ವಿದೇಶ

ಪಿಟ್ಸ್ ಬರ್ಗ್ ನಲ್ಲಿ ಶೂಟೌಟ್: ಕನಿಷ್ಠ ಐವರ ಸಾವು

ಅಮೆರಿಕದ ಪಿಟ್ಸ್ ಬರ್ಗ್ ನಲ್ಲಿ ಇಬ್ಬರು ಆಗಂತುಕರು ಗುರುವಾರ ನಡೆಸಿದ ಶೂಟೌಟ್ ನಲ್ಲಿ ಕನಿಷ್ಠ ಐದು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ...

ಪಿಟ್ಸ್ ಬರ್ಗ್ ನಲ್ಲಿ ಶೂಟೌಟ್: ಕನಿಷ್ಠ ಐವರ ಸಾವು
ಪಿಟ್ಸ್ ಬರ್ಗ್ ನಲ್ಲಿ ಶೂಟೌಟ್ (ಚಿತ್ರಕೃಪೆ: ರಾಯಿಟರ್ಸ್)
Published On :

ಪಿಟ್ಸ್ ಬರ್ಗ್: ಅಮೆರಿಕದ ಪಿಟ್ಸ್ ಬರ್ಗ್ ನಲ್ಲಿ ಇಬ್ಬರು ಆಗಂತುಕರು ಗುರುವಾರ ನಡೆಸಿದ ಶೂಟೌಟ್ ನಲ್ಲಿ ಕನಿಷ್ಠ ಐದು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು  ತಿಳಿದುಬಂದಿದೆ.

ಅಮೆರಿಕದ ಪಿಟ್ಸ್ ಬರ್ಗ್ ನಗರದಿಂದ ಸುಮಾರು 13 ಕಿ.ಮೀ ದೂರದಲ್ಲಿರುವ ವಿಕಿನ್ಸ್ ಬರ್ಗ್ ನ ವಸತಿ ಸಮುಚ್ಛಯದ ಆವರಣದಲ್ಲಿ ಈ ಶೂಟೌಟ್ ನಡೆದಿದ್ದು, ಇಬ್ಬರು ಆಗಂತುಕರು ಏಕಾಏಕಿ  ಸ್ಥಳೀಯ ನಿವಾಸಿಗಳ ಮೇಲೆ ಗುಂಡಿನ ಮಳೆಗರೆದಿದ್ದಾರೆ. ಘಟನೆಯಲ್ಲಿ ನಾಲ್ಕು ಮಂದಿ ಮಹಿಳೆಯರು ಮತ್ತು ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ.  ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ಪ್ರಸ್ತುತ ಶೂಟೌಟ್ ನಡೆದಿರುವ ವಿಕಿನ್ಸ್ ಬರ್ಗ್ ನ ವಸತಿ ಸಮುಚ್ಛಯದಲ್ಲಿ ಬಹುತೇಕ ಮಧ್ಯಮ ವರ್ಗದವರೇ ಹೆಚ್ಚಾಗಿ ನೆಲೆಸಿದ್ದು, ಈ ಹಿಂದೆ ಇಲ್ಲಿ ಇಂತಹ  ದಾಳಿಗಳಾಗಿರಲಿಲ್ಲ ಎಂದು ತಿಳಿದುಬಂದಿದೆ. ವಸತಿ ಸಮುಚ್ಛಯ ಸೇರಿಕೊಂಡಿದ್ದ ಇಬ್ಬರು ಆಗಂತುಕರು ಗುಂಡಿನ ಸುರಿಮಳೆಗೈದಿದ್ದಾರೆ. ದುಷ್ಕರ್ಮಿಗಳು ಸುಮಾರು 20 ಸುತ್ತು ಗುಂಡು ಹಾರಿಸಿದ  ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಸ್ತುತ ದಾಳಿ ನಡೆದಿರುವ ವಿಕಿನ್ಸ್ ಬರ್ಗ್ ನ ವಸತಿ ಸಮುಚ್ಛಯವನ್ನು ಪೊಲೀಸರು ಸುತ್ತುವರೆದಿದ್ದು, ಆಗಂತುಕರಿಗಾಗಿ ಶೋಧ  ನಡೆಸುತ್ತಿದ್ದಾರೆ. ಅಲ್ಲದೆ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.