ಕಾಬುಲ್ ನಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟ; ೧೪ ಸಾವು
ಆಪ್ಘಾನಿಸ್ಥಾನದ ರಾಜಧಾನಿ ಕಾಬುಲ್ ನಲ್ಲಿ ಭದ್ರಾತಾ ಪಡೆ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಮಿನಿ ಬಸ್ ಗೆ ಆತ್ಮಹತ್ಯಾ ಬಾಂಬ್ ಇರಿಸಿದ್ದ ಕಾರ್ ಢಿಕ್ಕಿ ಹೊಡೆದ ಪರಿಣಾಮ ೧೪ ಜನ ಮೃತಪಟ್ಟಿದ್ದಾರೆ

ಕಾಬುಲ್: ಆಪ್ಘಾನಿಸ್ಥಾನದ ರಾಜಧಾನಿ ಕಾಬುಲ್ ನಲ್ಲಿ ಭದ್ರಾತಾ ಪಡೆ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಮಿನಿ ಬಸ್ ಗೆ ಆತ್ಮಹತ್ಯಾ ಬಾಂಬ್ ಇರಿಸಿದ್ದ ಕಾರ್ ಢಿಕ್ಕಿ ಹೊಡೆದ ಪರಿಣಾಮ ೧೪ ಜನ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
"ಬೆಳಗ್ಗೆ ಸುಮಾರು ೬:೩೦ ಕ್ಕೆ ಬಸ್ಸು ಜನನಿಬಿಡ ಪ್ರದೇಶ ಪುಲ್-ಎ-ಚರ್ಕಿ ಬಳಿ ಚಲಿಸುತ್ತಿದ್ದಾಗ, ಸ್ಫೋಟಕಗಳನ್ನು ಹೊತ್ತಿದ್ದ ಕಾರು ಬಸ್ಸಿಗೆ ಢಿಕ್ಕಿ ಹೊಡೆದು ಭಾರಿ ಸ್ಫೋಟ ಉಂಟಾಯಿತು" ಎಂದು ಅಲ್ಲಿ ನೆರೆದಿದ್ದ ಪ್ರತ್ಯಕ್ಷದರ್ಶಿ ಫರ್ಹದ್ ಮೊಹಮ್ಮದಿ ತಿಳಿಸಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ.
"ಮೃತಪಟ್ಟವರಲ್ಲಿ ಬಹುತೇಕರು ಬಸ್ಸಿನಲ್ಲಿದ್ದ ವಿದೇಶಿ ಭದ್ರತಾ ಸಿಬ್ಬಂದಿ. ಸದ್ಯಕೆ ಸಿಕ್ಕಿರುವ ಮಾಹಿತಿ ಪ್ರಕಾರ ಅವರು ನೇಪಾಳದವರು" ಎಂದು ಭದ್ರತಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ದಾಳಿಯಲ್ಲಿ ೨೫ ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


