ಒಬಾಮಾರ ಒಳ್ಳೆಯ ಕೆಲಸವನ್ನು ಟ್ರಂಪ್ ಗೆ ನೀಡಬೇಡಿ: ಕ್ಲಿಂಟನ್
"ಬರಾಕ್ ಒಬಾಮಾ ಸೃಷ್ಟಿಸಿರುವ ಲೆಗಸಿ ಡೊನಾಲ್ಡ್ ಟ್ರಂಪ್ ಕೈಗೆ ಜಾರುವುದಕ್ಕೆ ನಾವು ಬಿಡಬಾರದು" ಎಂದು ಅಮೆರಿಕಾ ಅಧ್ಯಕ್ಷೀಯ ಸ್ಥಾನದ ಡೆಮಾಕ್ರಟಿಕ್ ಪಕ್ಷದ ಮುಂಚೂಣಿ

ವಾಶಿಂಗ್ಟನ್: "ಬರಾಕ್ ಒಬಾಮಾ ಸೃಷ್ಟಿಸಿರುವ ಲೆಗಸಿ ಡೊನಾಲ್ಡ್ ಟ್ರಂಪ್ ಕೈಗೆ ಜಾರುವುದಕ್ಕೆ ನಾವು ಬಿಡಬಾರದು" ಎಂದು ಅಮೆರಿಕಾ ಅಧ್ಯಕ್ಷೀಯ ಸ್ಥಾನದ ಡೆಮಾಕ್ರಟಿಕ್ ಪಕ್ಷದ ಮುಂಚೂಣಿ ಅಭ್ಯರ್ಥಿ ಹಿಲರಿ ಕ್ಲಿಂಟನ್ ರಿಪಬ್ಲಿಕನ್ ಪಕ್ಷದ ಮುಂಚೂಣಿ ಅಭ್ಯರ್ಥಿ ಟ್ರಂಪ್ ವಿರುದ್ಧ ಮಾತನಾಡಿದ್ದಾರೆ.
"ದ್ವೇಷದ ಮಾತನ್ನಾಡುವವರ ಕೈಗೆ ದೇಶದ ಭರವಸೆ, ಕನಸುಗಳನ್ನು ನೀಡಿ ಅವುಗಳನ್ನು ಹಾಳುಗೆಡುವುದು ಬೇಡ" ಎಂದು ಸೆನೆಟರ್ ಮತ್ತು ಅಮೆರಿಕಾದ ಮಾಜಿ ಕಾರ್ಯದರ್ಶಿ ಭಾನುವಾರ ರಾತ್ರಿ ಹೇಳಿದ್ದಾರೆ.
ಡೆಟ್ರಾಯ್ಟ್ ನ ತಮ್ಮ ಭಾಷಣದಲ್ಲಿ ಟ್ರಂಪ್ ಅವರ ದ್ವೇಷಪೂರಿತ ಭಾಷಣಗಳ ಮೇಲೆ ವಾಗ್ದಾಳಿ ನಡೆಸಿರುವ ಕ್ಲಿಂಟನ್ ಒಬಾಮಾ ಅವರ ಅಧ್ಯಕ್ಷೀಯ ಅವಧಿ ಕೊನೆಯಾಗುತ್ತಿರುವ ಸಮಯದಲ್ಲಿ ದೇಶವನ್ನು ಒಗ್ಗೂಡಿಸುವ ತುರ್ತು ಅವಶ್ಯಕತೆ ಇದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


