ಬರೋಬ್ಬರಿ 95 ವರ್ಷಗಳ ನಂತರ ಪತ್ತೆಯಾಯ್ತು ನೌಕಾಪಡೆ ಹಡಗು
95 ವರ್ಷಗಳ ಹಿಂದೆ 56 ಪ್ರಯಾಣಿಕರ ಜತೆ ಕಾಣೆಯಾಗಿದ್ದ ಅಮೆರಿಕದ ನೌಕಾಪಡೆಯ ಹಡಗನ್ನು ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಪತ್ತೆಹಚ್ಚುವ ಮೂಲಕ ಅಮೆರಿಕ ...

ವಾಷಿಂಗ್ಟನ್ : 95 ವರ್ಷಗಳ ಹಿಂದೆ 56 ಪ್ರಯಾಣಿಕರ ಜತೆ ಕಾಣೆಯಾಗಿದ್ದ ಅಮೆರಿಕದ ನೌಕಾಪಡೆಯ ಹಡಗನ್ನು ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಪತ್ತೆಹಚ್ಚುವ ಮೂಲಕ ಅಮೆರಿಕ ನೌಕಾಪಡೆಯು ಇತಿಹಾಸ ನಿರ್ಮಿಸಿದೆ.
1921ರ ಮಾರ್ಚ್ 25ರಂದು ಸ್ಯಾನ್ ಫ್ರಾನ್ಸಿಸ್ಕೊದಿಂದ ಹವಾಯಿ ದ್ವೀಪದ ಪರ್ಲ್ ಹಾರ್ಬರ್ ಬಂದರಿಗೆ ತೆರಳಿದ್ದ ನೌಕಾಪಡೆಯ ಕನೆಸ್ಟೊಗ ಟಗ್ ಹಡಗು ನಾಪತ್ತೆಯಾಗಿತ್ತು ಎಂದು ನೌಕಾಪಡೆ ಹಾಗೂ ರಾಷ್ಟ್ರೀಯ ಸಾಗರ ಹವಾಮಾನ ಇಲಾಖೆಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
95 ವರ್ಷಗಳ ನಂತರ ಹಡಗು ಪತ್ತೆಯಾಗಿದ್ದು ಅಚ್ಚರಿಯ ಸಂಗತಿ ಎಂದು ರಾಷ್ಟ್ರೀಯ ಸಾಗರ ಹವಾಮಾನ ಇಲಾಖೆಯ ಉಪ ಕಾರ್ಯದರ್ಶಿ ಮಾನ್ಸನ್ ಬ್ರೌನ್ ತಿಳಿಸಿದ್ದಾರೆ.
ಸ್ಯಾನ್‌ಫ್ರಾನ್ಸಿಸ್ಕೊ ನಗರದಿಂದ 30 ನಾಟಿಕಲ್ ಮೈಲು ದೂರದಲ್ಲಿರುವ ಫಾರಲೊನ್ ದ್ವೀಪದ ಬಳಿಯ ಸಮುದ್ರದ 59 ಮೀಟರ್ (189 ಅಡಿ) ಆಳದಲ್ಲಿ ಹಡಗು ಇರುವುದಾಗಿ 2009ರಲ್ಲಿಯೇ ತಜ್ಞರು ಪತ್ತೆ ಹಚ್ಚಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


