ವಿದೇಶ

ದಕ್ಷಿಣ ಚೀನಾ ಸಮುದ್ರದಾಳದಲ್ಲಿ ಚೀನಾದಿಂದ ಬೃಹತ್ ಪ್ರಯೋಗಾಲಯ!

ದಕ್ಷಿಣ ಚೀನಾ ಸಮುದ್ರದ ಮೇಲೆ ತನ್ನ ಪ್ರಾಬಲ್ಯ ಸ್ಥಾಪಿಸಲು ಹವಣಿಸುತ್ತಿರುವ ಚೀನಾ ಇದೀಗ ಬೃಹತ್ ಯೋಜನೆಯೊಂದಕ್ಕೆ ಮುಂದಾಗಿದ್ದು, ವಿವಾದತಿ ದಕ್ಷಿಣ ಚೀನಾ ಸಮುದ್ರದಾಳದಲ್ಲಿ ಬೃಹತ್ ಪ್ರಯೋಗಾಲಯ ಸ್ಥಾಪನೆಗೆ ಮುಂದಾಗಿದೆ.

ದಕ್ಷಿಣ ಚೀನಾ ಸಮುದ್ರದಾಳದಲ್ಲಿ ಚೀನಾದಿಂದ ಬೃಹತ್ ಪ್ರಯೋಗಾಲಯ!
ದಕ್ಷಿಣ ಚೀನಾ ಸಮುದ್ರ (ಸಂಗ್ರಹ ಚಿತ್ರ)
Published On :

ಬೀಜಿಂಗ್‌: ದಕ್ಷಿಣ ಚೀನಾ ಸಮುದ್ರದ ಮೇಲೆ ತನ್ನ ಪ್ರಾಬಲ್ಯ ಸ್ಥಾಪಿಸಲು ಹವಣಿಸುತ್ತಿರುವ ಚೀನಾ ಇದೀಗ ಬೃಹತ್ ಯೋಜನೆಯೊಂದಕ್ಕೆ ಮುಂದಾಗಿದ್ದು, ವಿವಾದತಿ ದಕ್ಷಿಣ ಚೀನಾ  ಸಮುದ್ರದಾಳದಲ್ಲಿ ಬೃಹತ್ ಪ್ರಯೋಗಾಲಯ ಸ್ಥಾಪನೆಗೆ ಮುಂದಾಗಿದೆ.

ದಕ್ಷಿಣ ಚೀನಾ ಸಮುದ್ರದಲ್ಲಿನ ನೈಸರ್ಗಿಕ ಸಂಪತ್ತನ್ನು ಅಧ್ಯಯನ ಮಾಡುವ ನೆಪ ನೀಡಿರುವ ಚೀನಾ ಸರ್ಕಾರ ಬರೊಬ್ಬರಿ 9800 ಅಡಿ ಆಳದಲ್ಲಿ ಬೃಹತ್ ಪ್ರಯೋಗಾಲಯವೊಂದನ್ನು ಸ್ಥಾಪಿಸ  ಹೊರಟಿದೆ. ಮೂಲಗಳ ಪ್ರಕಾರ ವಿವಾದಿತ ದಕ್ಷಿಣ ಚೀನಾ ಸಮುದ್ರದ ಮೇಲೆ ಹತೋಟಿ ಸಾಧಿಸುವ ಉದ್ದೇಶದಿಂದಲೇ ಚೀನಾ ಸರ್ಕಾರ ಈ ಪ್ರದೇಶದಲ್ಲಿ ಪ್ರಯೋಗಾಲಯಕ್ಕೆ ಮುಂದಾಗಿದ್ದು,  ಚೀನಾ ನಡೆಯನ್ನು ಅಮೆರಿಕ ನೇರವಾಗಿ ವಿರೋಧಿಸಿದೆ.

ವಿವಾದಿತ ಪ್ರದೇಶ ಎಲ್ಲರಿಗೂ ಸೇರಿದ್ದಾಗಿದ್ದು, ಇಲ್ಲಿ ಚೀನಾ ನೈಸರ್ಗಿಕ ಸಂಪತ್ತನ್ನು ಅಧ್ಯಯನ ಮಾಡುವ ನೆಪ ನೀಡಿ ಸೇನಾ ನೆಲೆಯನ್ನು ಸ್ಥಾಪಿಸುತ್ತಿದೆ. ಆದರೆ ಇದರ ನೈಜ ಉದ್ದೇಶ ಅಮೆರಿಕ  ಮತ್ತು ತನ್ನ ಇತರ ವಿರೋಧಿಗಳನ್ನು ಬಗ್ಗುಬಡಿಯಲು ಸೇನಾ ನೆಲೆ ಸ್ಥಾಪಿಸುವುದು ಎಂದು ಅಮೆರಿಕಾ ಆರೋಪಿಸಿದೆ. ಅಲ್ಲದೆ ಈಗಾಗಲೇ ಅಮೆರಿಕ ಈ ವಿವಾದಿತ ಜಲ ಪ್ರದೇಶದಲ್ಲಿ ತನ್ನ ದೊಡ್ಡ  ಹಡಗುಗಳನ್ನು ಇರಿಸಿದೆ.

ಇನ್ನು ಚೀನಾ ತನ್ನ ವಿರೋಧಿ ದೇಶಗಳಾದ ಅಮೆರಿಕ ಮತ್ತು ರಷ್ಯಾದ ಜಲಾಂತರ್ಗಾಮಿಗಳನ್ನು ಹಿಮ್ಮೆಟ್ಟಿಸುವ ಉದ್ದೇಶ ಹೊಂದಿದ್ದು, ಇದಕ್ಕೆಂದೇ ಸಮುದ್ರ ತಳದಲ್ಲೇ ಮಹಾಗೋಡೆ  ನಿರ್ಮಿಸುವ ಗುರಿ ಇಟ್ಟುಕೊಂಡಿದೆ. ಹೀಗಾಗಿ ಸೇನಾ ಉದ್ದೇಶಕ್ಕೆ ಇಂಥ ಯತ್ನಕ್ಕೆ ಅದು ಕೈಹಾಕಿರಬಹುದು ಎಂದು ಹೇಳಲಾಗುತ್ತಿದೆ.

ವೈಜ್ಞಾನಿಕ ಮೂಲಗಳ ಪ್ರಕಾರ ಈ ವಿವಾದಿತ ಪ್ರದೇಶದಲ್ಲಿ ಅಪಾರ ಪ್ರಮಾಣದ ಇಂಧನ ಮೂಲವಿದ್ದು, ವಿಜ್ಞಾನಿಗಳ ಪ್ರಕಾರ ಈ ಸಮುದ್ರದಲ್ಲಿ ಸುಮಾರು 115 ಶತಕೋಟಿ ಬ್ಯಾರಲ್‌ ತೈಲ  ಮತ್ತು 500 ಲಕ್ಷ ಕೋಟಿ ಕ್ಯೂಬಿಕ್‌ ಫೀಟ್‌ ನೈಸರ್ಗಿಕ ಅನಿಲ ಇದೆ ಎಂದು ಅದು ಅಂದಾಜಿಸಿದೆ. ಅಲ್ಲದೆ ಈ ಮಾರ್ಗದ ಮೂಲಕವೇ ವಿಶ್ವದ ಪ್ರಮುಖ ದೇಶಗಳ ಸಂಪರ್ಕ ಸುಲಭವಾಗಿದ್ದು,  ಯಾವ ದೇಶ ಈ ಮಾರ್ಗವನ್ನು ತನ್ನ ಕೈವಶ ಮಾಜಿಕೊಳ್ಳಲಿದೆಯೇ ಆ ದೇಶಕ್ಕೆ ಬೃಹತ್ ಪ್ರಮಾಣದಲ್ಲಿ ಆದಾಯ ಸಾಧ್ಯವಿದೆ. ಇದೇ ಕಾರಣಕ್ಕಾಗಿ ಚೀನಾ ಇಲ್ಲಿ ಪ್ರಾಬಲ್ಯ ಮರೆಯಲು  ದಶಕಗಳಿಂದ ಯತ್ನಿಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.