ಚೀನಾದ ‘ಡಂಪ್ ವಿತ್ ಟ್ರಂಪ್' ಟಾಯ್ಲೆಟ್ ಪೇಪರ್ ’ಗೆ ಅಮೆರಿಕಾದಲ್ಲಿ ಭಾರಿ ಬೇಡಿಕೆ
ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿ ಮಾಡುತ್ತಿರುವ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು...

Published On :
ನ್ಯೂಯಾರ್ಕ್: ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿ ಮಾಡುತ್ತಿರುವ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಈ ಬಾರಿ ‘ಡಂಪ್ ವಿತ್ ಟ್ರಂಪ್' ಟಾಯ್ಲೆಟ್ ಪೇಪರ್ ನಿಂದ ಸುದ್ದಿಯಾಗಿದ್ದಾರೆ.
ಸದಾ ಚೀನಾ ವಿರುದ್ಧ ಹರಿಹಾಯುತ್ತಿದ್ದ ಟ್ರಂಪ್ ಗೆ ಬುದ್ದಿಕಲಿಸಬೇಕೆಂದು ನಿರ್ಧರಿಸಿದ ಚೀನಾ ಮೂಲದ ಕಂಪೆನಿಗಳು ಟ್ರಂಪ್ ಹೆಸರಿನ ಟಾಯ್ಲಟ್ ಪೇಪರ್ ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.
ಕಳೆದ ಫೆಬ್ರವರಿಯಿಂದ ಚೀನಾ ಕಂಪನಿಗಳು ಈ ಟಾಯ್ಲೆಟ್ ಪೇಪರ್ ತಯಾರು ಮಾಡುತ್ತಿದ್ದು, ಯೂಸ್ ಆ್ಯಂಡ್ ಥ್ರೋ ಪೆಪರ್ ನಲ್ಲಿ ಟ್ರಂಪ್ ಅವರ ಮುಖದ ವಿವಿಧ ಭಾವಾಚಿತ್ರಗಳನ್ನು ಮುದ್ರಿಸಿದ್ದಾರೆ. ಅಲ್ಲದೆ ಅದರ ಮೇಲೆ ಡಂಪ್ ವಿತ್ ಟ್ರಂಪ್ ಎಂಬ ಘೋಷಣೆಯನ್ನು ಮುದ್ರಿಸಲಾಗಿದೆ. ಈಗ ಅಮೆರಿಕದಲ್ಲಿ ಈ ಟಾಯ್ಲಟ್ ಪೇಪರ್ ಗೆ ಅತಿ ಹೆಚ್ಚಿನ ಬೇಡಿಕೆ ಇದೆ.
ಟಾಯ್ಲೆಟ್ ಪೇಪರ್ ಗಳನ್ನು ತಯಾರಿಸುವ ಕಂಪೆನಿಗಳಲ್ಲೊಂದಾದ ಕಿಂಗ್ಡೋ ಎಂಬ ಕಂಪೆನಿಯ ಸುಮಾರು 5000 ಸಾವಿರ ಪೇಪರ್ ಗಳಿಗೆ ಜನ ಕಾಯ್ದಿರಿಸಿದ್ದಾರೆ. ಚೀನಾದ ಈ-ಕಾಮರ್ಸ್ ವ್ಯವಹಾರದಲ್ಲೂ ಜನ ಇದನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ ಎಂದು ಸೋಮವಾರ ವರದಿ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


