ವಿದೇಶ

ಪಠಾಣ್ ಕೋಟ್ ದಾಳಿ: ಪಾಕ್ ತನಿಖಾ ತಂಡಕ್ಕೆ ವೀಸಾ ನೀಡಿದ ಭಾರತ

ಪಠಾಣ್ ಕೋಟ್ ದಾಳಿಯ ತನಿಖೆಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬರುವ ಐವರು ಅಧಿಕಾರಿಗಳಿಗೆ ಭಾರತ ವೀಸಾ...

ಪಠಾಣ್ ಕೋಟ್ ದಾಳಿ: ಪಾಕ್ ತನಿಖಾ ತಂಡಕ್ಕೆ ವೀಸಾ ನೀಡಿದ ಭಾರತ
ಸಾಂದರ್ಭಿಕ ಚಿತ್ರ
Published On :
ಇಸ್ಲಾಮಾಬಾದ್: ಪಠಾಣ್ ಕೋಟ್ ದಾಳಿಯ ತನಿಖೆಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬರುವ ಐವರು ಅಧಿಕಾರಿಗಳಿಗೆ ಭಾರತ ವೀಸಾ ನೀಡಿದೆ.
ಭಾನುವಾರ ಭಾರತಕ್ಕೆ ಭೇಟಿ ನೀಡುತ್ತಿರುವ ಐವರು ಅಧಿಕಾರಿಗಳನ್ನೊಳಗೊಂಡ ಪಾಕಿಸ್ತಾನ ತನಿಖಾ ತಂಡಕ್ಕೆ ಭಾರತ ವೀಸಾ ನೀಡಿದೆ. ನಾಗರಿಕ ಆಡಳಿತ ಹಾಗೂ ಸೇನಾ ಗುಪ್ತಚರ ವಿಭಾಗಗಳಿಗೆ ಸಂಬಂಧಿಸಿದ ಅಧಿಕಾರಿಗಳು ಈ ತಂಡದಲ್ಲಿದ್ದಾರೆ. ಈ ತಂಡ ಮಾರ್ಚ್ 27ರಂದು ಭಾರತಕ್ಕೆ ಬರುತ್ತಿದ್ದು, 28ರಿಂದ ತನಿಖೆ ಆರಂಭಿಸಲಿದೆ ಎಂದು ತಿಳಿದು ಬಂದಿದೆ. 
ಪಂಜಾಬ್ ನ ಭಯೋತ್ಪಾದನಾ ನಿಗ್ರಹ ದಳದ ಹೆಚ್ಚುವರಿ ಐಜಿಪಿ ಮುಹಮ್ಮದ್ ತಾಹಿರ್ ರೈ, ಲಾಹೋರ್ ನ ಗುಪ್ತಚರ ಇಲಾಖೆಯ ಉಪ ನಿರ್ದೇಶಕ  ಮೊಹಮ್ಮದ್ ಅಜೀಂ ಅರ್ಷದ್, ಐಎಸ್ಐ ನ ಲೆಫ್ಟಿನೆಂಟ್ ಕರ್ನಲ್ ತನ್ವೀರ್ ಅಹ್ಮದ್, ಮಿಲಿಟರಿ ಗುಪ್ತಚರ, ಲೆಫ್ಟಿನೆಂಟ್ ಕರ್ನಲ್ ಇರ್ಫಾನ್ ಮಿರ್ಜಾ ಮತ್ತು ಗುಜ್ರಾನ್ವಾಲಾ ಸಿಟಿಡಿ ತನಿಖಾಧಿಕಾರಿ ಶಾಹಿದ್ ತನ್ವೀರ್ ತನಿಖಾ ತಂಡದಲ್ಲಿದ್ದಾರೆ.
ಪಠಾಣ್ ಕೋಟ್ ದಾಳಿಗೆ ಉಗ್ರರು ಬಳಿಸಿದ ಶಶ್ತ್ರಾಸ್ತ್ರ ಪರಿಶೀಲನೆ, ಸಾಕ್ಷಿಗಳ ವಿಚಾರಣೆಯನ್ನು ನಡೆಸಲಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.