ಬಾಂಗ್ಲಾದೇಶ: ಐಸಿಸ್ ಶಂಕಿತ ಉಗ್ರರಿಂದ ಹಿಂದೂ ಅರ್ಚಕನ ಹತ್ಯೆ
ಪಶ್ಚಿಮ ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯದ ಅರ್ಚಕರೊಬ್ಬರನ್ನು ಶಂಕಿತ ಇಸ್ಲಾಮಿಕ್ ಉಗ್ರರು ಕೊಚ್ಚಿ ಕೊಂದಿದ್ದಾರೆ...

ಢಾಕಾ : ಪಶ್ಚಿಮ ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯದ ಅರ್ಚಕರೊಬ್ಬರನ್ನು ಶಂಕಿತ ಇಸ್ಲಾಮಿಕ್ ಉಗ್ರರು ಕೊಚ್ಚಿ ಕೊಂದಿದ್ದಾರೆ.
ಪಶ್ಚಿಮ ಬಾಂಗ್ಲಾದೇಶದ ಝೇನೈದಾಹ್ ಜಿಲ್ಲೆಯಲ್ಲಿರುವ ರಾಧಾ ಮದನ ಗೋಪಾಲ ಬಿಗ್ರಾಹ ಮಠದಲ್ಲಿ ಅರ್ಚಕ ಸೇವೆ ಸಲ್ಲಿಸುತ್ತಿರುವ 50ರ ಹರೆಯದ ಶ್ಯಾಮಾನಂದ ದಾಸ್ ಅವರು ದೇವಳಕ್ಕೆ ತಾಗಿಕೊಂಡಿರುವ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ಮೂವರು ಶಂಕಿತ ಉಗ್ರರು ಅವರನ್ನು ಹರಿತವಾದ ಆಯುಧದಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ಯಾಮಾನಂದ ದಾಸ್ ಅವರ ಕುತ್ತಿಗೆಗೆ ಮೂರು ಬಾರಿ ಮತ್ತು ತಲೆಗೆ ಒಂದು ಬಾರಿ ಉಗ್ರರು ಕತಿಯಿಂದ ಬಲವಾಗಿ ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ಒಡನೆಯೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಅವರು ಕೊನೆಯುಸಿರೆಳೆದರು ಎಂದು ಜಿಲ್ಲಾ ಪೊಲೀಸ್ ಉಪ ಮುಖ್ಯಸ್ಥ ಗೋಪಿನಾಥ ಕಂಜೀಲಾಲ್ ಹೇಳಿದರು. ಹತ್ಯೆಗೀಡಾಗಿರುವ ದಾಸ್ ಅವರು ದೇವಸ್ಥಾನದಲ್ಲಿ ಅರ್ಚಕರಾಗಿದ್ದರೂ ಜನರು ಅವರನ್ನು ಬಾಬಾ ಎಂದೇ ಕರೆಯುತ್ತಿದ್ದರು ಎಂದವರು ತಿಳಿಸಿದ್ದಾರೆ.
ಆದರೆ ಸ್ಥಳೀಯ ಪೊಲೀಸ್ ಮುಖ್ಯಸ್ಥರಾಗಿರುವ ಇನ್ಸ್‌ಪೆಕ್ಟರ್ ಹಸನ್ ಹಫೀಜುರ್ ರೆಹಮಾನ್ ಅವರು "50ರ ಹರೆಯದ ದಾಸ್ ಅವರು ದೇವಸ್ಥಾನದ ಒಬ್ಬ ಸ್ವಯಂಸೇವಕರಾಗಿದ್ದು ಪೂಜೆ ಇತ್ಯಾದಿಗಳನ್ನು ನಡೆಸಲು ನೆರವಾಗುತ್ತಿದ್ದರು' ಎಂದು ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಕಳೆದ ಮೂರು ವರ್ಷಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು, ಪ್ರಗತಿಪರ ಚಿಂತಕರು, ಲೇಖಕರು ಸೇರಿದಂತೆ ಕನಿಷ್ಠ 50 ಮಂದಿ ಬಲಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


