ವಿದೇಶ

ರಾಜಪಕ್ಶೆಯನ್ನು ಭ್ರಷ್ಟಾಚಾರ ಆರೋಪಗಳಿಂದ ಮುಕ್ತರನ್ನಾಗಿಸಲು ದೇವರ ಮೊರೆ ಹೋದ ಅಭಿಮಾನಿಗಳು

ಶ್ರೀಲಂಕಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮಹಿಂದ ರಾಜಪಕ್ಶೆ ಮಾಡಿರುವ ಭ್ರಷ್ಟಾಚಾರ, ಈಗ ಅವರಿಗೆ ಉರುಳಾಗಿ ಪರಿಣಮಿಸಿದೆ.

ರಾಜಪಕ್ಶೆಯನ್ನು ಭ್ರಷ್ಟಾಚಾರ ಆರೋಪಗಳಿಂದ ಮುಕ್ತರನ್ನಾಗಿಸಲು ದೇವರ ಮೊರೆ ಹೋದ ಅಭಿಮಾನಿಗಳು
ರಾಜಪಕ್ಶೆಯನ್ನು ಭ್ರಷ್ಟಾಚಾರ ಆರೋಪಗಳಿಂದ ಮುಕ್ತರನ್ನಾಗಿಸಲು ದೇವರ ಮೊರೆ ಹೋದ ಅಭಿಮಾನಿಗಳು
Published On :

ಕೊಲಂಬೊ: ಶ್ರೀಲಂಕಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮಹಿಂದ ರಾಜಪಕ್ಶೆ ಮಾಡಿರುವ ಭ್ರಷ್ಟಾಚಾರ, ಈಗ ಅವರಿಗೆ ಉರುಳಾಗಿ ಪರಿಣಮಿಸಿದೆ. ರಾಜಪಕ್ಸ ಯವರನ್ನು ಆರೋಪಗಳಿಂದ ಹೊರತರಲು ಕಾನೂನು ಹಾಗೂ ರಾಜಕೀಯ ನೆರವು ವಿಫಲವಾಗಿದ್ದು, ಅವರ ಬೆಂಬಲಿಗರು ಈಗ ಧಾರ್ಮಿಕ ವಿಧಿಗಳ ಮೊರೆ ಹೋಗಿದ್ದಾರೆ.

ಪ್ರಿನ್ಸೆಟಾನ್ ಯೂನಿವರ್ಸಿಟಿಯ ಪ್ರೊ. ಜ್ಞಾನನಾಥ್ ಅವರ ಪ್ರಕಾರ ರಾಜಪಕ್ಶೆ ಬೆಂಬಲಿಗರು ಹಿಂದೂ ದೇವಾಲಯಗಳಲ್ಲಿ ತೆಂಗಿನ ಕಾಯಿ ಒಡೆಯುವ ಧಾರ್ಮಿಕ ವಿಧಿ(ರಿಚ್ಯುಯಲ್ ಕರ್ಸಿಂಗ್)ಹಾಗು ಮಾಂತ್ರಿಕರೊಂದಿಗೆ ಆಂತರಿಕ ಸಭೆಯ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.

ಶ್ರೀಲಂಕಾದ ಸಂಸತ್ ನ ವಿಪಕ್ಷದ ನೇತೃತ್ವ ವಹಿಸಿರುವ ರಾಜಪಕ್ಶೆ ಬೆಂಬಲಿಗ ಸಂಸದರಾದ  ದಿನೇಶ್ ಗುಣವರ್ಧನೆ, ಬಂದುಲಾ ಗುಣವರ್ಧನೆ, ಸಿಬಿ ರತ್ನಯಕೆ  ಶ್ರೀಲಂಕಾದ ದೇವಾಲಯದಲ್ಲಿ ಫೆ.6 ರಂದು 100,000 ತೆಂಗಿನ ಕಾಯಿಗಳನ್ನು ಒಡೆದಿದ್ದಾರೆ. ಆದರೆ ಅಷ್ಟು ತೆಂಗಿನಕಾಯಿಗಳನ್ನು ಅಕ್ರಮವಾಗಿ ತರಲಾಗಿತ್ತು ಎಂಬ ಕಾರಣಕ್ಕೆ ದೇವಾಲಯ ದೇವತೆ ತೃಪ್ತಿಯಾಗದ ಪರಿಣಾಮ ಈ ಧಾರ್ಮಿಕ ಕ್ರಿಯೆ ವಿಫಲವಾಗಿದೆಯಂತೆ.    

ಇದೇ ರೀತಿ ಫೆ.13 ರಂದು ಒಂದು ಧಾರ್ಮಿಕ ಕ್ರಿಯೆಯನ್ನು ನಡೆಸಲಾಗಿದೆ. ಆದರೆ ಇದರಿಂದಾಗಿ ರಾಜಪಕ್ಶೆಗೆ ಕಾನೂನಾತ್ಮಕವಾಗಿ ರಿಲೀಫ್ ದೊರೆಯದೆ ಇದ್ದರೂ, ಮಾ.17 ರಂದು ನಡೆದ ರ್ಯಾಲಿ ಯಶಸ್ವಿಯಾಗಿದ್ದು ಬೆಂಬಲಿಗರಲ್ಲಿ ಆತ್ಮವಿಶ್ವಾಸ ಮೂಡಲು ನೆರವಾಗಿದೆ ಎಂಬ ನಂಬಿಕೆ ಉಂಟಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.