ವಿದೇಶ

ಪ್ರಾಥಮಿಕ ಹಂತದಲ್ಲಿ ಭಾರೀ ಗೆಲುವು: ಮಹಾ ಚುನಾವಣೆಯತ್ತ ಟ್ರಂಪ್, ಹಿಲರಿ ಚಿತ್ತ

ಡೆಮಾಕ್ರಟಿಕ್ ಪಕ್ಷದ ಅಮೆರಿಕದ ಅಧ್ಯಕ್ಷೀಯ ಪದವಿ ಅಭ್ಯರ್ಥಿ ಹಿಲರಿ ಕ್ಲಿಂಟನ್ ನಿನ್ನೆ ಮಹತ್ವದ ಸ್ಮರಣೀಯ...

ಪ್ರಾಥಮಿಕ ಹಂತದಲ್ಲಿ ಭಾರೀ ಗೆಲುವು: ಮಹಾ ಚುನಾವಣೆಯತ್ತ ಟ್ರಂಪ್, ಹಿಲರಿ ಚಿತ್ತ
ಡೊನಾಲ್ಡ್ ಟ್ರಂಪ್-ಹಿಲರಿ ಕ್ಲಿಂಟನ್
Published On :

ಕ್ಲೆವೆಲ್ಯಾಂಡ್(ಯುಎಸ್ಎ): ಡೆಮಾಕ್ರಟಿಕ್ ಪಕ್ಷದ ಅಮೆರಿಕದ ಅಧ್ಯಕ್ಷೀಯ ಪದವಿ ಅಭ್ಯರ್ಥಿ ಹಿಲರಿ ಕ್ಲಿಂಟನ್ ನಿನ್ನೆ ಮಹತ್ವದ ಸ್ಮರಣೀಯ ಹೆಜ್ಜೆಯನ್ನಿರಿಸಿದ್ದು, ಇನ್ನು ರಿಪಬ್ಲಿಕ್ ಪಕ್ಷದ ಡೊನಾಲ್ಡ್ ಟ್ರಂಪ್ ಕೂಡ ತಮ್ಮ ಗೆಲುವಿನ ಯಾತ್ರೆಯನ್ನು ಮುಂದುವರಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರು ಪ್ರಾಥಮಿಕ ಹಂತದ ಚುನಾವಣೆಯಲ್ಲಿ ಇಲ್ಲಿನೊಯಿಸ್, ಉತ್ತರ ಕ್ಯಾರೊಲಿನಾ ಮತ್ತು ಫ್ಲೋರಿಡಾಗಳಲ್ಲಿ ಗೆಲುವು ಕಂಡರೆ ಅಲ್ಲಿನ ಸೆಲೆಟರ್ ಮಾರ್ಕೋ ರುಬಿಯೋ ಅವರನ್ನು ಸೋಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರ ಚುನಾವಣಾ ರ್ಯಾಲಿಯನ್ನು ವಜಾಗೊಳಿಸಲಾಗಿದೆ.

''ಇದೊಂದು ಅದ್ಭುತವಾದ ಸಂಜೆ, ನಾವು ಗೆದ್ದೇ ಗೆಲ್ಲುತ್ತೇವೆ, ನಾವು ನಿಲ್ಲುವುದಿಲ್ಲ'' ಎಂದು ಟ್ರಂಪ್ ನಿನ್ನೆ ಸಂಜೆ ಖುಷಿಯಿಂದ ಉದ್ಘರಿಸಿದರು. ಬರುವ ಜುಲೈಯಲ್ಲಿ ಕ್ಲಿವ್ ಲಾಂಡ್ ನಲ್ಲಿ ನಡೆಯಲಿರುವ ಪಕ್ಷದ ನಾಮನಿರ್ದೇಶನದ ಸವಾಲುಗಳನ್ನು ತಡೆಯಲು ಡೊನಾಲ್ಡ್ ಟ್ರಂಪ್ ಅವರಿಗೆ ಸಾವಿರದ 237 ಪ್ರತಿನಿಧಿಗಳು ಸಹಾಯ ಮಾಡಬೇಕಾಗಿದೆ.

ಇನ್ನೊಂದೆಡೆ ಹಿಲರಿ ಕ್ಲಿಂಟನ್ ಕೂಡ ತಮ್ಮ ಗೆಲುವಿನ ಯಾತ್ರೆ ಮುಂದುವರಿಸಿದ್ದಾರೆ. ಅವರು ಫ್ಲೋರಿಡಾ, ಉತ್ತರ ಕ್ಯಾರೊಲಿನಾ ಮತ್ತು ಒಹಿಯೋದಲ್ಲಿ ಬರ್ನಿ ಸಾಂಡರ್ಸ್ ಅವರನ್ನು ಸೋಲಿಸಿದ್ದಾರೆ. ಇನ್ನಷ್ಟು ಕ್ಷೇತ್ರಗಳಲ್ಲಿ ಡೆಮೊಕ್ರಟಿಕ್ ಪಕ್ಷದ ನಾಮ ನಿರ್ದೇಶನವನ್ನು ನಾವು ಬಯಸುತ್ತಿದ್ದು, ನವೆಂಬರ್ ನ ಮಹಾ ಚುನಾವಣೆಯಲ್ಲಿ ಗೆಲ್ಲುವುದು ನಮ್ಮ ಗುರಿ ಎಂದು ಕ್ಲಿಂಟನ್ ಹೇಳಿದ್ದಾರೆ.

ವಲಸಿಗರ ವಿರುದ್ಧ, ಮುಸಲ್ಮಾನರ ವಿರುದ್ಧ ಧೋರಣೆ ಹೊಂದಿರುವ ವ್ಯಕ್ತಿಯೊಬ್ಬರು ಅಧ್ಯಕ್ಷೀಯ ಹುದ್ದೆ ಸ್ವೀಕರಿಸಿದರೆ ನಮ್ಮ ದೇಶದ ಸ್ಥಿತಿ ಏನಾಗಬಹುದು ಎಂಬುದನ್ನು ಯೋಚಿಸಬೇಕಾಗಿದೆ ಎಂದು ಹಿಲರಿ ಕ್ಲಿಂಟನ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.