇಳಿದರೆ ಉಪವಾಸ ಮಾಡಿ ಹೆದರಿಸುತ್ತಿದ್ದ ಎಂದು ಸೂಕಿ ಕಿಮ್ ಬಗ್ಗೆ ಹೇಳಿದ್ದಾರೆ.

1984ರಲ್ಲಿ ಹುಟ್ಟಿದ ಕಿಮ್ ಜಾಂಗ್ ಉನ್ 2011ರಲ್ಲಿ ತಂದೆಯಿಂದ ಅಧಿಕಾರ ವಹಿಸಿಕೊಂಡಾಗ ಆತನಿಗೆ 27 ವರ್ಷವಾಗಿರಬೇಕು. ಸದ್ಯ 33 ಅಥವಾ 34 ವರ್ಷ ನಡೆಯುತ್ತಿರಬೇಕು. ಕಿಮ್ ಗೆ ಓದಿಗಿಂತ ಬ್ಯಾಸ್ಕೆಟ್ ಬಾಲ್ ಆಡುವುದೆಂದರೆ ಆತನಿಗೆ ಪ್ರಿಯ. ಮಲಗಬೇಕಾದರೂ ಬ್ಯಾಸ್ಕೆಟ್ ಬಾಲ್ ಅನ್ನು ಜತೆಯಾಗಿ ಇಟ್ಟುಕೊಂಡು ಮಲಗುತ್ತಿದ್ದ ಎಂದು ಸೂಕಿ ಹೇಳಿದ್ದಾರೆ. ಕಿಮ್ ಜಾಂಗ್ ಉನ್ ಶಾರ್ಟ್ ಟೆಂಪರ್ ಆಗಿರುವುದರಿಂದ ಆತನ ಕುಟುಂಬಸ್ಥರು ಸದ್ಯ ಆತನ ಬಳಿಗೆ ಬರಲು ಹಿಂಜರಿಯುತ್ತಿದ್ದಾರೆ. ಅದಕ್ಕೂ ಕಾರಣವುಂಟು 2011ರಲ್ಲಿ ಅಧಿಕಾರ ವಹಿಸಿಕೊಂಡ ಜಾಂಗ್ ಉನ್ ನಂತರ ತನ್ನ ಕುಟುಂಬಸ್ಥರನ್ನು ಹೀನಾಯವಾಗಿ ಕೊಲೆ ಮಾಡಿಸಿದ್ದಾನೆ ಎಂಬ ಆರೋಪಗಳು ಆತನ ಮೇಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.