ಸೆಕ್ಸ್ ಗೆ ನಿರಾಕರಿಸಿದ 19 ಯಜಿದಿ ಯುವತಿಯರನ್ನು ಜೀವಂತ ಸುಟ್ಟ ಇಸಿಸ್!
ಇಸ್ಲಾಮಿಕ್ ಸ್ಟೇಟ್ ಉಗ್ರರ ಬೀಭತ್ಸ ಕೃತ್ಯಗಳು ಮುಂದುವರೆದಿದ್ದು, ಉಗ್ರಗಾಮಿಗಳೊಂದಿಗೆ ಸೆಕ್ಸ್ ನಡೆಸಲು ನಿರಾಕರಿಸಿದ 19 ಯಜಿದಿ ಯುವತಿಯರನ್ನು ಸಾರ್ವಜನಿಕವಾಗಿ ಜೀವಂತ ಸುಟ್ಟು ಹಾಕಲಾಗಿದೆ...

ಮೊಸುಲ್: ಇಸ್ಲಾಮಿಕ್ ಸ್ಟೇಟ್ ಉಗ್ರರ ಬೀಭತ್ಸ ಕೃತ್ಯಗಳು ಮುಂದುವರೆದಿದ್ದು, ಉಗ್ರಗಾಮಿಗಳೊಂದಿಗೆ ಸೆಕ್ಸ್ ನಡೆಸಲು ನಿರಾಕರಿಸಿದ 19 ಯಜಿದಿ ಯುವತಿಯರನ್ನು ಸಾರ್ವಜನಿಕವಾಗಿ ಜೀವಂತ ಸುಟ್ಟು ಹಾಕಲಾಗಿದೆ.
ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳ ಕಪಿಮುಷ್ಠಿಯಲ್ಲಿರುವ ಮೊಸುಲ್ ನಗರದಲ್ಲಿ ಈ ಧಾರುಣ ಘಟನೆ ನಡೆದಿದ್ದು, ಕಬ್ಬಿಣದ ಪಂಜರದಳೊಗಿದ್ದ 19 ಮಂದಿ ಯುವತಿಯರ ಮೇಲೆ ಸಾರ್ವಜನಿಕವಾಗಿಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ ಎಂದು ತಿಳಿದುಬಂದಿದೆ.
ಕುರ್ದಿಷ್ ಮೂಲದ ಅರಾ ಪತ್ರಿಕೆಯ ಅಬ್ದುಲ್ಲಾ ಅಲ್ ಮಲಾ ಎಂಬ ಪತ್ರಕರ್ತ ಈ ಬಗ್ಗೆ ವರದಿ ಮಾಡಿದ್ದು, ಈ ಹಿಂದೆ ಮೊಸುಲ್ ನಗರಕ್ಕೆ ಉಗ್ರರು ಹೊತ್ತು ತಂದಿದ್ದ ಯಜಿದಿ ಯುವತಿಯರನ್ನು ಲೈಂಗಿಕ ಗುಲಾಮರನ್ನಾಗಿ ಮಾಡಿಕೊಳ್ಳಲಾಗಿತ್ತು. ಉಗ್ರರೊಂದಿಗಿನ ಲೈಂಗಿಕತೆಗೆ ನಿರಾಕರಿಸಿದ ಯುವತಿಯರನ್ನು ಕಬ್ಬಿಣದ ಪಂಜರದೊಳಗೆ ಹಾಕಿ, ಮೊಸುಲ್ ನಗರದ ಪ್ರಮುಖ ವೃತ್ತಕ್ಕೆ ಕರೆತಂದು ಸಾವಿರಾರು ಜನರ ಮುಂದೆಯೇ ಜೀವಂತವಾಗಿ ಸುಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಅಂತೆಯೇ ಉಗ್ರರ ಈ ಬೀಭತ್ಸ ಕೃತ್ಯಕ್ಕೆ ಅಲ್ಲಿ ನೆರೆದಿದ್ದ ನೂರಾರು ಮಂದಿ ಕೇವಲ ಮೂಕ ಪ್ರೇಕ್ಷಕರಾಗಿದ್ದರೇ ಹೊರತು ಯಾರೊಬ್ಬರೂ ಕೂಡ ಈ ಬಗ್ಗೆ ವಿರೋಧಿಸುವ ಗೋಜಿಗೇ ಹೋಗಲಿಲ್ಲ ಎಂದು ವರದಿಯಲ್ಲಿ ಪತ್ರಕರ್ತ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾನೆ.
2014ರಲ್ಲಿ ವಾಯುವ್ಯ ಇರಾಕ್ ನ ಸಿಂಜಾರ್ ಪ್ರಾಂತ್ಯದಿಂದ ಇಸ್ಲಾಮಿಕ್ ಉಗ್ರರು ಸುಮಾರು 4000 ಕ್ಕೂ ಅಧಿಕ ಯಜಿದಿ ಮಹಿಳೆಯರನ್ನು ಅಪಹರಿಸಿದ್ದು, ಈ ಪೈಕಿ ನೂರಾರು ಮಹಿಳೆರನ್ನು ಲೈಂಗಿಕ ಗುಲಾಮರನ್ನಾಗಿ ಮಾಡಿಕೊಂಡು ಬಳಿಕ ಹರಾಜು ಮಾಡಲಾಗಿತ್ತು. ಅಂತೆಯೇ ಉಗ್ರರೊಂಗಿನ ಲೈಂಗಿಕ ಕ್ರಿಯೆ ವಿರೋಧಿಸಿದ ನೂರಾರು ಮಹಿಳೆಯರನ್ನು ಅಮಾನುಷವಾಗಿ ಕೊಲ್ಲಲಾಗಿದೆ. ಇಂದಿಗೂ ಸಾವಿರಾರು ಯುವತಿಯರು ಉಗ್ರರ ಕಪಿಮುಷ್ಠಿಯಲ್ಲಿದ್ದು, ಉಗ್ರರ ಹಿಡಿತದಲ್ಲಿರುವ ಮೊಸುಲ್ ನಗರದಲ್ಲಿ ಲೈಂಗಿಕ ಗುಲಾಮರಿಗಾಗಿಯೇ ದೊಡ್ಡ ಕ್ಯಾಂಪ್ ಅನ್ನು ನಿರ್ಮಿಸಲಾಗಿದೆಯಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


