ವಿದೇಶ

ಹಸಿದವನು ಆಹಾರ ಕದ್ದರೆ ಅದು ಅಪರಾಧವಲ್ಲ: ಇಟಲಿ ನ್ಯಾಯಾಲಯ

ಹೊಟ್ಟೆಗೆ ಆಹಾರವಿಲ್ಲದಿರುವಾಗ ಆಹಾರವನ್ನು ಕದಿಯುವುದು ಅಪರಾಧ ಎಂದೆನಿಸಲ್ಲ ಎಂದು ಇಟಲಿಯ ಪರಮೋಚ್ಛ ನ್ಯಾಯಾಲಯ ಹೇಳಿದೆ. ಹಸಿವು...

ಹಸಿದವನು ಆಹಾರ ಕದ್ದರೆ ಅದು ಅಪರಾಧವಲ್ಲ: ಇಟಲಿ ನ್ಯಾಯಾಲಯ
ಸಾಂದರ್ಭಿಕ ಚಿತ್ರ
Published On :
ರೋಮ್: ಹೊಟ್ಟೆಗೆ ಆಹಾರವಿಲ್ಲದಿರುವಾಗ ಆಹಾರವನ್ನು ಕದಿಯುವುದು ಅಪರಾಧ ಎಂದೆನಿಸಲ್ಲ ಎಂದು ಇಟಲಿಯ ಪರಮೋಚ್ಛ ನ್ಯಾಯಾಲಯ ಹೇಳಿದೆ. ಹಸಿವು ನೀಗಿಸಲು ಸೂಪರ್ ಮಾರ್ಕೆಟ್‌ನಿಂದ ಚೀಸ್ ಮತ್ತು ಸಾಸೇಜ್ ಕದ್ದ ರೋಮನ್ ಓಸ್ಟ್ರೀಯೋಕೋವ್ ಎಂಬಾತನನ್ನು ಕೋರ್ಟ್ ಆರೋಪ ಮುಕ್ತ ಮಾಡಿದೆ.
ಹಸಿವಿನಿಂದ ಬಳಲುತ್ತಿದ್ದ  ಉಕ್ರೇನ್ ಮೂಲದ ಓಸ್ಟ್ರೀಯೋಕೋವ್ (36) ಆಹಾರ ಕದಿಯುವಾಗ ಸಿಕ್ಕಿ ಬಿದ್ದಿದ್ದನು. ಈತನನ್ನು ಪೊಲೀಸರಿಗೆ ಒಪ್ಪಿಸಿ ಕೋರ್ಟ್‌ಗೆ ಹಾಜರು ಪಡಿಸಿದಾಗ 100 ಯುರೋ ದಂಡ ಪಾವತಿಸುವಂತೆ ಆದೇಶಿಸಿ 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ ದಂಡ ಪಾವತಿ ಮಾಡುವ ದುಡ್ಡು ಆತನಲ್ಲಿರಲಿಲ್ಲ.
ಸೋಮವಾರ ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯವು ಬಡವಓಸ್ಟ್ರೀಯೋಕೋವ್ ಒಂದು ಹೊತ್ತಿನ ಹಸಿವು ನೀಗಿಸಲು ಸ್ವಲ್ಪ ಆಹಾರವನ್ನು ಕದ್ದಿದ್ದಾನೆ. ಹಸಿವಿನಿಂದ ಆಹಾರ ಕದ್ದ ಕಾರಣ ಇದನ್ನು ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾಯಾಧೀಶರು ಪ್ರಸ್ತುತ ಪ್ರಕರಣವನ್ನು ತಳ್ಳಿ, ಆರೋಪಿಯನ್ನು ಬಂಧಮುಕ್ತಗೊಳಿಸುವಂತೆ ಆದೇಶಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.