ವಿದೇಶ

ಅಮೆರಿಕಾದಲ್ಲಿ ತನ್ನ ಪರ ಲಾಬಿ ನಡೆಸುವ ನೂತನ ಸಂಸ್ಥೆಯ ಹುಡುಕಾಟದಲ್ಲಿ ಪಾಕಿಸ್ತಾನ

ಯುದ್ಧ ವಿಮಾನ ಎಫ್ 16 ಮಾರಾಟದಲ್ಲಿ ಪಾಕಿಸ್ತಾನಕ್ಕೆ ಸಬ್ಸಿಡಿ ನೀಡಲು ವಾಷಿಂಗ್ಟನ್ ನಿರಾಕರಿಸಿದ ಮತ್ತು ಎನ್ ಎಸ್ ಜಿಗೆ ಭಾರತವನ್ನು ಸೇರಿಸಿಕೊಳ್ಳಲು ಸಹಾಯಹಸ್ತ ಚಾಚಿದ ನಡೆಗಳಿಂದ

ಅಮೆರಿಕಾದಲ್ಲಿ ತನ್ನ ಪರ ಲಾಬಿ ನಡೆಸುವ ನೂತನ ಸಂಸ್ಥೆಯ ಹುಡುಕಾಟದಲ್ಲಿ ಪಾಕಿಸ್ತಾನ
ಸಾಂದರ್ಭಿಕ ಚಿತ್ರ
Published On :
ವಾಷಿಂಗ್ಟನ್: ಯುದ್ಧ ವಿಮಾನ ಎಫ್ 16 ಮಾರಾಟದಲ್ಲಿ ಪಾಕಿಸ್ತಾನಕ್ಕೆ ಸಬ್ಸಿಡಿ ನೀಡಲು ವಾಷಿಂಗ್ಟನ್ ನಿರಾಕರಿಸಿದ ಮತ್ತು ಎನ್ ಎಸ್ ಜಿಗೆ ಭಾರತವನ್ನು ಸೇರಿಸಿಕೊಳ್ಳಲು ಸಹಾಯಹಸ್ತ ಚಾಚಿದ ನಡೆಗಳಿಂದ ಕಳವಳಗೊಂಡಿರುವಂತೆ ಕಾಣುವ ಪಾಕಿಸ್ತಾನ ತನ್ನ ಪರವಾಗಿ ಅಮೆರಿಕಾದಲ್ಲಿ ಲಾಬಿ ಮಾಡಬಲ್ಲ ಸಂಸ್ಥೆಗಾಗಿ ಹುಡುಕಾಟ ನಡೆಸಿದೆ ಎಂದು ಸೋಮವಾರ ವರದಿಯಾಗಿದೆ.
ಪಾಕಿಸ್ತಾನ ರಾಯಭಾರ ಕಚೇರಿಯ ವಕ್ತಾರ ನದೀಮ್ ಹೋಟಿಯಾನಾ, ಇಸ್ಲಾಮಾಬಾದ್ ಲಾಬಿ ಸಂಸ್ಥೆಗಾಗಿ ಹುಡುಕಾಟ ನಡೆಸುತ್ತಿರುವುದನ್ನು ಡಾನ್ ಪತ್ರಿಕೆಗೆ ಧೃಢೀಕರಿಸಿದ್ದು ಇನ್ನು ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ಕೂಡ ತಿಳಿಸಿದ್ದಾರೆ. 
ಇತ್ತೀಚಿನ ಎರಡು ರಾಜತಾಂತ್ರಿಕ ವೈಫಲ್ಯಗಳಿಂದ ಈ ನಿರ್ಧಾರಕ್ಕೆ ಪಾಕಿಸ್ತಾನ ಮುಂದಾಗಿದೆ ಎಂದು ದಿನಪತ್ರಿಕೆ ಹೇಳಿದೆ. 
ಅಮೆರಿಕಾದ ಜಸ್ಟಿಸ್ ಇಲಾಖೆಯ ದಾಖಲೆಗಳ ಪ್ರಕಾರ ವಾಷಿಂಗ್ಟನ್ ನಲ್ಲಿ ಪಾಕಿಸ್ತಾನದ ಪರ ಲಾಬಿ ಮಾಡಿದ ಕೊನೆಯ ಕಾನೂನು ಸಂಸ್ಥೆ ಲಾಕ್ ಲಾರ್ಡ್ ಸ್ಟ್ರ್ಯಾಟೆಜಿಸ್ ಎಂದು ಡಾನ್ ವರದಿ ಮಾಡಿದೆ. 
ಇಸ್ಲಮಾಬಾದ್ ನಲ್ಲಿ ನೂತನ ಸರ್ಕಾರ ಅಧಿಕಾರ ಸ್ವೀಕರಿಸಿದ ಒಂದು ತಿಂಗಳ ನಂತರ ಜೂನ್ 2013 ರಲ್ಲಿ ಈ ಸಂಸ್ಥೆಯ ಜೊತೆಗೆ ಒಪ್ಪಂದವನ್ನು ನವೀಕರಿಸಲು ವಿಫಲವಾಗಿತ್ತು. 
ಅಲ್ಲಿಯವರೆಗೂ ಪಾಕಿಸ್ತಾನ ರಾಯಭಾರಿ ಕಚೇರಿ ಈ ಲಾಬಿ ಸಂಸ್ಥೆಗೆ ತಿಂಗಳಿಗೆ 75 ಸಾವಿರ ಅಮೆರಿಕನ್ ಡಾಲರ್ ಮೊತ್ತದ ರಾಯಧನವನ್ನು ನೀಡುತ್ತಿತ್ತು ಎಂದು ತಿಳಿದುಬಂದಿದೆ.
ಈ ಸಂಸ್ಥೆಯ ಪ್ರಭಾವ ಕಡಿಮೆಯಾಗಿದ್ದರಿಂದ ಮತ್ತು ಅಮೆರಿಕಾ ಮಾಧ್ಯಮಗಳಲ್ಲಿ ಪಾಕಿಸ್ತಾನದ ಪರವಾಗಿ ಪರಿಣಾಮಕಾರಿಯಾಗಿ ಲಾಬಿ ಮಾಡಲು ವಿಫಲವಾಗಿದ್ದರಿಂದ, ಈ ಕೆಲಸವನ್ನು ತಾವೇ ಮಾಡುವಂತೆ ಪಾಕಿಸ್ತಾನಿ ರಾಯಭಾರ ಅಧಿಕಾರಿಗಳಿಗೆ ಪ್ರಧಾನಿ ನವಾಜ್ ಷರೀಫ್ ಸೂಚಿಸಿದ್ದರು ಎಂದು ಕೂಡ ಡಾನ್ ವರದಿ ಮಾಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.