ಭ್ರಷ್ಟಾಚಾರ

'ಬಿಜೆಪಿ ಭ್ರಷ್ಟ ನಾಯಕರಿಂದ ತುಂಬಿದೆ': ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಪ್ರತಿಪಕ್ಷಗಳ ವಿರುದ್ಧವೇ ಕಾಂಗ್ರೆಸ್ ಪ್ರತಿಭಟನೆ
ಪ್ರತಿಭಟನೆಯ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕರ್ನಾಟಕದ ಪ್ರಮುಖ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಮುಖವಾಡಗಳನ್ನು ಧರಿಸಿದ್ದರು.

ದೊಡ್ಡಬಳ್ಳಾಪುರ ಮಾಜಿ ಸಹಾಯಕ ಆಯುಕ್ತೆಯಿಂದ ಅಕ್ರಮ: ದಾಖಲೆ ತಿರುಚಿ 62 ಎಕರೆ ಜಮೀನು ವರ್ಗಾವಣೆ
ಅಕ್ರಮಗಳ ಕುರಿತು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಪ್ರಾಥಮಿಕ ತನಿಖಾ ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ.

'ಪ್ರಜಾ ಸೇವೆ' ಅಡಿ ಜಿಲ್ಲಾ ಉಸ್ತುವಾರಿ ಸಚಿವರು-ಶಾಸಕರು ಪ್ರತಿ 2 ವಾರಕ್ಕೊಮ್ಮೆ ತಾಲೂಕುಗಳಿಗೆ ಭೇಟಿ ನೀಡಬೇಕು: CM; Video
ತಾಲೂಕು ಮಟ್ಟದಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳು ತಮ್ಮ ಕರ್ತವ್ಯದ ಕೇಂದ್ರ ಸ್ಥಾನದಲ್ಲೇ ವಾಸಿಸಬೇಕು ಹಾಗೂ ತಮ್ಮ ವ್ಯಾಪ್ತಿಯ ಪ್ರದೇಶಗಳಿಗೆ ನಿಯಮಿತವಾಗಿ ಭೇಟಿ ನೀಡಿ, ಸ್ಥಳದಲ್ಲೇ ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ನಾನು ಸೇರಿದಂತೆ ಎಲ್ಲರೂ ಸರ್ಕಾರಿ ನೌಕರರೇ; ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ, ಡಬಲ್ ಬಿಲ್ ಮಾಡುವವರನ್ನು ಮಟ್ಟ ಹಾಕುವೆ: CM ಡಿಕೆಶಿ ಎಚ್ಚರಿಕೆ
ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಸರ್ಕಾರಿ ನೌಕರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎ, ಭ್ರಷ್ಟಾಚಾರದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಡಬಲ್ ಬಿಲ್ ಮಾಡುವವರನ್ನು ಮಟ್ಟ ಹಾಕುತ್ತೇನೆ ಎಂದು ಎಚ್ಚರಿಸಿದರು.

'ದೇಶದ ಅತ್ಯಂತ ಭ್ರಷ್ಟ ರಾಜ್ಯಗಳಲ್ಲಿ ಕರ್ನಾಟಕಕ್ಕೆ 5ನೇ ಸ್ಥಾನ; ಪ್ರತಿಯೊಂದು ಇಲಾಖೆಯಲ್ಲೂ ಲಂಚ ಮಿತಿಮೀರಿದೆ': ಉಪ ಲೋಕಾಯುಕ್ತ
ಭ್ರಷ್ಟಾಚಾರ ನಿಯಂತ್ರಣಕ್ಕೆ ಬರದಿದ್ದರೆ ಭವಿಷ್ಯದಲ್ಲಿ ದೊಡ್ಡ ಅಪಾಯ ಎದುರಾಗಲಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸರ್ಕಾರದ ಇಲಾಖೆಗಳ ಅಧಿಕಾರಿಗಳು ಮತ್ತು ನಾಗರಿಕರು ಮನಸ್ಸು ಮಾಡಬೇಕು ಎಂದರು.

ಬೋಗಸ್ ದಾಖಲೆ ಸೃಷ್ಟಿಸಿ 23 ಕೋಟಿ ರೂ ಲೂಟಿ; ಬೆಳಗಾವಿ ಕೊಳಚೆ ನಿರ್ಮೂಲನಾ ಮಂಡಳಿಗೆ ಸೇರಿದ 8 ಕಡೆ ಲೋಕಾಯುಕ್ತ ದಾಳಿ!
ಬೆಳಗಾವಿ ಕೊಳಚೆ ನಿರ್ಮೂಲನಾ ಮಂಡಳಿಗೆ ಸೇರಿದ 8 ಕಡೆ ಇಂದು ಲೋಕಾಯಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. 600 ಮನೆಗಳ ನಿರ್ಮಾಣಕ್ಕೆಂದು 33 ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು.

IPL 2026: ಬ್ರಹ್ಮಾಂಡ ಭ್ರಷ್ಟಾಚಾರ, ಅವಕಾಶಕ್ಕಾಗಿ ಕ್ರಿಕೆಟಿಗರಿಂದ ಹಣ ವಸೂಲಿ?; 'ಇನ್ನೆಷ್ಟು ಕೀಳುಮಟ್ಟಕ್ಕೆ ಇಳಿಯುತ್ತೀರಿ'- Lalit Modi
ಐಪಿಎಲ್ ತಂಡಗಳಲ್ಲಿ ಆಯ್ಕೆ ಮಾಡಿಕೊಡುವ ಹೆಸರಿನಲ್ಲಿ ಆಟಗಾರರಿಂದ ಭಾರೀ ಪ್ರಮಾಣದಲ್ಲಿ ಹಣ ವಸೂಲಿ ಮಾಡಲು ಯತ್ನಿಸಲಾಗುತ್ತಿದೆ. ಈ ಖತರ್ನಾಕ್ ದಂಧೆಯಲ್ಲಿ ಸ್ವತಃ ರಾಜೀವ್ ಶುಕ್ಲಾ ಅವರ ಪಿಎ ಶಾಮೀಲಾಗಿದ್ದಾನೆ.

ಸರ್ಕಾರಿ ಕಚೇರಿಗಳಲ್ಲಿ 'ಲಂಚ ಕೊಡಬೇಡಿ' ಫಲಕ ಅಳವಡಿಕೆ ಕಡ್ಡಾಯ: ರಾಜ್ಯ ಸರ್ಕಾರ ಆದೇಶ
ಈ ಕುರಿತು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸೂಚನೆ ನೀಡಿದ್ದು, ಸೂಚನೆಯಲ್ಲಿ ಸರ್ಕಾರಿ ಕಚೇರಿಗಳಲ್ಲಿ ಲಂಚದ ಸಮಸ್ಯೆಯನ್ನು ತಡೆಯಲು ಹಾಗೂ ಪಾರದರ್ಶಕತೆ ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ತುಮಕೂರು: 12 ಸಾವಿರ ರೂ ಲಂಚ ಸ್ವೀಕರಿಸುತ್ತಿದ್ದ DHO ಕಚೇರಿ ವ್ಯವಸ್ಥಾಪಕ ಲೋಕಾಯುಕ್ತ ಬಲೆಗೆ
ತುಮಕೂರು ಡಿಎಚ್ಒ ಕಚೇರಿಯಲ್ಲಿ 12 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಲೆಕ್ಕಪತ್ರ ವ್ಯವಸ್ಥಾಪಕ ಅರವಿಂದ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 10 ತಾಲೂಕುಗಳಲ್ಲಿ ಜಾತ್ರೆ, ಸಂತೆಗಳಲ್ಲಿ ಆರೋಗ್ಯ ಜಾಗೃತಿ ಬಗ್ಗೆ ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಸಲಾಗಿತ್ತು.

