ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಆಯೋಗಕ್ಕೆ ವೀಸಾ ನಿರಾಕರಿಸಿದ ಭಾರತ ಸರ್ಕಾರ
ಭಾರತಕ್ಕೆ ಆಗಮಿಸಬೇಕಿದ್ದ ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗಕ್ಕೆ ಭಾರತ ಸರ್ಕಾರ ವಿಸಾ ನಿರಾಕರಿಸಿದೆ.

ವಾಷಿಂಗ್ ಟನ್: ಭಾರತಕ್ಕೆ ಆಗಮಿಸಬೇಕಿದ್ದ ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗಕ್ಕೆ ಭಾರತ ಸರ್ಕಾರ ವಿಸಾ ನಿರಾಕರಿಸಿದೆ.
ಅಮೆರಿಕದ ಆಯೋಗದ ನಿಯೋಗವೊಂದು ಅಲ್ಲಿನ ಸರ್ಕಾರ ಹಾಗೂ ನವೆದೆಹಲಿಯ ರಾಯಭಾರಿ ಕಚೇರಿಯ ನೆರವಿನೊಂದಿಗೆ ಮಾ.4 ರಂದು ಭಾರತಕ್ಕೆ ಹೊರಡಲಿತ್ತು. ಆದರೆ ಭಾರತ ಸರ್ಕಾರ ವೀಸಾ ನಿರಾಕರಿಸಿದೆ. ಭಾರತ ಸರ್ಕಾರದ ಕ್ರಮದಿಂದ ನಮಗೆ ನಿರಾಶೆಯಾಗಿದೆ, ಅಮೆರಿಕದ ನಿಕಟ ಸ್ನೇಹ ಹೊಂದಿರುವ ರಾಷ್ಟ್ರವಾಗಿರುವ ಭಾರತ ನಮ್ಮ ಭೇಟಿಗೆ ಅನುಮತಿ ನೀಡುವ ಭರವಸೆ ನೀಡಬೇಕಿತ್ತು ಎಂದು ಯು ಎಸ್ ಸಿಐ ಆರ್ ಎಫ್ ನ ಅಧ್ಯಕ್ಷ ರಾಬರ್ಟ್ ಜಾರ್ಜ್ ಹೇಳಿದ್ದಾರೆ.
ಧಾರ್ಮಿಕ ಸ್ವಾತಂತ್ರ್ಯ ಪಾಲಿಸದ ಪಾಕಿಸ್ತಾನ, ಸೌದಿ ಅರೇಬಿಯಾ, ವಿಯೆಟ್ನಾಮ್, ಚೀನಾ ಹಾಗೂ ಮಯನ್ಮಾರ್ ಸೇರಿದಂತೆ ಹಲವು ರಾಷ್ಟ್ರಗಳಿಗೆ ಭೇಟಿ ನೀಡಲು ಸಾಧ್ಯವಾಗಿದೆ, ಈ ಎಲ್ಲಾ ರಾಷ್ಟ್ರಗಳಿಗಿಂತಲೂ ಭಾರತದಲ್ಲಿ ಹೆಚ್ಚಿನ ಪಾರದರ್ಶಕತೆ ಇದೆ ಎಂಬ ನಿರೀಕ್ಷೆ ಇದೆ. ಭಾರತ ಸರ್ಕಾರ ತನ್ನ ನಿಲುವುಗಳನ್ನು ಯುಎಸ್ ಸಿ ಐ ಆರ್ ಎಫ್ ಗೆ ನೇರವಾಗಿ ತಿಳಿಸುವುದನ್ನು ಸ್ವಾಗತಿಸುತ್ತೇವೆ ಎಂದು ಜಾರ್ಜ್ ಹೇಳಿದ್ದಾರೆ.
ಈ ಘಟನೆ ಬಗ್ಗೆ ಅಮೆರಿಕಾದಲ್ಲಿರುವ ಭಾರತದ ರಾಯಭಾರಿ ಕಚೇರಿ ಪ್ರತಿಕ್ರಿಯೆ ನೀಡಿಲ್ಲ. 2015 ರಲ್ಲಿ ಭಾರತದ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ವರದಿ ನೀಡಿದ್ದ ಯು ಎಸ್ ಸಿಐ ಆರ್ ಎಫ್ ಸತತ ಮೂರುವರ್ಷಗಳಿಂದ ಕೋಮು ಹಿಂಸಾಚಾರ ಹೆಚ್ಚುತ್ತಿದೆ ಎಂದು ಹೇಳಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


