ಅಮೆರಿಕದ ಆವಿಷ್ಕಾರ, ಭಾರತದ ಮಾನವ ಸಂಪನ್ಮೂಲ, ಇಬ್ಬರಿಗೂ ಗೆಲುವಿನ ಸಹಭಾಗಿತ್ವ: ಮೋದಿ
ಆವಿಷ್ಕಾರ ಮತ್ತು ಭಾರತದ ಮಾನವ ಸಂಪನ್ಮೂಲ ಬಳಸಿಕೊಂಡು ಪಾಲುದಾರಿಕೆ ಮೂಲಕ ಹೂಡಿಕೆ ಮಾಡುವಂತೆ...

ವಾಷಿಂಗ್ಟನ್: ಅಮೆರಿಕಾದ ಆವಿಷ್ಕಾರ ಮತ್ತು ಭಾರತದ ಮಾನವ ಸಂಪನ್ಮೂಲ ಬಳಸಿಕೊಂಡು ಪಾಲುದಾರಿಕೆ ಮೂಲಕ ಹೂಡಿಕೆ ಮಾಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಮೆರಿಕದ ಕಂಪೆನಿಗಳಿಗೆ ಆಹ್ವಾನ ನೀಡಿದ್ದಾರೆ.
ಅಮೆರಿಕ-ಭಾರತ ವ್ಯಾಪಾರ ಮಂಡಳಿಯ ಕೂಟದಲ್ಲಿ ಮಾತನಾಡಿದ ಅವರು, ಶ್ರೀಮಂತ ದೇಶಗಳು ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ದೇಶಗಳಿಂದ ಸರಕು ಮತ್ತು ಸೇವೆಗಳನ್ನು ಬಳಸಿಕೊಂಡು ಇಡೀ ವಿಶ್ವದಲ್ಲಿ ವಿಶ್ವದರ್ಜೆ ಮಟ್ಟದ ವಾಣಿಜ್ಯ ಕೇಂದ್ರವನ್ನು ತೆರೆಯಬಹುದು ಎಂದರು.
ಮುಂದಿನ ದಿನಗಳಲ್ಲಿ ಭಾರತ ವಿಶ್ವದಲ್ಲಿಯೇ ಉತ್ತಮ ಮಾನವ ಸಂಪನ್ಮೂಲ ಹೊಂದಿರುವ ದೇಶವಾಗಲಿದೆ. ಇಲ್ಲಿ ಅಪಾರವಾದ ಯುವಶಕ್ತಿಯಿದೆ. ಹೀಗಾಗಿ ಅಮೆರಿಕನ್ ಕಂಪೆನಿಗಳ ನಾವೀನ್ಯತೆ ಮತ್ತು ಭಾರತೀಯ ಮಾನವ ಸಂಪನ್ಮೂಲ ಮತ್ತು ಉದ್ಯಮಶೀಲತೆಗಳ ನಡುವೆ ಸಹಭಾಗಿತ್ವ ಉತ್ತಮ ಶಕ್ತಿಶಾಲಿಯಾಗಲಿದೆ ಎಂದರು.
ಈ ವಾಣಿಜ್ಯ ಕೂಟದಲ್ಲಿ ಉನ್ನತ ಕಂಪೆನಿಗಳಾದ ಪೆಪ್ಸಿಕೋ, ಮಾಸ್ಟರ್ ಕಾರ್ಡ್, ವಾರ್ಬರ್ಗ್ ಪಿಂಕಸ್, ಲೊಕೀದ್ ಮಾರ್ಟಿನ್, ವೆಸ್ಟಿಂಗ್ ಹೌಸ್, ಇಂಟೆಲ್ ಸಾಟ್, ಎಮರ್ಸನ್ ಮತ್ತು 8 ಮಿನ್ಯುಟ್ ಎನರ್ಜಿ ಕಂಪೆನಿಗಳು ಭಾಗವಹಿಸಿದ್ದವು.
ತಮ್ಮ ಸರ್ಕಾರ ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಬಲಪಡಿಸಲಿದೆ. ಊಹಿಸಲು ಸಾಧ್ಯವಾಗುವಂತೆ ತೆರಿಗೆ ಯೋಜನೆಗಳನ್ನು ತರಲಿದ್ದೇವೆ ಎಂದು ಪ್ರಧಾನಿ ಹೇಳಿದರು.
ತಮ್ಮ ಮಾತಿನಲ್ಲಿ ಭಾರತದ ರಕ್ಷಣಾ ವಲಯದ ಬಗ್ಗೆ ಪ್ರಸ್ತಾಪ ಮಾಡಿದ ಅವರು, ರಕ್ಷಣಾ ವಲಯದಲ್ಲಿ ಮುಂದಿನ ದಿನಗಳಲ್ಲಿ ದೇಶೀಯ ಮತ್ತು ಸಾಗರೋತ್ತರ ಹೂಡಿಕೆಗೆ ಹೆಚ್ಚು ಅವಕಾಶ ಮಾಡಿಕೊಡಲಾಗುವುದು ಎಂದರು.
ವೆಸ್ಟಿಂಗ್ ಹೌಸ್ ನಿಂದ 6 ಪರಮಾಣು ರಿಯಾಕ್ಟರ್ ಗಳನ್ನು ಖರೀದಿಸಲಾಗುವುದು ಎಂದ ಪ್ರಧಾನಿ, ಇದು ಪರಮಾಣು ಮತ್ತು ವಿಜ್ಞಾನ ಸಹಕಾರದಲ್ಲಿ ಹೊಸ ಯುಗವನ್ನು ಸೃಷ್ಟಿಸಲಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


